ವಾಷಿಂಗ್ಟನ್: ಪಾಕ್ ಏನಾದರೂ ಭಾರತದ ವಿರುದ್ಧ ಪ್ರಚೋದನಾ ಕಾರ್ಯ ಮಾಡಿದರೆ ಪಾಕಿಸ್ತಾನದ ವಿರುದ್ಧ ಮೋದಿ ಸರ್ಕಾರ ಭಾರೀ ತಿರುಗೇಟು ನೀಡುವ ಸಾಧ್ಯತೆ ಇದೆ ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
Advertisement
ರಾಷ್ಟ್ರೀಯ ಗುಪ್ತಚರ ನಿದೇರ್ಶಕರ ಕಚೇರಿಯು ಅಮೆರಿಕ ಕಾಂಗ್ರೆಸ್‍ನಲ್ಲಿ ಅಧಿಕೃತ ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ
Advertisement
ಈ ವರದಿಗಳ ಪ್ರಕಾರ, ಪಾಕಿಸ್ತಾನ ಭಾರತವನ್ನು ವಿರೋಧಿಸುವ ಉಗ್ರರಿಗೆ ಮೊದಲಿನಿಂದಲೂ ಆಶ್ರಯ ಕೊಡುತ್ತಿದೆ. ಒಂದು ವೇಳೆ ಪಾಕ್ ಏನಾದರೂ ಭಾರತದ ವಿರುದ್ಧ ಪ್ರಚೋದನಾ ಕಾರ್ಯ ಮಾಡಿದರೆ ಅವರಿಗೆ ಸರಿಯಾಗಿ ತಿರುಗೇಟು ನೀಡಲು ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಹಿಂದಿನ ಸರ್ಕಾರಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕ್ ವಿರುದ್ಧ ಸೇನಾಬಲವನ್ನು ಬಳಸಿಕೊಂಡು ತಿರುಗೇಟು ಕೊಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
Advertisement
Advertisement
ವಿಸೇನಾ ಜಟಾಪಟಿಯಲ್ಲಿ ಕಾಶ್ಮೀರ ಹಿಂಸಾತ್ಮಾಕ ಅಶಾಂತಿ ಉಂಟಾಗುವ ಸಾಧ್ಯತೆಯಿದೆ. ಈ ತಿರುಗೇಟು ಪಾಕ್‍ಗೆ ದೊಡ್ಡ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವರದಿ ಹೇಳಿದೆ. ಇದನ್ನೂ ಓದಿ: 40 ಸಾವಿರ ಮೌಲ್ಯದ ಸರ್ಕಾರಿ ಶಾಲೆಯ ಪ್ರೊಜೆಕ್ಟರ್ ಕದ್ದರು!
ವಿವಾದಿತ ಗಡಿಯಲ್ಲಿ ಭಾರತ ಹಾಗೂ ಚೀನಾ ಸೇನೆಗಳು ನಿಲುವು ಎರಡೂ ಪರಮಾಣು ಶಕ್ತಿಯುಳ್ಳ ದೇಶಗಳ ನಡುವೆ ಸಶಸ್ತ್ರಮುಖಾಮುಖಿಯ ಅಪಾಯವನ್ನು ಹೆಚ್ಚಿಸಲಿದೆ ಎಂದು ವರದಿ ತಿಳಿಸಿದೆ.