ಗಾಂಧಿಯುಗ- (1920-1947): ಇಂಗ್ಲೆಂಡ್‌ನಲ್ಲಿ (England) ಬ್ಯಾರಿಸ್ಟರ್ ಪದವಿ ಪಡೆದ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಅಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಟವನ್ನೂ ಮಾಡಿದರು. ದಕ್ಷಿಣ ಆಫ್ರಿಕಾದಲ್ಲಿ (South Africa) ಬ್ರಿಟಿಷರ ವಿರುದ್ಧ ಮಾಡಿದ ಚಳವಳಿಯ ಸ್ಫೂರ್ತಿಯೂ ಭಾರತದಲ್ಲಿ ಬ್ರಿಟಿಷರನ್ನು ವಿಮೋಚನೆ ಮಾಡಲು ಸಹಕಾರಿಯಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ 1920-1947ರ ಕಾಲವನ್ನು ಗಾಂಧಿಯುಗವೆಂದೂ ಕೆಲವರು ಗುರುತಿಸುತ್ತಾರೆ. ಭಾರತ ಸ್ವಾತಂತ್ರ್ಯ ಪಡೆಯುವವರೆಗೂ ನಡೆದ ಘಟನಾವಳಿಗಳಲ್ಲಿ ಗಾಂಧೀಜಿಯವರು ಮುಖ್ಯಭೂಮಿಕೆಯಲ್ಲಿದ್ದರು.
Advertisement
ಮಹಾತ್ಮ ಗಾಂಧೀಜಿಯವರ ಪ್ರವೇಶದಿಂದಾಗಿ ಸ್ವಾತಂತ್ರ್ಯ ಚಳವಳಿಯು ಹೊಸ ಆಯಾಮ ಪಡೆಯಿತು. ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ‘ಪರೋಕ್ಷ ಪ್ರತಿರೋಧ’, ‘ಅಹಿಂಸೆ’ ಮತ್ತು ‘ಸತ್ಯಾಗ್ರಹ ಪ್ರಮುಖ ತಂತ್ರಗಳನ್ನಾಗಿ ಬಳಸಿಕೊಂಡರು. ತಮ್ಮ ಸಿದ್ಧಾಂತಗಳನ್ನು ಅವರು ‘ಯಂಗ್ ಇಂಡಿಯಾ’ (Young India) ಪತ್ರಿಕೆಯಲ್ಲಿ ವ್ಯಕ್ತಪಡಿಸುತ್ತಾ ಹೋದರು. ಸತ್ಯಾಗ್ರಹವು ಇವರ ಹೋರಾಟದ ಪ್ರಮುಖ ಅಸ್ತ್ರವಾಯಿತು. ಇದನ್ನೂ ಓದಿ: IndependenceDay: ಭಾಗ-1: ಸ್ವಾತಂತ್ರ್ಯ ಹೋರಾಟದ ಹಾದಿ ವಿಭಿನ್ನ… ತ್ಯಾಗ ಬಲಿದಾನಗಳ ಸಂಕೇತ
Advertisement
ಭಾರತದಲ್ಲಿ ತೀವ್ರಗೊಂಡ ಕ್ರಾಂತಿಕಾರಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅದನ್ನ ಹತ್ತಿಕ್ಕುವ ಉದ್ದೇಶದಿಂದ ಅನೇಕ ಕಾಯ್ದೆಗಳನ್ನ ತರಲಾಯಿತು. ಅವುಗಳಲ್ಲಿ ಫೆಬ್ರವರಿ 1919ರಲ್ಲಿ ಜಾರಿಗೆ ತರಲಾದ ರೌಲತ್ ಕಾಯಿದೆಯು ಪ್ರಮುಖವಾಗಿದೆ. ಇದು ಕೇವಲ ಗುಮಾನಿಯ ಮೇಲೆ ಜನರನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರವನ್ನ ನ್ಯಾಯಾಧೀಶರಿಗೆ ನೀಡಿತು. ಗಾಂಧೀಜಿ ಅವರು ಈ ಕಾಯ್ದೆ ವಿರುದ್ಧ ಸತ್ಯಾಗ್ರಹ ಅಸ್ತ್ರ ಬಳಸಿ ಹೋರಾಟ ಪ್ರರಂಭಿಸಿದರು. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
Advertisement
Advertisement
ನೆನಪಿದ್ಯಾ ಜಲಿಯನ್ ವಾಲಾಬಾಗ್ ಹತ್ಯಾಕಾಂಡ?:
ರೌಲತ್ ಕಾಯ್ದೆಯ ವಿರುದ್ಧ ಪಂಜಾಬ್‌ನಲ್ಲಿ ಚಳವಳಿಯು ವ್ಯಾಪಕವಾಗಿ ಹರಡಿತ್ತು. ಅಲ್ಲಲ್ಲಿ ಇದು ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಸರ್ಕಾರವು ಅಮೃತಸರ ನಗರವನ್ನ ಜನರಲ್ ಡಯರ್ ಎಂಬ ಸೇನಾಧಿಕಾರಿಯ ಉಸ್ತುವಾರಿಗೆ ನೀಡಿತು. ಜನರಲ್ ಡಯರ್ ಪಕ್ಷುಬ್ಧ ಪರಿಸ್ಥಿತಿಯಲ್ಲಿ ನಗರವನ್ನು ಸೇನಾಳ್ವಿಕೆಗೆ ಒಳಪಡಿಸಿ ಸಭೆಗಳನ್ನು ನಿಷೇಧಿಸಿದನು. ಆದರೆ ಜಲಿಯನ್ ವಾಲಾಬಾಗ್‌ನಲ್ಲಿ ಸಭೆ ಸೇರಲು ಹೋರಾಟಗಾರರು ಮೊದಲೇ ನಿರ್ಧರಿಸಿದ್ದರು. ಅವರಿಗೆ ಈ ನಿಷೇಧದ ಬಗ್ಗೆ ಪೂರ್ಣ ತಿಳುವಳಿಕೆ ಇರಲಿಲ್ಲ. ಸುಮಾರು 20 ಸಾವಿರ ಜನ ರೌಲತ್ ಕಾಯ್ದೆಯ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಸೇರಿದ್ದರು. ಸುತ್ತಲೂ ಎತ್ತರವಾದ ಗೋಡೆಗಳಿಂದ, ಕಿರಿದಾದ ಪ್ರವೇಶ ದ್ವಾರದಿಂದ ಕೂಡಿದ ಜಲಿಯನ್ ವಾಲಾಬಾಗ್‌ನಲ್ಲಿ ಸಭೆಯು ಶಾಂತಿಯಿಂದ ನಡೆಯುತ್ತಿತ್ತು. ಅಲ್ಲಿಗೆ ತನ್ನ ಸೈನ್ಯದೊಂದಿಗೆ ಬಂದ ಜನರಲ್ ಡಯರ್ ಯಾವ ಮುನ್ಸೂಚನೆ ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದನು.
ಈ ಹತ್ಯಾಕಾಂಡದಲ್ಲಿ 379 ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು. ಸಹಸ್ರಾರು ಜನರು ಗಾಯಗೊಂಡರು. ಈ ಘಟನೆಯನ್ನ ಜಲಿಯನ್ ವಾಲಾಬಾಗ್ ದುರಂತ ಎಂದು ಕರೆಯಲಾಯಿತು. ಸರ್ಕಾರವು ಜಲಿಯನ್ ವಾಲಾಬಾಗ್ ದುರಂತದ ವಿಚಾರಣೆಗಾಗಿ ಹಂಟರ್ ಆಯೋಗ ನೇಮಿಸಿತು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಭಾರತೀಯರ ಮೇಲಿನ ದೌರ್ಜನ್ಯ ಮತ್ತೂ ಮುಂದುವರಿಯಿತು.
ಅಸಹಾಕಾರ ಚಳವಳಿ:
ಗಾಂಧೀಜಿ ಬ್ರಿಟಿಷರ ವಿರುದ್ಧ 1920ರಲ್ಲಿ ಅಸಹಕಾರ ಚಳವಳಿಗೆ ಕರೆ ನೀಡಿದರು. ಅವರ ಕರೆಯನ್ನು ಬೆಂಬಲಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನ ಬಹಿಷ್ಕರಿಸಿದರು. ವಕೀಲರು ನ್ಯಾಯಾಲಯಕ್ಕೆ ಬಹಿಷ್ಕರಿಸಿದರು. ಭಾರತೀಯ ಗಣ್ಯರು, ಬ್ರಿಟಿಷರು ನೀಡಿದ್ದ ಪುರಸ್ಕಾರಗಳನ್ನ ಹಿಂದಿರುಗಿಸಿದರು. ಈ ಚಳವಳಿಯನ್ನು ಬೆಂಬಲಿಸಿ ಮೋತಿಲಾಲ್ ನೆಹರೂ ಸಿ.ಆರ್ ದಾಸ್ ತಮ್ಮ ವಕೀಲ ವೃತ್ತಿಯನ್ನೇ ತ್ಯಜಿಸಿದರು. ಈ ಅವಧಿಯಲ್ಲಿ ಬ್ರಿಟನ್ ರಾಜಕುಮಾರನ ಭಾರತ ಭೇಟಿಯನ್ನೂ ವಿರೋಧಿಸಲಾಯಿತು. ರಾಜಕುಮಾರನ ಭೇಟಿಯ ವಿರೋಧವಾಗಿ ದೇಶಾದ್ಯಂತ ಹರತಾಳಗಳು ನಡೆದವು. ಇದನ್ನೂ ಓದಿ: 77th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ
ಕಾನೂನು ಭಂಗ ಚಳವಳಿ:
ಕಾನೂನು ಭಂಗ ಚಳವಳಿಯ ನೇತೃತ್ವ ವಹಿಸಿಕೊಂಡ ಗಾಂಧೀಜಿಯವರು ವೈಸರಾಯ್ ಇರ್ವಿನ್ ಮುಂದೆ ಉಪ್ಪಿನ ಮೇಲಿನ ತೆರಿಗೆ ರದ್ದತಿಯು ಸೇರಿದಂತೆ 11 ಬೇಡಿಕೆಗಳನ್ನು ಸಲ್ಲಿಸಿದ್ದರು. ಈ ಬೇಡಿಕೆಗಳು ಈಡೇರದೇ ಹೋದಲ್ಲಿ ಕಾನೂನು ಭಂಗ ಚಳವಳಿ ಆರಂಭಿಸುವುದಾಗಿ ಗಾಂಧೀಜಿಯವರು ಘೋಷಿಸಿದರು. ಆದ್ರೆ ಇರ್ವಿನ್ ಅವರ ಬೇಡಿಕೆಗಳನ್ನ ಪರಿಗಣಿಸಲಿಲ್ಲ. ಇದರ ಪರಿಣಾಮವಾಗಿ ಗಾಂಧೀಜಿಯವರು 1930ರಲ್ಲಿ ಸಬರಮತಿ ಆಶ್ರಮದಿಂದ ಸೂರತ್‌ನ ಸಮೀಪದ ಸಮುದ್ರ ತೀರದ ದಂಡಿಯವರೆಗೆ ತಮ್ಮ ಅನುಯಾಯಿಗಳೊಂದಿಗೆ ಹೊರಟು ದಂಡಿಯ ಕಡಲ ತೀರದಲ್ಲಿ ತಾವೇ ಉಪ್ಪು ತಯಾರಿಸಿ ಕಾನೂನು ಭಂಗ ಚಳವಳಿ ಪ್ರಾರಂಭಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ‘ದಂಡಿ ಕಾಲ್ನಡಿಗೆಯಲ್ಲಿ ಎಂದು ಕರೆಯುತ್ತಾರೆ.
ಕಾನೂನು ಭಂಗ ಚಳವಳಿಯಲ್ಲಿ ಭಾಗವಹಿಸಿದ್ದ ವಿಜಯಲಕ್ಷ್ಮಿ ಪಂಡಿತ್, ಕಮಲಾ ನೆಹರೂ, ವಲ್ಲಭಬಾಯಿ ಪಟೇಲ್, ರಾಜಗೋಪಾಲಚಾರಿ, ಬಾಬು ರಾಜೇಂದ್ರ ಪ್ರಸಾದ್ ಮೊದಲಾದ ಸಾವಿರಾರು ಜನರನ್ನ ದೇಶದ ನಾನಾ ಭಾಗಗಳಲ್ಲಿ ವ್ಯಾಪಿಸಿತು.
Web Stories