– ಪದ್ಮ ಪ್ರಶಸ್ತಿ ಪುರಸ್ಕೃತೆ ತಯಾರಿಸಿದ ಸೀರೆಯನ್ನುಟ್ಟ ಕೇಂದ್ರ ವಿತ್ತ ಸಚಿವೆ
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿ ವರ್ಷ ಬಜೆಟ್ ಜೊತೆಗೆ ಸೀರೆ ವಿಚಾರಕ್ಕೂ ಹೆಚ್ಚು ಗಮನ ಸೆಳೆದಿದ್ದಾರೆ. ಪ್ರತಿ ಬಾರಿ ಬಜೆಟ್ ಮಂಡಿಸುವಾಗ ಭಾರತದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಸೀರೆಯನ್ನುಟ್ಟು ಮಿಂಚಿದ್ದಾರೆ.
Advertisement
ಸೀತಾರಾಮನ್ ಅವರಿಗೆ ಸೀರೆಗಳೆಂದರೆ ಅಚ್ಚುಮೆಚ್ಚು. ಇದುವರೆಗೂ ತಾವು ಮಂಡಿಸಿದ ಬಜೆಟ್‌ಗಳಲ್ಲಿ ಒಂದೊಂದು ಬಗೆಯ, ಕಲಾ ಕುಸುರಿಯ ವಿಶೇಷತೆ ಇರುವ ಸೀರೆಗಳನ್ನುಟ್ಟು ಗಮನ ಸೆಳೆದಿದ್ದಾರೆ. ಅವರು ಧರಿಸುವ ಸೀರೆಗಳು ಕೈಮಗ್ಗ (ಕೈಯಿಂದ ನೇಯ್ದ) ಭಾರತೀಯ ಜವಳಿ ಮತ್ತು ಕರಕುಶಲ ವಸ್ತುಗಳ ಮೇಲಿನ ಅವರ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ಸೀರೆಗಳು ಭಾರತೀಯ ಸಂಸ್ಕೃತಿ, ಪರಂಪರೆ ಮೇಲೆ ಬೆಳಕು ಚೆಲ್ಲಿವೆ.
Advertisement
ಮದುಬನಿ ಕಲಾ ಸೀರೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿಯ ಕೌಶಲ್ಯಕ್ಕೆ ಗೌರವಾರ್ಥವಾಗಿ ಸೀರೆ ಉಟ್ಟಿದ್ದಾರೆ. ಈ ಸೀರೆಯನ್ನು ದುಲಾರಿ ದೇವಿ ಅವರೇ ತಯಾರಿಸಿದ್ದಾರೆ. ಗೋಲ್ಡ್ ಕಲರ್ ಬಾರ್ಡರ್ ಹೊಂದಿರುವ ಸುಂದರವಾದ ಕ್ರೀಮ್ ಸೀರೆಯನ್ನು ಸಚಿವರು ಈ ಬಾರಿ ಬಜೆಟ್ ಮಂಡನೆಗೆ ಧರಿಸಿದ್ದಾರೆ. ಇದಕ್ಕೆ ಮ್ಯಾಚಿಂಗ್ ಎಂಬಂತೆ ಕೆಂಪು ಬಣ್ಣದ ಕುಪ್ಪಸವನ್ನು ಧರಿಸಿದ್ದಾರೆ.
Advertisement
ದುಲಾರಿ ದೇವಿ 2021 ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮಿಥಿಲಾ ಕಲಾ ಸಂಸ್ಥೆಯಲ್ಲಿ ಕ್ರೆಡಿಟ್ ಔಟ್ರೀಚ್ ಚಟುವಟಿಕೆಗಾಗಿ ಹಣಕಾಸು ಸಚಿವರು ಮಧುಬನಿಗೆ ಹೋಗಿದ್ದರು. ಆಗ ದುಲಾರಿ ದೇವಿ ಅವರನ್ನು ಭೇಟಿಯಾದರು. ಬಿಹಾರದ ಮಧುಬನಿ ಕಲೆಯ ಬಗ್ಗೆ ಸಚಿವರಿಗೆ ತಿಳಿಸಿದ್ದಲ್ಲದೇ, ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಬಜೆಟ್ ಮಂಡನೆ ದಿನಕ್ಕೆ ಅದನ್ನು ಧರಿಸಲು ಸಚಿವರಿಗೆ ದೇವಿ ಅವರು ಕೋರಿದ್ದರು.
Advertisement
ಮಂಗಳಗಿರಿ ಸೀರೆ
2024ರಲ್ಲಿ ತಮ್ಮ ಏಳನೇ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಮಜೆಂಟಾ (ಕೆನ್ನೇರಳೆ) ಬಾರ್ಡರ್ ಹೊಂದಿದ್ದ ಆಫ್ ವೈಟ್ ಬಣ್ಣ ಮಂಗಳಗಿರಿ ಸೀರೆ ಧರಿಸಿದ್ದರು. ಗುಂಟೂರು ಜಿಲ್ಲೆಯಲ್ಲಿ ತಯಾರಾದ ಸೀರೆ ಆಂಧ್ರಪ್ರದೇಶದ ಸಂಸ್ಕೃತಿಯನ್ನು ಬಿಂಬಿಸಿದೆ. ಇದೇ ಸಂದರ್ಭದಲ್ಲಿ ಆಂಧ್ರಕ್ಕೆ ವಿಶೇಷ ಆರ್ಥಿಕ ನೆರವು ಘೋಷಿಸಿದ್ದು ವಿಶೇಷವಾಗಿತ್ತು.
ಟಸ್ಸರ್ ರೇಷ್ಮೆ ಸೀರೆ
2024ರಲ್ಲೇ ಮಧ್ಯಂತರ ಬಜೆಟ್‌ಗಾಗಿ ಸೀತಾರಾಮನ್ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆ ಉಟ್ಟಿದ್ದರು. ಅದರಲ್ಲಿ ಕಾಂತ ಕೈಯಿಂದ ಮಾಡಲಾಗಿತ್ತು. ಸೀರೆ ಜೊತೆಗೆ ಚಿನ್ನದ ಬಣ್ಣದ ಬ್ಲೌಸ್ ಧರಿಸಿದ್ದರು. ಪಶ್ಚಿಮ ಬಂಗಾಳವು ಕಾಂತ ಹೊಲಿಗೆಗೆ ಹೆಸರುವಾಸಿಯಾಗಿದೆ. ನೀಲಿ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ, ಮೀನುಗಾರಿಕೆ ಅಭಿವೃದ್ಧಿ ಮೂಲಕ ಮತ್ಸ್ಯ ಕ್ರಾಂತಿಯ ಸಂದೇಶ ನೀಡಿದ್ದರು.
ಕರ್ನಾಟಕದ ಇಳಕಲ್ ಸೀರೆ
2023ರಲ್ಲಿ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು, ದೇವಾಲಯ ಬಾರ್ಡರ್ ಸೀರೆ ಆರಿಸಿಕೊಂಡಿದ್ದರು. ಕೆಂಪು ಬಣ್ಣದ ಟೆಂಪಲ್ ಬಾರ್ಡರ್ ಸೀರೆ ವಿಶೇಷವಾಗಿತ್ತು. ಕರ್ನಾಟಕ ಧಾರವಾಡದ ಇಳಕಲ್ ರೇಷ್ಮೆ ಸೀರೆ ಇದಾಗಿತ್ತು. ಕೈಯಿಂದ ನೇಯ್ದ ಕಸೂತಿ ಸೀರೆಯಿದು. ಸೀರೆಯಲ್ಲಿ ರಥ, ನವಿಲು, ಕಮಲಗಳ ಚಿತ್ರಗಳಿದ್ದವು. ಬಜೆಟ್‌ನಲ್ಲಿ ಕಸೂತಿ ಕಲೆಗೆ ಪ್ರೋತ್ಸಾಹ ನೀಡುವ ಸುಳಿವು ಕೊಟ್ಟಿದ್ದರು.
ಬೊಮ್ಕೈ ಸೀರೆ
2022ರಲ್ಲಿ ಬಜೆಟ್ ಮಂಡಿಸುವಾಗ ಸೀತಾರಾಮನ್ ಅವರು, ಬೊಮ್ಕೈ ಸೀರೆಯನ್ನು ಧರಿಸಿದ್ದರು. ಸೀರೆ ಕಂದು ಬಣ್ಣದ್ದಾಗಿತ್ತು. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ವಿಶೇಷ ಸೀರೆಯಿದು.
ಪೋಂಚಪಲ್ಲಿ ಸೀರೆ
2021 ರಲ್ಲಿ ತಮ್ಮ ಮೂರನೇ ಬಜೆಟ್ ಮಂಡನೆಗಾಗಿ ನಿರ್ಮಲಾ ಸೀತಾರಾಮನ್ ಅವರು ಹೈದರಾಬಾದ್‌ನ ಪೋಚಂಪಲ್ಲಿ ಗ್ರಾಮದ ಕೆಂಪು ಮತ್ತು ಮಾಸಲು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು.
ರೇಷ್ಮೆ ಸೀರೆ
2020ರಲ್ಲಿ ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಹಳದಿ ರೇಷ್ಮೆ ಸೀರೆ ಉಟ್ಟು ಬಂದಿದ್ದರು. ಸೀರೆಗೆ ಮ್ಯಾಚ್ ಆಗುವ ಅದೇ ಬಣ್ಣದ ಕುಪ್ಪಸ ಧರಿಸಿದ್ದರು. ಸೀರೆಯ ಬಾರ್ಡರ್ ನೀಲಿ ಬಣ್ಣದ್ದಾಗಿತ್ತು. ಹಳದಿ ಸಮೃದ್ಧಿಯ ಸಂಕೇತವಾಗಿದೆ.
ಮಂಗಳಗಿರಿ ಸೀರೆ
2019 ರಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರ ಮೊದಲ ಬಜೆಟ್ ಮಂಡಿಸಿದ್ದರು. ಆಗ ಅವರು ಗೋಲ್ಡ್ ಕಲರ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು.ಸಾಂಪ್ರದಾಯಿಕ ‘ಬಹಿ ಖಾತಾ’ ದೊಂದಿಗೆ ಬಜೆಟ್ ಬ್ರೀಫ್‌ಕೇಸ್ ಅನ್ನು ತೆಗೆದುಕೊಂಡು ಬಂದಿದ್ದರು. ಅದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನದೊಂದಿಗೆ ಚಿನ್ನದ ಎಳೆಗಳು ಇದ್ದವು.