ಬೆಂಗಳೂರು: ಜುಲೈ 1 ರಿಂದ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನಾವು 7 ಕೆಜಿ ಕೊಡುತ್ತಿದ್ದೇವೆ. ಈಗ 5 ಕೆಜಿ ನೀಡಲಾಗುತ್ತಿದೆ. ಈಗ ಅಕ್ಕಿ ಸಂಗ್ರಹ ಇಲ್ಲದ ಕಾರಣ ಜುಲೈ 1 ರಿಂದ ಅನ್ನ ಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು. ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರು ಇದರ ಫಲಾನುಭವಿಗಳಾಗಲಿದ್ದಾರೆ ಎಂದು ತಿಳಿಸಿದರು.
Advertisement
Advertisement
ಗ್ಯಾರಂಟಿ ಯೋಜನೆ ಜಾರಿ ಕುರಿತು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆಗೆ ಗ್ಯಾರಂಟಿ ಜಾರಿ ಮಾಡ್ತೀವಿ. ಎಲ್ಲ ಜಾತಿ, ಧರ್ಮ, ಭಾಷಿಕರಿಗೂ ಗ್ಯಾರಂಟಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.
Advertisement
ಅಂತ್ಯೋದಯ ಕಾರ್ಡ್ ಇರುವ ಕುಟುಂಬಕ್ಕೆ 35 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಈಗ ಈ ಕಾರ್ಡ್‌ಗೂ ತಲಾ 10 ಕೆಜಿ ನೀಡಲಾಗುತ್ತದೆ.