ವಿಜಯಪುರ: ಜಿಲ್ಲೆಯ ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ (NH) ಅಗಲೀಕರಣಕ್ಕಾಗಿ ಜಮೀನು ವಶಕ್ಕೆ ಪಡೆದು ಅನ್ಯಾಯ ಮಾಡಿ, ಮೂರು ವರ್ಷ ಕಳೆದರೂ ಪರಿಹಾರ ನೀಡದ್ದಕ್ಕೆ ರೈತರು ಎಸಿ ಕಚೇರಿಯನ್ನೇ ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಇಂಡಿ ತಾಲೂಕಿನ ಕಪನಿಂಬರಗಿ ಗ್ರಾಮದ ವಾಮನ್ ರಾವ್ ಎಂಬುವವರ ಎನ್‌ಎ ಜಮೀನು ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆ ಜಮೀನನ್ನು ರಸ್ತೆ ಅಗಲಿಕರಣಕ್ಕಾಗಿ ವಶಕ್ಕೆ ಪಡೆದು, ಪ್ರತಿ ಚದರ ಅಡಿಗೆ 300 ರೂ.ಯಂತೆ ಪರಿಹಾರ ನೀಡಿತ್ತು. ಆದರೆ ಅದೇ ಹೆದ್ದಾರಿಯಲ್ಲಿ ಜಮೀನು ಹೊಂದಿರುವವರಿಗೆ ಪ್ರತಿ ಚದರ ಅಡಿಗೆ 4,000 ರೂ.ಯಂತೆ ಪರಿಹಾರ ನೀಡಿದ್ದರು.ಇದನ್ನೂ ಓದಿ: ಕೋಟಿ ಒಡೆಯರಾದ ರಾಯರು – 21 ದಿನದಲ್ಲಿ 3.06 ಕೋಟಿ ಕಾಣಿಕೆ ಸಂಗ್ರಹ
ವಿಷಯ ತಿಳಿದ ಮಾಲೀಕ ವಾಮನ್ ಅವರು ತಮಗಾದ ಅನ್ಯಾಯದ ಬಗ್ಗೆ ಪ್ರಶ್ನಿಸಿ ಜಿಲ್ಲಾಧಿಕಾರಿ ಹಾಗೂ ನ್ಯಾಯಾಲಯದ ಮೊರೆ ಹೋದರು. ಬಳಿಕ ಅಲ್ಲಿಯೂ ಕೂಡ ವಾಮನ್ ಅವರ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಿತ್ತು. ಆದರೆ ಅಲ್ಲಿಯೂ ಕೂಡ ವಾಮನ್ ಪರವಾಗಿಯೇ ತೀರ್ಪು ಬಂದಿತ್ತು.
ತೀರ್ಪು ಬಂದು ಮೂರು ವರ್ಷ ಕಳೆದರೂ ಪರಿಹಾರ ಹಣ ನೀಡದೇ ಸತಾಯಿಸುತ್ತಿದ್ದಾರೆ. ಹೀಗಾಗಿ ರೈತರು ಸೇರಿಕೊಂಡು ಎಸಿ ಕಚೇರಿಯ ವಿರುದ್ಧ ವಾರಂಟ್ ತಂದು, ಕಚೇರಿಯ ಪೀಠೋಪಕರಣಗಳು, ಕಂಪ್ಯೂಟರ್‌ಗಳನ್ನ ಜಪ್ತಿ ಮಾಡಿ, ಕೊಂಡೊಯ್ದಿದ್ದಾರೆ. ಇದರಿಂದಾದರೂ ಅಧಿಕಾರಿಗಳಿಗೆ ರೈತರ ನೋವು ಅರ್ಥ ಆಗಲಿ ಅನ್ನೋದು ನಮ್ಮ ಉದ್ದೇಶ ಎಂದು ಮಾಲೀಕ ವಾಮನ್ ರಾವ್ ಪುತ್ರ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಟಾಕ್ಸಿಕ್ ಬಿಡುಗಡೆಯಾಗುವ ಸಮಯದಲ್ಲೇ ಬರಲಿದೆ ಐದು ಬಿಗ್ ಬಜೆಟ್ ಸಿನಿಮಾಗಳು!

