ನವದೆಹಲಿ: ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ ಬಂಪರ್ ಬಜೆಟ್ ನೀಡಿದ್ದು ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ.
ಬಜೆಟ್ ನಡೆಯುವ ಮೊದಲೇ ಇದು 5 ಲಕ್ಷಕ್ಕೆ ಏರಿಕೆ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಯಾಕೆಂದರೆ ಕೇಂದ್ರ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗರಿಷ್ಟ 8 ಲಕ್ಷ ಆದಾಯ ಮಿತಿ ಇರುವ ಹಿಂದುಳಿದ ಮೇಲ್ವರ್ಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿದ ಪರಿಣಾಮ ಇದು ಹೇಗೆ ಘೋಷಣೆಯಾಗಲಿದೆ ಎನ್ನುವ ಪ್ರಶ್ನೆ ಮೂಡಿತ್ತು.
Advertisement
ಈ ಎಲ್ಲ ಪ್ರಶ್ನೆಗಳಿಗೆ ಗೋಯಲ್ ಉತ್ತರ ನೀಡಿದ್ದು ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ ರೂ. ವಿನಾಯಿತಿ, ಗೃಹ ಸಾಲ 2.5 ಲಕ್ಷ ರೂ. ವಿನಾಯಿತಿ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದೆ.
Advertisement
Individual taxpayers having annual income upto Rs 5 lakhs will get full tax rebate. Individuals with gross income up to 6.5 lakh rupees will not need to pay any tax if they make investments in provident funds and prescribed equities :FM Piyush Goyal#Budget2019#BudgetForNewIndia pic.twitter.com/4LgxrCK9u3
— PIB India (@PIB_India) February 1, 2019
Advertisement
ಆದಾಯ ತೆರಿಗೆ ವಿಶ್ಲೇಷಕರ ಪ್ರಕಾರ ತಿಂಗಳಿಗೆ 40-50 ಸಾವಿರ ರೂ. ಅಸುಪಾಸಿನಲ್ಲಿ ಸಂಪಾದನೆ ಮಾಡುತ್ತಿರುವ ಎಲ್ಲ ಉದ್ಯೋಗಿಗಳಿಗೆ ಇದು ನೆರವಾಗಲಿದೆ. ಈ ಹಿಂದೆ 2.50 ಲಕ್ಷ ದಿಂದ 5 ಲಕ್ಷ ರೂ.ವರೆಗೆ ಶೇ. 10 ರಷ್ಟು ತೆರಿಗೆ ಇತ್ತು. ಆದರೆ 2017 ರಲ್ಲಿ ಅರುಣ್ ಜೇಟ್ಲಿ ಈ ತೆರಿಗೆಯನ್ನು ಶೇ.5ಕ್ಕೆ ಇಳಿಕೆ ಮಾಡಿದ್ದರು. ಇದರಿಂದಾಗಿ ವಾರ್ಷಿಕವಾಗಿ 13 ಸಾವಿರ ರೂ. ತೆರಿಗೆಯನ್ನು ಕಟ್ಟಬೇಕಿತ್ತು.
Advertisement
ಸರ್ಕಾರದ ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯವೇನು?
Individual taxpayers with annual income up to 5 lakh rupees to get full tax rebate: FM Shri Piyush Goyal #Budget2019 https://t.co/bwq6afFrrs
— PIB India (@PIB_India) February 1, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv