Budget 2017
ಬಜೆಟ್ ಬಗ್ಗೆ ರಾಹುಲ್ ಗಾಂಧಿ ಹೀಗಂದ್ರು!
ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿನ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆ ಮುಕ್ತಾಯಗೊಂಡ ಬಳಿಕ ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಬಾರಿಯ ಬಜೆಟ್‍ನಲ್ಲಿ ಯುವಕರಿಗೆ ಹಾಗೂ ರೈತರ ಪರವಾಗಿ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಿಲ್ಲ ಎಂದು ಟೀಕಿಸಿದ್ದಾರೆ.
ಇಂದಿನ ಬಜೆಟ್‍ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಒಳ್ಳೆಯ ಭಾಷಣ ಮಾಡಿದ್ದಾರೆ ಹೊರತು ಯುವಕರ ಉದ್ಯೋಗದ ಬಗ್ಗೆ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಹೀಗಾಗಿ ನಿರುದ್ಯೋಗಸ್ಥ ಯುವಕರಿಗೆ ಹಾಗೂ ರೈತರಿಗೆ ಇದರಿಂದ ಯಾವುದೇ ಲಾಭಗಳಿಲ್ಲ ಎಂದು ತಿಳಿಸಿದ್ದಾರೆ.
ಬಳಿಕ ರೈಲ್ವೇ ಬಜೆಟ್ ಬಗ್ಗೆ ಮಾತನಾಡಿದ ಅವರು, ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಬುಲೆಟ್ ಟ್ರೈನ್ ಬರುತ್ತದೆ ಅಂತಾ ಹೇಳಿದ್ರು. ಆದ್ರೆ ಈ ರೈಲು ಬರುತ್ತಾ ಅಂತಾ ಪ್ರಶ್ನಿಸಿದ್ದಾರೆ. ಇನ್ನು ರಾಜಕೀಯ ಫಂಡ್ ಗೆ ಸಂಬಂಧಿಸಿದಂತೆ ಸರ್ಕಾರದ ಎಲ್ಲಾ ಕ್ರಮಗಳನ್ನು ಬೆಂಬಲಿಸುತ್ತೇನೆ ಅಂತಾ ಹೇಳಿದ್ರು.
