ಬೆಂಗಳೂರು: ಶುಕ್ರವಾರದಿಂದ ಪ್ರಾರಂಭ ಆಗಲಿರೋ ದ್ವಿತೀಯ ಪಿಯುಸಿ ಪರೀಕ್ಷೆಗೂ ಹಿಜಬ್ ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ. ಹಿಜಾಬ್ ಸೇರಿದಂತೆ ಯಾವುದೇ ಧರ್ಮದ ವಸ್ತ್ರಗಳು ಧರಿಸುವಂತಿಲ್ಲ ಅಂತ ಶಿಕ್ಷಣ ಸಚಿವ ನಾಗೇಶ್ ಹೇಳಿದ್ರು.
Advertisement
ಹಿಜಾಬ್‍ನಿಂದ ಪರೀಕ್ಷೆಗೆ ಗೈರಾದರೆ ಮತ್ತೆ ಪರೀಕ್ಷೆಗೆ ಅವಕಾಶ ಇರಲ್ಲ. ವಿದ್ಯಾರ್ಥಿಗಳು ಮತ್ತೆ ಪೂರಕ ಪರೀಕ್ಷೆ ಬರೆಯಬೇಕು ಅಂತ ಹೇಳಿದ್ರು. ಆದರೆ ಇದಕ್ಕೆ ದೂರುದಾರೆ ವಿದ್ಯಾರ್ಥಿನಿ ಅಲ್ಮಾಸ್ ಟ್ವೀಟ್ ಮೂಲಕ ಬೇಸರ ಹೊರಹಾಕಿದ್ದಾರೆ. ಒಂದು ಬಟ್ಟೆಯ ತುಂಡಿನ ನೆಪ ಹೇಳಿ ನಮ್ಮ ಶಿಕ್ಷಣಕ್ಕೆ ಕಲ್ಲು ಹಾಕುತ್ತಿದ್ದೀರಾ ಸಾರ್? ಈ ರೀತಿಯ ಅನ್ಯಾಯ ಮಾಡ್ಬೇಡಿ.. ನಾವು ಬಹಳ ದಿನಗಳಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೀವಿ.. ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಶಿಕ್ಷಣ ಸಚಿವರಲ್ಲಿ ಕೋರಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ
Advertisement
Advertisement
ಈ ಮಧ್ಯೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಭಗವದ್ಗೀತೆ ಪಠಣ ಅನುಷ್ಠಾನ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವರು ಸ್ಪಷ್ಪಡಿಸಿದ್ದಾರೆ. ಅತ್ತ ಹೊಸಪೇಟೆಯಲ್ಲಿ ಸಿಎಂ ಭಾಷಣಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಪಿಹೆಚ್‍ಡಿ ವಿದ್ಯಾರ್ಥಿಯ ನೊಂದಣಿ ರದ್ದುಗೊಳಿಸೋದಾಗಿ ಹಂಪಿ ಕನ್ನಡ ವಿವಿ ನೋಟಿಸ್ ನೋಡಿದೆ. ಇದನ್ನೂ ಓದಿ: ಪಿಯುಸಿ ಪರೀಕ್ಷೆ ಮುಖ್ಯವಾದರೆ ಅಂದಿನ ರೂಲ್ಸ್ ಫಾಲೋ ಮಾಡಿ: ಬಿಸಿ ನಾಗೇಶ್