ಕೇಂದ್ರ ಬಜೆಟ್‌ – 1 ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ?

Public TV
2 Min Read
Union Budget 2024 Where Rupee Comes From And Where It Goes

ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ (Union Budget) ಮಂಡಿಸುವ ಮೊದಲು ಸಾರ್ವತ್ರಿಕ ಚುನಾವಣೆ ಸನಿಹದಲ್ಲಿರುವ ಕಾರಣ ಇದು ಎಲೆಕ್ಷನ್ ಬಜೆಟ್ (Election Budget) ಆಗಬಹುದು. ಜನಪ್ರಿಯತೆಯ ಹಳಿ ಮೇಲೆ ಸಾಗಬಹುದು, ಉಚಿತ ಭರವಸೆಗಳ ಘೋಷಣೆಯಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದ್ದವು. ಆದರೆ ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆ ಶುರು ಮಾಡಿದ ಸ್ವಲ್ಪ ಹೊತ್ತಿಗೆ ಈ ನಿರೀಕ್ಷೆಗಳು ಹುಸಿಯಾದವು.

ವಿಕಸಿತ ಭಾರತದ ಧ್ಯೇಯದೊಂದಿಗೆ 47.66 ಲಕ್ಷ ಕೋಟಿ ರೂಪಾಯಿ ಗಾತ್ರದ ಮಧ್ಯಂತರ ಬಜೆಟ್ ಅನ್ನು 59 ನಿಮಿಷಗಳಲ್ಲಿ ಮಂಡಿಸಿದರು. ಆರಂಭದಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ವಿತ್ತ ಸಚಿವೆ ವಿವರಿಸಿದರು. ಬಡವರು, ಮಹಿಳೆಯರು, ಯುವಕರು, ರೈತರ ಅಭಿವೃದ್ಧಿ, ಕಲ್ಯಾಣವೇ ಪ್ರಥಮ ಆದ್ಯತೆ ಆಗಬೇಕು ಎಂಬ ಪ್ರಧಾನಿ ಸಲಹೆ ಮೇರೆಗೆ ಬಜೆಟ್ ರೂಪಿಸಲಾಗಿದೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಘೋಷಣೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಉತ್ತಮಗೊಳಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಎಲೆಕ್ಷನ್ ಬಜೆಟ್‌ನಲ್ಲಿ ಪುಕ್ಕಟೆ ಯೋಜನೆಗಳಿಲ್ಲ – ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ? ಕಳೆದ ವರ್ಷ ಎಷ್ಟಿತ್ತು?

Union Budget 2024 Where Rupee Comes From And Where It Goes

1 ರೂಪಾಯಿ ಹೋಗಿದ್ದು ಹೇಗೆ?
* ಸಾಲ, ಪಾವತಿ – 28 ಪೈಸೆ
* ಆದಾಯ ತೆರಿಗೆ – 19 ಪೈಸೆ
* ಜಿಎಸ್‌ಟಿ – 18 ಪೈಸೆ
* ಕಾರ್ಪೊರೇಟ್ ತೆರಿಗೆ – 17 ಪೈಸೆ
* ಕೇಂದ್ರ ಅಬಕಾರಿ ಸುಂಕ – 5 ಪೈಸೆ
* ಕಸ್ಟಮ್ಸ್ – 4 ಪೈಸೆ
* ತೆರಿಗೆಯೇತರ ಆದಾಯ – 7 ಪೈಸೆ
* ನಾನ್ ಡೆಬಿಟ್ ಕ್ಯಾಪಿಟಲ್ – 1 ಪೈಸೆ

1 ರೂಪಾಯಿ ಬಂದಿದ್ದು ಹೇಗೆ?
* ಬಡ್ಡಿ ಪಾವತಿ – 20 ಪೈಸೆ (11.91 ಲಕ್ಷ ಕೋಟಿ ರೂ.)
* ತೆರಿಗೆಯಲ್ಲಿ ರಾಜ್ಯ ಪಾಲು – 20 ಪೈಸೆ
* ಸೆಂಟ್ರಲ್ ಸೆಕ್ಟರ್ ಸ್ಕೀಮ್ – 16 ಪೈಸೆ
* ಹಣಕಾಸು ಆಯೋಗ – 8 ಪೈಸೆ
* ಕೇಂದ್ರ ಪ್ರಾಯೋಜಿತ ಸ್ಕೀಮ್ – 8 ಪೈಸೆ
* ರಕ್ಷಣಾ ವಲಯ – 8 ಪೈಸೆ
* ಸಬ್ಸಿಡಿ – 6 ಪೈಸೆ
* ಪೆನ್ಶನ್ – 4 ಪೈಸೆ
* ಇತರೆ ಖರ್ಚು – 9 ಪೈಸೆ

 

Share This Article