ರಾಯಚೂರು: ಕೊಲೆ ಪ್ರಕರಣದ ವಿಚಾರಣಾಧೀನ ಖೈದಿಯೊಬ್ಬ ಜೈಲಿನ ಗೋಡೆ ಹಾರಿ ಪರಾರಿಯಾದ ಘಟನೆ ದೇವದುರ್ಗ (Devadurga) ಉಪ ಕಾರಾಗೃಹದಲ್ಲಿ ನಡೆದಿದೆ.
ಅನ್ವರ್ ಬಾಷಾ ಎಂಬಾತ ಜೈಲಿನಿಂದ ಪರಾರಿಯಾಗಿರುವ ಆರೋಪಿ. ಈತ ದೇವದುರ್ಗದ ಮಸಿಹಾಳ ಬಳಿ ಮೇ ತಿಂಗಳಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯಾಗಿದ್ದ. ವಿಜಯನಗರದ ರಾಮನಗರ ನಿವಾಸಿಯಾಗಿದ್ದ ಈತ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ. ಆರೋಪಿಯ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಕ್ಕರೆ ಅಂತ ಡ್ರೈನೇಜ್ ಪೈಪ್ ಕ್ಲೀನರ್ ಪೌಡರ್ ತಿಂದ ಮಕ್ಕಳು; ಆಸ್ಪತ್ರೆಗೆ ದಾಖಲು
ಮಸಿಹಾಳ ಗ್ರಾಮದ ಲಾಲ್ ಸಾಬ್ ಎಂಬಾತನ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಲಾಲ್ ಸಾಬ್‍ನ ಪತ್ನಿ ರಜ್ಮಾ ಜೊತೆ ಆರೋಪಿ ಅನೈತಿಕ ಸಂಬಂಧ ಹೊಂದಿದ್ದ. ಇದೇ ವಿಚಾರವಾಗಿ ಆಕೆಯ ಪತಿಯನ್ನು ಕೊಲೆಗೈದಿದ್ದ. ಪ್ರಕರಣದಲ್ಲಿ ಭಾಗಿಯಾಗಿದ್ದ ಅನ್ವರ್ ಹಾಗೂ ಕೊಲೆಯಾದ ಲಾಲ್ ಸಾಬ್‍ನ ಪತ್ನಿ ರಜ್ಮಾಳನ್ನ ಗಬ್ಬೂರು ಠಾಣೆ ಪೊಲೀಸರು (Police) ಬಂಧಿಸಿದ್ದರು. ಇದನ್ನೂ ಓದಿ: ಪುಷ್ಪಾ ಸಿನಿಮಾ ರೀತಿ ಲಿಕ್ಕರ್ ಸ್ಮಗ್ಲಿಂಗ್ – 54 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ ಅಬಕಾರಿ ಪೊಲೀಸರು
Web Stories