– ಹಿಂದೂಗಳು ಅನಧಿಕೃತವಾಗಿ ಇಬ್ಬರು ಪತ್ನಿಯರನ್ನ ಹೊಂದಿರ್ತಾರೆ ಎಂದ ಚಿತ್ರ ಸಾಹಿತಿ
ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code Bil) ಬೆಂಬಲ ವ್ಯಕ್ತಪಡಿಸಿರುವ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ (Javed Akhtar), ಇದೇ ವೇಳೆ ಮುಸ್ಲಿಮರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು ಎಂದು ಹಾಸ್ಯ ಮಾಡಿದ್ದಾರೆ.
Advertisement
ಹಿಂದೂಗಳು (Hindu) ಅನಧಿಕೃತವಾಗಿ ಇಬ್ಬರು ಪತ್ನಿಯರನ್ನು ಹೊಂದಿರುತ್ತಾರೆ. ಮಾಹಿತಿ ಪ್ರಕಾರ ಇಂತಹವರ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಾಗಿ ಸಂಹಿತೆಯಲ್ಲಿ ಮುಸ್ಲಿಮರಿಗೆ ಮಾತ್ರ ಬಹುಪತ್ನಿತ್ವ ನಿಷೇಧ ಮಾಡುವುದು ಸರಿಯಲ್ಲ. ನಾನು ಸಮಾನ ಹಕ್ಕು ಮತ್ತು ಕಾನೂನಿನ (Law) ಪರವಾಗಿದ್ದೇನೆ. ನನ್ನ ಮಗ ಮತ್ತು ಮಗಳಿಗೂ ಆಸ್ತಿಯಲ್ಲಿ ಸಮಪಾಲು ನೀಡಿದ್ದೇನೆ. ಹಾಗೆಯೇ ಇದು ಎಲ್ಲರಿಗೂ ಅನ್ವಯವಾಗುವಂತೆ ಇರಬೇಕು. ಮುಸ್ಲಿಮರನ್ನು ಟೀಕಿಸುವುದಕ್ಕೆ ಮಾತ್ರವೇ ಜಾರಿಗೆ ತಂದಂತೆ ಆಗಬಾರದು ಎಂದು ಮನವಿ ಮಾಡಿದ್ದಾರೆ.
Advertisement
ಕೆಲ ದಿನಗಳ ಹಿಂದೆಯಷ್ಟೇ ಉತ್ತರಾಖಂಡ ಸರ್ಕಾರ (Uttarakhand Government) ಏಕರೂಪ ನಾಗರಿಕ ಸಂಹಿತೆಯನ್ನು ಘೋಷಣೆ ಮಾಡಿತು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ; 1835-2024ರ ವರೆಗೆ ಒಂದು ನೋಟ..
Advertisement
Advertisement
ಏಕರೂಪ ನಾಗರಿಕ ಸಂಹಿತೆ:
ರಾಜ್ಯದ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: UCC ಬಿಲ್ ಪಾಸ್ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ
ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್ ಇನ್ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.
ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: Shivamogga Lok Sabha 2024: ಬಿಎಸ್‌ವೈ v/s ಬಂಗಾರಪ್ಪ ಫ್ಯಾಮಿಲಿ – ಯಾರಿಗೆ ಮಣೆ ಹಾಕ್ತಾರೆ ಮಲೆನಾಡ ಜನ?
ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.