ನವದೆಹಲಿ: ಒಂದೆಡೆ ಕೋವಿಡ್ ಸಾಂಕ್ರಾಮಿಕ ಮತ್ತೊಂದೆಡೆ ಪಂಚ ರಾಜ್ಯಗಳ ಚುನಾವಣೆ ನಡುವೆ ಬಜೆಟ್ ದಿನ ಬಂದಿದೆ. ಮಂಗಳವಾರ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಯಾರಿ ನಡೆಸಿದ್ದಾರೆ.
Advertisement
ಪಂಚ ರಾಜ್ಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಿರಬಹುದು ಎಂಬುದು ತಜ್ಞರ ಊಹೆ. ಕಳೆದ ವರ್ಷ ಎಲ್ಲಾ ಲೆಕ್ಕಾಚಾರಗಳನ್ನು ಕೋವಿಡ್ ಉಲ್ಟಾಪಲ್ಟಾ ಮಾಡಿದೆ. ಹಣದುಬ್ಬರ, ನಿರುದ್ಯೋಗ ಹೆಚ್ಚಿದೆ. ಕಚ್ಚಾ ತೈಲ ಬೆಲೆ ಕಳೆದ 7 ವರ್ಷಗಳಲ್ಲಿಯೇ ಅತ್ಯಂತ ದುಬಾರಿಯಾಗಿದೆ. ಇವೆಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಬಜೆಟ್ ಮಂಡನೆ ಮಾಡಬೇಕಾದ ಸವಾಲು ಹಣಕಾಸು ಸಚಿವರ ಮುಂದಿದೆ. ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ
Advertisement
Advertisement
ಹೇಗಿರಬಹುದು ನಿರ್ಮಲಾ ಬಜೆಟ್?
* ದೀರ್ಘಕಾಲಿಕ ಯೋಜನೆಗಳಿಗೆ ಹೆಚ್ಚು ಆದ್ಯತೆ
* ಗ್ರಾಮೀಣ ಜನತೆಗೆ ಹತ್ತಿರವಾಗುವ ಅಂಶ ಇರಬಹುದು
* ರೈತ ಹೋರಾಟದ ಕಾವು ತಣಿಸುವ ಘೋಷಣೆಗಳ ನಿರೀಕ್ಷೆ
* ಬೆಂಬಲ ಬೆಲೆ ಬಗ್ಗೆ ಮಹತ್ವದ ತೀರ್ಮಾನ ಆಗಬಹುದು
* ನಗರ/ಪಟ್ಟಣ ಪ್ರದೇಶಗಳಲ್ಲಿ ನರೇಗಾದಂತಹ ಯೋಜನೆ
* ಹೆಚ್ಚು ಹೊಸ ಯೋಜನೆ ಬದಲು ಇರುವ ಯೋಜನೆಗಳಿಗೆ ಬಲ
* ಎಲೆಕ್ಷನ್ ರಾಜ್ಯಗಳಿಗೆ ಮೂಲಸೌಕರ್ಯದ ಬಂಪರ್ ನಿರೀಕ್ಷೆ
* ರೈಲು ಮಾರ್ಗಗಳ ಖಾಸಗೀಕರಣಕ್ಕೆ ಒತ್ತು ನೀಡದೇ ಇರಬಹುದು
* ವಿದ್ಯುತ್ ಕಂಪನಿಗಳ ಖಾಸಗೀಕರಣ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ
* ಸ್ಟಾರ್ಟ್ ಅಪ್‌ಗಳಲ್ಲಿ ದೇಶಿಯ ಹೂಡಿಕೆಗೆ ಪ್ರೋತ್ಸಾಹಕ ಕ್ರಮ
* ಸಣ್ಣ,ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವು
Advertisement
ಆರೋಗ್ಯ ವಲಯಕ್ಕೆ ಬಂಪರ್ ನಿರೀಕ್ಷೆ
* ಕೇಂದ್ರ ಸರ್ಕಾರ ಈ ವಲಯಕ್ಕೆ ಕಡಿಮೆ ಖರ್ಚು ಮಾಡುತ್ತಿದೆ
* ಜಿಡಿಪಿಯಲ್ಲಿ ಶೇಕಡಾ 1.1ರಷ್ಟನ್ನು ಮಾತ್ರ ಮೀಸಲಿಡುತ್ತಿದೆ
* ಹೆಲ್ತ್ ಪಾಲಿಸಿ ಪ್ರಕಾರ ಜಿಡಿಪಿ 2.5ರಷ್ಟು ಮೀಸಲಿಡಬೇಕು
* 2, 3ನೇ ಹಂತದ ಪಟ್ಟಣಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯ
* ಲ್ಯಾಬ್, ಐಸಿಯು, ವೆಂಟಿಲೇಟರ್ ಸೌಲಭ್ಯ
* ಆಸ್ಪತ್ರೆ ಯಂತ್ರಗಳ ಮೇಲಿನ ಜಿಎಸ್‌ಟಿ, ಇನ್ನಿತರೆ ತೆರಿಗೆ ಇಳಿಕೆ
* ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಿಸುವವರಿಗೆ ತೆರಿಗೆ ರಿಯಾಯ್ತಿ
* ಪ್ರಾಣ ರಕ್ಷಕ ಔಷಧಿಗಳ ಮೇಲಿನ ಜಿಎಸ್‌ಟಿ ಕಡಿತದ ನಿರೀಕ್ಷೆ. ಇದನ್ನೂ ಓದಿ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ
ಜನಸಾಮಾನ್ಯರ ಬಜೆಟ್ ನಿರೀಕ್ಷೆ
* ಬೆಲೆ ಏರಿಕೆ ತಡೆಗೆ ಕ್ರಮ
* ಉದ್ಯೋಗ ಸೃಷ್ಟಿ
* ಆದಾಯ ತೆರಿಗೆ ಮಿತಿ ಹೆಚ್ಚಳ (ಸದ್ಯ 5 ಲಕ್ಷ)
* ತೆರಿಗೆ ಭಾರದಿಂದ ರಿಲೀಫ್
* ಗೃಹ ಸಾಲ ಇನ್ನಷ್ಟು ಅಗ್ಗ
* ಮನೆ ಕನಸು ನನಸಿಗೆ ಪ್ರೋತ್ಸಾಹ
* ಗೃಹ ಸಾಲದ ಮೇಲಿನ ಬಡ್ಡಿಯಲ್ಲಿ ವಿನಾಯ್ತಿ (ಸದ್ಯ 2 ಲಕ್ಷ ಇದೆ. 5 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ)
* ಎಲೆಕ್ಟ್ರಾನಿಕ್ ವಾಹನಗಳಿಗೆ ಸಬ್ಸಿಡಿ, ಇ- ಉಪಕರಣಗಳ ಮೇಲೆ ತೆರಿಗೆ ಇಳಿಕೆ