ಬೆಳಗಾವಿ: ಶಿವಕುಮಾರ್ ಯು.ಬಿ. ಆಕರ್ಷಕ ಶತಕ ಹಾಗೂ ಎನ್.ಜಯೇಶ್ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡವು ಆಂಧ್ರ ಪ್ರದೇಶದ ವಿರುದ್ಧ 7 ವಿಕೆಟ್‍ಗಳ ಗೆಲುವು ಸಾಧಿಸಿದೆ.
ಇಲ್ಲಿನ ಕೆಎಸ್‍ಸಿಎ ಮೈದಾನದಲ್ಲಿ ಆಂಧ್ರ ಪ್ರದೇಶದ ವಿರುದ್ಧದ ನಡೆದ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೋಫಿಯ ‘ಎ’ ಗುಂಪಿನ ನಾಲ್ಕು ದಿನದ ಆಟದಲ್ಲಿ ಕರ್ನಾಟಕ ಭರ್ಜರಿ ಗೆಲುವು ಕಂಡಿದೆ.
Advertisement
Advertisement
187 ರನ್‍ಗಳ ಮುನ್ನಡೆಯೊಂದಿಗೆ ಬುಧವಾರ ಬೆಳಗ್ಗೆ ನಾಲ್ಕನೇ ದಿನದಾಟ ಆರಂಭಿಸಿದ ಆಂಧ್ರ ಪ್ರದೇಶದ ತಂಡವು ಅಂತಿಮವಾಗಿ 228 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆಂಧ್ರ ಪ್ರದೇಶ ನೀಡಿದ್ದ 242 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಬ್ಯಾಟ್ಸ್‌ಮನ್ ಶಿವಕುಮಾರ್.ಯು.ಬಿ 111 ರನ್ ಹಾಗೂ ಎನ್.ಜಯೇಶ್ ಅಜೇಯ 57 ರನ್‍ಗಳ ಕಾಣಿಕೆ ನೀಡಿದರು. ಈ ಮೂಲಕ ಕರ್ನಾಟಕವು 60.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 247 ರನ್‍ಗಳಿಸಿ ಜಯ ಗಳಿಸಿ 6 ಅಂಕ ಸಂಪಾದಿಸಿದೆ.
Advertisement
ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿವಕುಮಾರ್.ಯು.ಬಿ ಹಾಗೂ ಅಂಕಿತ್ ಉಡಪಾ ಮೊದಲ ವಿಕೆಟ್‍ಗೆ 81 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎರಡನೇ ವಿಕೆಟ್‍ಗೆ ಶಿವಕುಮಾರ್ ಜೊತೆಯಾದ ಎನ್.ಜಯೇಶ್ ರಕ್ಷಾಣ್ಮಾತಕ ಆಟಕ್ಕೆ ಮೊರೆಹೋಗಿ ಒಂಟಿ ರನ್‍ಗಳನ್ನು ಕದಿಯುತ್ತಾ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.
Advertisement
ಶಿವಕುಮಾರ್ 49 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಂತರ 134 ಎಸೆತಗಳಲ್ಲಿ ಶತಕ ದಾಖಲಿಸಿದರು. ಬಳಿಕ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಅವರು 146 ಎಸೆತಗಳಲ್ಲಿ 111 ರನ್ (15 ಬೌಂಡರಿ) ಗಳಿಸಿ ಕೆ.ಮಹೀಪ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಸೇರಿದರು. ಶಿವಕುಮಾರ್ ಹಾಗೂ ಎನ್.ಜಯೇಶ್ ಜೋಡಿಯು ಎರಡನೇ ವಿಕೆಟ್‍ಗೆ 30 ಓವರ್‍ಗಳಲ್ಲಿ 102 ರನ್‍ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಆಂಧ್ರ ಪ್ರದೇಶದ ಬಾಲರ್‍ಗಳು ಪರದಾಡಿದರು.
ಗೆಲುವಿಗೆ 46 ರನ್‍ಗಳ ಅಗತ್ಯವಿದ್ದಾಗ ಮೈದಾಕ್ಕಿಳಿದ ಕರ್ನಾಟಕ ತಂಡದ ಉಪನಾಯಕ ಸುಜಯ ಸಾತೇರಿ ಬಿರುಸಿನ ಬ್ಯಾಂಟಿಂಗ್ ನಡೆಸಿದರು. 23 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದ ಎನ್. ಜಯೇಶ್ ಜೊತೆಗೆ 4ನೇ ವಿಕೆಟ್‍ಗೆ 51 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಆಂಧ್ರ ಪ್ರದೇಶದ ಬೌಲರ್ ಎ.ಪ್ರಣಯ್‍ಕುಮಾರ್ ಎರಡು ವಿಕೆಟ್ ಪಡೆದುಕೊಂಡರು.
ಸ್ಕೋರ್ ವಿವರ:
ಆಂಧ್ರ ಪ್ರದೇಶ 281 ರನ್ (ಮೊದಲ ಇನ್ನಿಂಗ್ಸ್), 228 (ಎರಡನೇ ಇನ್ನಿಂಗ್ಸ್)
ಕರ್ನಾಟಕ 268 ರನ್ (ಮೊದಲ ಇನ್ನಿಂಗ್ಸ್), 247 (ಎರಡನೇ ಇನ್ನಿಂಗ್ಸ್)
ಶಿವಕುಮಾರ್ ಯು.ಬಿ 111 ರನ್
ಎನ್.ಜಯೇಶ್ ಅಜೇಯ 57 ರನ್
ಸುಜಯ ಸಾತೇರಿ ಅಜೇಯ 39 ರನ್
(ಎ.ಪ್ರಣಯ ಕುಮಾರ್ 30 ಓವರ್‌ಗೆ 2 ವಿಕೆಟ್ ಹಾಗೂ ಕೆ.ಮಹೀಪ್ ಕುಮಾರ್ 16 ಓವರ್‌ಗೆ 1 ವಿಕೆಟ್)