ಸಮಾಧಿ ಅಗೆದು ಅಪ್ರಾಪ್ತೆಯ ಶವದ ಅತ್ಯಾಚಾರ- ಶಾಕ್ ಆದ ಕುಟುಂಬಸ್ಥರಿಂದ ದೂರು

Public TV
2 Min Read
grave

ಇಸ್ಲಾಮಾಬಾದ್: ಸಮಾಧಿ ಅಗೆದು ಅಪ್ರಾಪ್ತೆ ಶವದೊಂದಿಗೆ ನೀಚ ಕಾಮುಕರು ಅತ್ಯಾಚಾರ ಮಾಡಿದ ವಿಲಕ್ಷಣ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ.

ಈ ಘಟನೆ ಮೇ 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗುಜರಾತ್‍ನಲ್ಲಿ ಕ್ರೂರಿಗಳು ಸಮಾಧಿಯನ್ನು ಅಗೆದು ಬಾಲಕಿಯ ಶವವನ್ನು ಹೊರತೆಗೆದು ಅತ್ಯಾಚಾರ ಎಸಗಿದ್ದಾರೆ. ಈ ಮೂಲಕ ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ.

grave 3

ಈ ಸಂಬಂಧ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್‍ಎನ್) ಉಪಪ್ರಧಾನ ಕಾರ್ಯದರ್ಶಿ ಅತಾವುಲ್ಲಾ ತರಾರ್ ಅವರು ಮೇ 6ರಂದು ಟ್ವಿಟ್ಟರ್‍ನಲ್ಲಿ ಸಮಾಧಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈಗಾಗಲೇ 17 ಮಂದಿ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ವೈಜ್ಞಾನಿಕ ವಿಧಾನಗಳ ಮೂಲಕ ತನಿಖೆಗೆ ಒಳಪಡಿಸಲಾಗಿದೆ. ಈ ಬಗ್ಗೆ ಸಿಎಂ ಕೂಡ ವರದಿ ಕೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮೃತ ಬಾಲಕಿಯನ್ನು ಸ್ಮಶಾನದಲ್ಲಿ ಹೂತು ಮರುದಿನ ಸಂಬಂಧಿಕರು ತಮ್ಮ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಲು ಸಮಾಧಿ ಬಳಿ ಹೋದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಮಾಧಿ ಅಗೆದು ಮೃತದೇಹವನ್ನು ಹೊರಗೆ ತೆಗೆಯಲಾಗಿತ್ತು. ಬಾಲಕಿಯ ದೇಹದಲ್ಲಿ ಯಾವುದೇ ಬಟ್ಟೆ ಇರಲಿಲ್ಲ. ಅಲ್ಲದೆ ದೇಹದ ಮೇಲೆ ರೇಪ್ ಮಾಡಿರುವ ಕುರುಹುಗಳು ಪತ್ತೆಯಾಗಿತ್ತು. ಇದನ್ನು ಕಂಡ ಬಾಲಕಿಯ ಚಿಕ್ಕಪ್ಪ ಕುಡಲೇ ಸ್ಥಳೀಯ ಪೊಲಿಸ್ ಠಾಣೆಗೆ ತೆರಳಿ ಎಫ್‍ಐಆರ್ ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

grave 2

ಬಾಲಕಿ ವಿಕಲಚೇತನಳಾಗಿದ್ದು ಮೇ 4 ರಂದು ಮೃತಪಟ್ಟಿದ್ದಳು. ಹೀಗಾಗಿ ಸಂಬಂಧಿಕರು ಧಾರ್ಮಿಕ ಸಂಪ್ರದಾಯದಂತೆ ಸಂಜೆ 6 ಗಂಟೆ ಸುಮಾರಿಗೆ ಆಕೆಯನ್ನು ಸ್ಮಶಾನದಲ್ಲಿ ಸಮಾಧಿ ಮಾಡಿ ಮನೆಗೆ ಮರಳಿದರು. ಮರುದಿನ ಅವರು ಕೆಲ ಆಚರಣೆಗಳನ್ನು ಮಾಡಲು ಸ್ಮಶಾನಕ್ಕೆ ಹಿಂದಿರುಗಿದ್ದಾರೆ. ಆಗ ಸಮಾಧಿಯನ್ನು ಅಗೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಬಾಲಕಿಯ ಶವ ಕೂಡ ಅಲ್ಲಿ ಇರಲಿಲ್ಲ. ಕೂಡಲೇ ಸಂಬಮಧಿಕರೆಲ್ಲರೂ ಅಕ್ಕಪಕ್ಕ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಶವ ಹೂತ ಸುಮಾರು 200 ಚದರ ಅಡಿ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅಲ್ಲಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Share This Article
Leave a Comment

Leave a Reply

Your email address will not be published. Required fields are marked *