4 ಜಾತಿಗಳನ್ನು ಅಭಿವೃದ್ಧಿ ಮಾಡುವುದೇ ಸರ್ಕಾರದ ಗುರಿ: ಸೀತಾರಾಮನ್‌

Public TV
1 Min Read
Farmers Budget2

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ನಲ್ಲಿ (Union Budget) ಸರ್ಕಾರದ ನಾಲ್ಕು ಜಾತಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಬಡವರು, ಮಹಿಳೆಯರು, ಯುವಜನತೆ ಮತ್ತು ರೈತರು ನಮ್ಮ ಸರ್ಕಾರದ 4 ಜಾತಿಗಳು. ಈ ನಾಲ್ಕು ಜಾತಿಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.  ಇದನ್ನೂ ಓದಿ: BUDGET 2024: LIVE Updates – ಕೇಂದ್ರ ಬಜೆಟ್‌ 2024

 

ಕೋವಿಡ್‌ ಸವಾಲುಗಳ ನಡುವೆಯೂ, ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅನುಷ್ಠಾನವು ಮುಂದುವರೆದಿದೆ ಮತ್ತು ನಾವು 3 ಕೋಟಿ ಮನೆಗಳ ಗುರಿಯನ್ನು ಸಾಧಿಸುವ ಸಮೀಪದಲ್ಲಿ ಇದ್ದೇವೆ. ಕುಟುಂಬಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದ ಉಂಟಾಗುವ ಅವಶ್ಯಕತೆಗಳನ್ನು ಪೂರೈಸಲು ಮುಂದಿನ 5 ವರ್ಷಗಳಲ್ಲಿ 2 ಕೋಟಿ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದರು.

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿ 43 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ. ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಸ್ಟಾರ್ಟ್‌ಅಪ್ ಕ್ರೆಡಿಟ್ ಗ್ಯಾರಂಟಿ ಯೋಜನೆಗಳು ನಮ್ಮ ಯುವಕರಿಗೆ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಬಿಟಿ ಮೂಲಕ 34 ಲಕ್ಷ ಕೋಟಿ ರೂ. ವಿತರಣೆ : ನಿರ್ಮಲಾ ಸೀತಾರಾಮನ್‌

 

Share This Article