ನವದೆಹಲಿ: ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ʼಯೂನಿಟಿ ಮಾಲ್ʼಗಳನ್ನು (Unity Mall) ತೆರೆದು, ದೇಶೀಯ ಹಾಗೂ ಪ್ರಾದೇಶಿಕ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆದಿದೆ.
ಏನಿದು ʼಯೂನಿಟಿ ಮಾಲ್ʼ?
2023-24ನೇ ಸಾಲಿನ ಬಜೆಟ್ (Union Budget) ಮಂಡಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಯೂನಿಟಿ ಮಾಲ್‌ಗಳನ್ನು ತೆರೆದು ಆಯಾ ರಾಜ್ಯದ ಪ್ರಾದೇಶಿಕ (ODOP- ಒಂದು ಜಿಲ್ಲೆ, ಒಂದು ಉತ್ಪನ್ನ), ಭೌಗೋಳಿಕ ಸೂಚಿಕೆ ಮಾನ್ಯತೆ ಪಡೆದ ಉತ್ಪನ್ನಗಳು ಮತ್ತು ಇತರ ಕರಕುಶಲ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಎಲ್ಲಾ ರಾಜ್ಯಗಳ ಉತ್ಪನ್ನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Union Budget 2023 – ಮಧ್ಯ ಕರ್ನಾಟಕ, ಮಲೆನಾಡು, ಹಳೇ ಮೈಸೂರು ಮತಗಳ ಮೇಲೆ ಬಿಜೆಪಿ ಕಣ್ಣು
Advertisement
Advertisement
ಯೂನಿಟಿ ಮಾಲ್‌ಗಳಲ್ಲಿ ದೇಶೀಯ ಹಾಗೂ ಆಯಾ ರಾಜ್ಯದ ಪ್ರಾದೇಶಿಕ ಪ್ರಸಿದ್ಧವಾಗಿರುವ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಯೂನಿಟಿ ಮಾಲ್ ತೆರೆದರೆ, ಅಲ್ಲಿ ಚನ್ನಪಟ್ಟಣದ ಗೊಂಬೆ, ಮೈಸೂರು ರೇಷ್ಮೆ ಸೀರಿ, ಬ್ಯಾಡಗಿ ಮೆಣಸಿನಕಾಯಿ ಹೀಗೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡಬಹುದು.
Advertisement
ODOP ಹಾಗಂದ್ರೇನು?
ಒಂದು ಜಿಲ್ಲೆ, ಒಂದು ಉತ್ಪನ್ನವು (One District, One Product) ಸರ್ಕಾರದ ಒಂದು ಉಪಕ್ರಮವಾಗಿದೆ. ಇದು ಪ್ರಾದೇಶಿಕ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಗುರಿಯನ್ನು ಹೊಂದಿದೆ. ಅವುಗಳನ್ನು ಉತ್ಪಾದಿಸುವವರಿಗೆ ಬಂಡವಾಳ ನೀಡುತ್ತದೆ. ಯೋಜನೆಯಡಿಯಲ್ಲಿ, ರಾಜ್ಯವು ಜಿಲ್ಲೆಯ ಮುಖ್ಯ ಉತ್ಪನ್ನವನ್ನು ಗುರುತಿಸುತ್ತದೆ. ಅದರ ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರುಕಟ್ಟೆಗೆ ಬೆಂಬಲ ನೀಡುತ್ತದೆ. ಇದನ್ನೂ ಓದಿ: Union Budget 2023: ಕ್ರೀಡೆಗೆ ದಾಖಲೆಯ 3,397.22 ಕೋಟಿ ರೂ. ಅನುದಾನ
Advertisement
ಭೌಗೋಳಿಕ ಸೂಚಿಕೆ ಎಂದರೇನು?
ನಿರ್ದಿಷ್ಟ ಊರು/ಸ್ಥಳದಲ್ಲಿಯೇ ಉತ್ಪಾದಿಸುವ ಪದಾರ್ಥಕ್ಕೆ, ಅದರ ನೈಸರ್ಗಿಕ ಗುಣಮಟ್ಟ, ವೈಶಿಷ್ಟ್ಯತೆಯನ್ನು ಆಧರಿಸಿ ಭೌಗೋಳಿಕ ಸೂಚಿಕೆ (GI) ಟ್ಯಾಗ್ ನೀಡಲಾಗುತ್ತದೆ. ಅಂತಹ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಜಿಐ (ಜಿಯೋಗ್ರಫಿಕಲ್ ಇಂಡಿಕೇಶನ್ ಟ್ಯಾಗ್- ಜಿಐ ಟ್ಯಾಗ್) ಮಾನ್ಯತೆ ನೀಡುತ್ತದೆ. ಜಿಐ ಟ್ಯಾಗ್ ಲಭಿಸಿರುವ ಪದಾರ್ಥಗಳನ್ನು ಉತ್ಪಾದಿಸುವ ಅಥವಾ ಬೆಳೆಯುವವರಿಗೆ ಅವುಗಳ ಮಾರಾಟ ಸಂದರ್ಭದಲ್ಲಿ ಹೆಚ್ಚು ಅನುಕೂಲವಾಗಲಿದೆ. ಇಂತಹ ಉತ್ಪನ್ನಗಳಿಗೆ ಹೆಚ್ಚು ದರ ನಿಗದಿಗೆ ಅವಕಾಶ ಇರುತ್ತದೆ. ಇವುಗಳ ಹೆಸರುಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k