ನವದೆಹಲಿ: ಫಲಾನುಭವಿಗಳಿಗೆ ಒಟ್ಟು 34 ಲಕ್ಷ ಕೋಟಿ ರೂ. ಸಬ್ಸಿಡಿ ಹಣವನ್ನು ನೇರ ವರ್ಗಾವಣೆ (DBT) ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.
ಹೊಸ ಲೋಕಸಭೆಯಲ್ಲಿ ಬಜೆಟ್ (Union Budget) ಮಂಡನೆ ಮಾಡಿದ ಅವರು ಡಿಬಿಟಿಯಿಂದಾಗಿ 2.7 ಲಕ್ಷ ಕೋಟಿ ರೂ. ಹಣ ಸರ್ಕಾರಕ್ಕೆ ಉಳಿತಾಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: BUDGET2024: LIVE Updates – ಕೇಂದ್ರ ಬಜೆಟ್ 2024
Advertisement
ಕಾಲಕಾಲ ರೈತರಿಗೆ ನೀಡುವ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ನಮ್ಮ ಸರ್ಕಾರ ಮಂತ್ರವಾಗಿದೆ. ಒಟ್ಟು ಇಲ್ಲಿಯವರೆಗೆ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಮಾಡಲಾಗಿದೆ ಎಂದು ಹೇಳಿದರು.