ನವದೆಹಲಿ: ಸಾಲ್ವಾ ಜುಡುಮ್ ತೀರ್ಪಿನ ಕುರಿತು ಗೃಹ ಸಚಿವ ಅಮಿತ್ ಶಾ (Amit Shah) ಅವರು ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ (Sudershan Reddy) ವಿರುದ್ಧ ಮಾಡಿರುವ ದಾಳಿಯನ್ನು ‘ದುರದೃಷ್ಟಕರ’ ಮತ್ತು ‘ಪೂರ್ವಾಗ್ರಹ ಪೀಡಿತ’ ಎಂದು ನಿವೃತ್ತ ನ್ಯಾಯಾಧೀಶರು ಕರೆದಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಮದನ್ ಬಿ. ಲೋಕೂರ್ ಮತ್ತು ಜೆ. ಚೆಲಮೇಶ್ವರ್ ಸೇರಿದಂತೆ 18 ನಿವೃತ್ತ ನ್ಯಾಯಾಧೀಶರ ತಂಡ ಸಚಿವರೊಬ್ಬರ ಸುಪ್ರೀಂ ಕೋರ್ಟ್‌ನ ತೀರ್ಪಿನ `ಪೂರ್ವಾಗ್ರಹ ಪೀಡಿತ ತಪ್ಪು ವ್ಯಾಖ್ಯಾನ’ ಅದರ ನ್ಯಾಯಾಧೀಶರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅವರು ಮಾವೋವಾದವನ್ನು ‘ಬೆಂಬಲಿಸುತ್ತಾರೆ’ ಎಂದು ಆರೋಪಿಸಿದ್ದರು. ಸುಪ್ರೀಂ ಕೋರ್ಟ್ ನ ಸಾಲ್ವಾ ಜುಡುಮ್ ತೀರ್ಪು ಜಾರಿಯಾಗದಿದ್ದರೆ ಎಡಪಂಥೀಯ ಉಗ್ರವಾದ 2020ರ ವೇಳೆಗೆ ಕೊನೆಗೊಳ್ಳುತ್ತಿತ್ತು ಎಂದು ಅಮಿತ್ ಶಾ ಎಂದಿದ್ದರು.
ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಪ್ರಚಾರ ಸೈದ್ಧಾಂತಿಕವಾಗಿರಬಹುದು. ಆದರೆ ಅದನ್ನು ಸಭ್ಯತೆ ಮತ್ತು ಘನತೆಯಿಂದ ಅದನ್ನು ನಡೆಸಬಹುದು. ಯಾವುದೇ ಅಭ್ಯರ್ಥಿಯ ಸಿದ್ಧಾಂತ ಎಂದು ಕರೆಯಲ್ಪಡುವ ಟೀಕೆಯನ್ನು ತಪ್ಪಿಸಬೇಕು ಎಂದು ನಿವೃತ್ತ ನ್ಯಾಯಾಧೀಶರು ತಿಳಿಸಿದ್ದಾರೆ.