ನವದೆಹಲಿ: ಕೇಂದ್ರ ಬಜೆಟ್ನಲ್ಲಿ (Union Budget) ಮಧ್ಯಮವರ್ಗ ಮತ್ತು ವೇತನಜೀವಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. 12 ಲಕ್ಷ ಆದಾಯದವರೆಗೂ ಯಾವುದೇ ತೆರಿಗೆ (Tax) ಪಾವತಿ ಮಾಡುವ ಅಗತ್ಯವಿಲ್ಲದೇ ರಿಬೆಟ್ ಪ್ರಕಟಿಸಲಾಗಿದೆ.
ಬಜೆಟ್ನಲ್ಲಿ ಆದಾಯ ತೆರಿಗೆ ಸ್ಲಾಬ್ಗಳನ್ನು ಬದಲಿಸಲಾಗಿದೆ. ಇದಕ್ಕೆ 75ಸಾವಿರ ಸ್ಟಾಂಡರ್ಡ್ ಡಿಡಕ್ಷನ್ (Standard deduction) ಸೇರಿಸಿದರೆ 12.75 ಲಕ್ಷ ರೂಪಾಯಿಗೆ ತೆರಿಗೆ ಇರುವುದಿಲ್ಲ. ಆದರೆ ಷೇರು ಮತ್ತು ಸಾಲಪತ್ರಗಳಿಂದ ಬರುವ ಕ್ಯಾಪಿಟಲ್ ಗೈನ್ಸ್ ಪ್ರತ್ಯೇಕ ಆದಾಯ ಹೊರತುಪಡಿಸಿ ಸರಾಸರಿ ತಿಂಗಳಿಗೆ 1 ಲಕ್ಷ ರೂ. ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟಬೇಕಿಲ್ಲ.
Advertisement
Advertisement
ಕೇಂದ್ರದ ಈ ನಿರ್ಧಾರದಿಂದ ಸುಮಾರು 1 ಕೋಟಿ ಮಂದಿಗೆ ಅನುಕೂಲ ಆಗಲಿದೆ. ಹಳೆ ತೆರಿಗೆ ವಿಧಾನವನ್ನು ನಿರ್ಮಲಾ ಸೀತಾರಾಮನ್ ಮುಟ್ಟಲು ಹೋಗಿಲ್ಲ. ಈ ಮೂಲಕ ಜನರು ಸ್ವಯಂಪ್ರೇರಿತವಾಗಿ ಹೊಸ ತೆರಿಗೆ ಸ್ಲ್ಯಾಬ್ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ. ಜನರ ಕೈಯಲ್ಲಿ ನಗದು ಹೆಚ್ಚಿಸಲು, ಹೊಸ ತೆರಿಗೆ ವಿಧಾನವನ್ನು ಆಕರ್ಷಣಿಯವಾಗಿಸಲು ಈ ನಿರ್ಣಯವನ್ನು ಕೇಂದ್ರ ತೆಗೆದುಕೊಂಡಿದೆ.
Advertisement
ಕೇಂದ್ರದ ಈ ಐತಿಹಾಸಿಕ ನಿರ್ಧಾರದಿಂದ ಮಧ್ಯಮ ವರ್ಗದ ಈ ಉಳಿಕೆ ಆದಾಯ ಮ್ಯೂಚುವಲ್ ಫಂಡ್, ಸ್ಟಾಕ್ ಮಾರ್ಕೆಟ್, ರಿಯಲ್ ಎಸ್ಟೇಟ್ ರಂಗಕ್ಕೆ ಬಿಗ್ ಬೂಸ್ಟ್ ಸಿಗುವ ಸಾಧ್ಯತೆಯಿದೆ.
Advertisement
12 ಲಕ್ಷಕ್ಕೆ ಯಾವುದೇ ತೆರಿಗೆ ಇಲ್ಲ ಹೇಗೆ?
ನಿಮ್ಮ ಅದಾಯ 12 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಹೊಸ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ 0-4 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ. 4 ಲಕ್ಷದಿಂದ 8 ಲಕ್ಷ ರೂ.ವರೆಗಿನ ಆದಾಯಕ್ಕೆ 5% ತೆರಿಗೆ ಇದೆ. ಅಂದರೆ 20 ಸಾವಿರ ರೂ. ತೆರಿಗೆ ಬೀಳುತ್ತದೆ.
8 ಲಕ್ಷದಿಂದ 12 ಲಕ್ಷ ರೂ.ವರೆಗಿನ ಆದಾಯಕ್ಕೆ 10% ತೆರಿಗೆ ಇದೆ. ಈ ಲೆಕ್ಕಾಚಾರ ಮಾಡಿದರೆ 40 ಸಾವಿರ ರೂ. ತೆರಿಗೆ ಬೀಳುತ್ತದೆ. ಈಗ ಒಟ್ಟು ತೆರಿಗೆ ಲೆಕ್ಕ ಹಾಕಿದರೆ 60 ಸಾವಿರ ರೂ. ಆಗುತ್ತದೆ. ಆದರೆ ಸ್ಟ್ಯಾಡರ್ಡ್ ಡಿಡಕ್ಷನ್ ರಿಬೆಟ್ 75 ಸಾವಿರ ರೂ. ಇರುವ ಕಾರಣ ಒಟ್ಟು 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇದನ್ನೂ ಓದಿ: Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ
ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ನಿಮ್ಮ ಒಟ್ಟಾರೆ ಆದಾಯದಲ್ಲಿ 75,000 ರೂ ಹಣವನ್ನು ಹೊರಗಿಡಬಹುದು. ಇದು ಹೊಸ ಆದಾಯ ತೆರಿಗೆ ಸ್ಲಾಬ್ ಬಳಸುವ ತೆರಿಗೆ ಪಾವತಿದಾರರಿಗೆ ಮಾತ್ರ ಅನ್ವಯವಾಗುತ್ತದೆ. ಹಳೆ ತೆರಿಗೆ ಸ್ಲ್ಯಾಬ್ನಲ್ಲಿ 50,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಇದ್ದು ಯಾವುದೇ ಬದಲಾವಣೆ ಮಾಡಿಲ್ಲ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ
ಸ್ಟ್ಯಾಂಡರ್ಡ್ ಡಿಡಕ್ಷನ್ ಸಂಬಳದ ಆದಾಯದಿಂದ ಕಡಿತಗೊಳಿಸಲಾಗುವ ಸ್ಥಿರ ಮೊತ್ತವಾಗಿದ್ದು ಹೂಡಿಕೆ ಮಾಡಿದ್ದಕ್ಕೆ ಪುರಾವೆ ಇತ್ಯಾದಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.