ಕೇಂದ್ರ ಬಜೆಟ್-2024 (Union Budget 2024) ಮಂಡನೆಗೆ ದಿನಗಣನೆ ಶುರುವಾಗಿದೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡಿಸಲು ಸಜ್ಜಾಗಿದೆ. ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮಂಗಳವಾರ (ಜು.16) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ‘ಹಲ್ವಾ ಸೆರೆಮನಿ’ (ಹಲ್ವಾ ಕಾರ್ಯಕ್ರಮ) ನಡೆಸಿಕೊಟ್ಟರು.
ಬಜೆಟ್ ಮಂಡನೆಗೂ ಮುನ್ನ ಹಲ್ವಾ ಹಂಚುವುದು ಏಕೆ? ಏನಿದು ಹಲ್ವಾ ಸೆರೆಮನಿ? (Halwa Ceremony) ಯಾರಿಗೆ ಹಲ್ವಾ ಹಂಚುತ್ತಾರೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಅದೇನು ಅಂತಾ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಅಂದು ರಾಹುಲ್ ಗಾಂಧಿ, ಇಂದು ದೀದಿ – ಜೋರು ಮಳೆಯಲ್ಲೂ ಅಬ್ಬರದ ಭಾಷಣ
Advertisement
Advertisement
ಯಾವುದೇ ಶುಭಕಾರ್ಯಕ್ಕೆ ಸಿಹಿ ಹಂಚುವುದು ಸಂಪ್ರದಾಯ. ಸಿಹಿ ತಿಂಡಿಗಳನ್ನು ತಯಾರಿಸಿ ಹಂಚುವುದು ಅನೇಕ ಭಾರತೀಯ ಸಮಾರಂಭಗಳು ಮತ್ತು ಹಬ್ಬಗಳ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಬಜೆಟ್ ಮಂಡನೆ ಕಾರ್ಯದಲ್ಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂಬುದು ಹಲವರ ಭಾವನೆ. ಅದರ ಹೊರತಾಗಿ ಇನ್ನೊಂದು ಉದ್ದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ. ಬಜೆಟ್ ಗೌಪ್ಯತೆ ಕಾಪಾಡುವುದೇ ಆ ಉದ್ದೇಶ.
Advertisement
ಏನಿದು ಹಲ್ವಾ ಸೆರೆಮನಿ?
ಬಜೆಟ್ ಅಧಿವೇಶನಕ್ಕೆ 8-10 ದಿನಗಳ ಮೊದಲು ಹಣಕಾಸು ಇಲಾಖೆ ‘ಹಲ್ವಾ’ ಸಮಾರಂಭ ಆಯೋಜಿಸುತ್ತದೆ. ದೊಡ್ಡ ಬಾಣಲೆಯಲ್ಲಿ ತಯಾರಿಸಿದ ಹಲ್ವಾವನ್ನು ಕೇಂದ್ರ ಸಚಿವರು ಹಂಚುತ್ತಾರೆ. ಇದನ್ನೂ ಓದಿ: ರೊಟ್ಟಿ ಮೇಲೆ ಉಗುಳಿದ ಅನ್ಯಕೋಮಿನ ವ್ಯಾಪಾರಿ; ರಾಮ-ಶಬರಿಗೆ ಹೋಲಿಸಿದ ಸೋನು ಸೂದ್ ವಿರುದ್ಧ ಆಕ್ರೋಶ
Advertisement
ಹಂಚುವುದು ಏಕೆ?
ಈ ಕಾರ್ಯದ ಹಿಂದಿನ ಚಾರಿತ್ರಿಕ ಹಿನ್ನೆಲೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಯಾವುದೇ ಶುಭ ಕಾರ್ಯ ಆರಂಭಿಸುವುದಕ್ಕೂ ಮೊದಲು ಸಿಹಿ ಹಂಚುವುದು ಸಂಪ್ರದಾಯ. ಅದರಂತೆ ಇಲ್ಲೂ ಕೂಡ ಬಜೆಟ್ ಮಂಡನೆಗೂ ಮೊದಲು ಹಲ್ವಾ ಸೆರೆಮನಿ ನಡೆಯುತ್ತದೆ. ಹಣಕಾಸು ಇಲಾಖೆಯ ಸಿಬ್ಬಂದಿಯನ್ನು ಬಜೆಟ್ ಪ್ರತಿ ಮುದ್ರಣ ಕಾರ್ಯದಲ್ಲಿ ತೊಡಗಿಸಲು ನೀಡುವ ಚಾಲನೆಯೇ ‘ಹಲ್ವಾ’ ಸೆರೆಮನಿ ಎಂದರ್ಥ.
ಯಾರಿಗೆ ಹಂಚುತ್ತಾರೆ ಹಲ್ವಾ?
ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಲಾಗುತ್ತದೆ. ಈ ಸಮಾರಂಭ ಆದ ಬೆನ್ನಲ್ಲೇ ಅವರು ಬಜೆಟ್ ಮುದ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದನ್ನೂ ಓದಿ: ಕರ್ನಾಟಕದ ನೆರೆರಾಜ್ಯ ಕೇರಳದಲ್ಲಿ ನಿಫಾ ವೈರಸ್ ಪತ್ತೆ – 14ರ ಬಾಲಕನಿಗೆ ಸೋಂಕು
ಬಜೆಟ್ ಗೌಪ್ಯತೆ ಕಾಪಾಡಲು ಹಲ್ವಾ ಸಮಾರಂಭ?
ಹೌದು, ಬಜೆಟ್‌ಗೆ ಸಂಬಂಧಿಸಿದ ಮಾಹಿತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗುತ್ತದೆ. ಕಾರ್ಯಕ್ರಮ ಮುಗಿದ ಕೂಡಲೇ ಹಣಕಾಸು ಇಲಾಖೆ ಸಿಬ್ಬಂದಿ ಒಂದು ಕಡೆ ಬಂಧಿಯಾಗುತ್ತಾರೆ. ಬಜೆಟ್ ಮಂಡಿಸುವವರೆಗೆ ಅವರು ಮನೆಗೆ ಹೋಗುವಂತಿಲ್ಲ. ಯಾರನ್ನೂ ಸಂಪರ್ಕಿಸುವಂತಿಲ್ಲ. ಬಾಹ್ಯ ಜಗತ್ತಿನ ಸಂಪರ್ಕವೇ ಅವರಿಗೆ ಇಲ್ಲದಂತೆ ಮಾಡಲಾಗುತ್ತದೆ. ಫೋನ್, ಇ-ಮೇಲ್ ಯಾವುದನ್ನೂ ಬಳಸಲು ಅವಕಾಶ ಇರುವುದಿಲ್ಲ. ಮನೆಯವರನ್ನಾಗಲಿ ಅಥವಾ ನೆರೆಹೊರೆಯವರನ್ನಾಗಲಿ ಸಂಪರ್ಕಿಸುವ ಹಾಗಿಲ್ಲ. ಮುದ್ರಣ ಕಾರ್ಯಕ್ಕಾಗಿ ಅವರೆಲ್ಲರೂ ಉತ್ತರ ಬ್ಲಾಕ್‌ನ ತಳ ಅಂತಸ್ಥಿನ ಕಚೇರಿಗೆ ಸ್ಥಳಾಂತರಗೊಳ್ಳುತ್ತಾರೆ.
ಗೌಪ್ಯತೆ ಯಾಕೆ?
1950 ರ ವರೆಗೆ ಬಜೆಟ್ ಪ್ರತಿಗಳು ರಾಷ್ಟ್ರಪತಿ ಭವನದಲ್ಲೇ ಮುದ್ರಣಗೊಳ್ಳುತ್ತಿದ್ದವು. ಆದರೆ ಪ್ರತಿಗಳು ಮತ್ತು ಮಾಹಿತಿ ಸೋರಿಕೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್‌ಗೆ ಮುದ್ರಣ ಕಾರ್ಯ ಸ್ಥಳಾಂತರಗೊಂಡಿತು. ಆಗಿನಿಂದಲೂ ಅಲ್ಲಿಯೇ ಮುದ್ರಣ ನಡೆಯುತ್ತಿದೆ.
ಹಣಕಾಸು ಸಚಿವರ ತಲೆದಂಡ!
1950 ರಲ್ಲಿ ಬಜೆಟ್ ಸೋರಿಕೆಯಾಗಿತ್ತು. ಪರಿಣಾಮವಾಗಿ ಆಗಿನ ಹಣಕಾಸು ಸಚಿವರಾಗಿದ್ದ ಜಾನ್ ಮಥಾಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಆಗಿನಿಂದ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗಿದೆ. ಇದನ್ನೂ ಓದಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ – ಮಾಸ್ಟರ್ ಮೈಂಡ್, ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್
ಕೇಂದ್ರ ಬಜೆಟ್ ಮುದ್ರಣವಾಗೋದು ಎಲ್ಲಿ?
ನಾರ್ತ್ ಬ್ಲಾಕ್‌ನ ನೆಲಮಾಳಿಗೆಯು 1980 ರಿಂದ 2020 ರವರೆಗೆ 40 ವರ್ಷಗಳ ಕಾಲ ಬಜೆಟ್ ದಾಖಲೆಗಳನ್ನು ಮುದ್ರಿಸಲು ಸಾಂಪ್ರದಾಯಿಕವಾಗಿ ಬಳಸಲಾಗುವ ಪ್ರಿಂಟಿಂಗ್ ಪ್ರೆಸ್ ಅನ್ನು ಹೊಂದಿದೆ.