– 41 ರನ್‍ಗೆ ಜಪಾನ್ ಆಲೌಟ್
– ಕೆಟ್ಟ ಇತಿಹಾಸ ಬರೆದ ಜಪಾನ್
ಬ್ಲೂಮ್‍ಫಾಂಟೈನ್: ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್‍ನಿಂದ ಜಪಾನ್ ವಿರುದ್ಧ ಯುವ ಭಾರತ ತಂಡವು 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.
ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬ್ಲೂಮ್‍ಫಾಂಟೈನ್‍ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಜಪಾನ್ ತಂಡವನ್ನು 22.5 ಓವರ್‌ಗೆ ಆಲೌಟ್ ಮಾಡಿತು. ಜಪಾನ್ ನೀಡಿದ್ದ 41 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ 4.5 ಓವರ್‌ನಲ್ಲೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಯುವ ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಧೋನಿಯಂತೆ ರಾಹುಲ್‍ಗೆ ಹೆಚ್ಚು ಅವಕಾಶ ಸಿಗಲಿ- ಕನ್ನಡಿಗನ ಬೆಂಬಲಕ್ಕೆ ನಿಂತ ವೀರು
Advertisement
Advertisement
ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಜಪಾನ್‍ನ ಇಡೀ ತಂಡವು ಕೇವಲ 41 ರನ್‍ಗಳಿಗೆ ಆಲೌಟ್ ಆಗಿತ್ತು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ. ಜಪಾನ್ ತಂಡದ ಶು ನಾಗೋಚಿ, ಕೆಕೆ ದೊಬೆಲ್ ತಲಾ 7 ರನ್ ಹಾಗೂ ಎಂ.ಕ್ಲೆಮೆಂಟ್ಸ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಮೂರು ಆಟಗಾರರು ತಲಾ ಒಂದು ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, 5 ಜನ ಆಟಗಾರರು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್‍ಗೆ ಪರೇಡ್ ನಡೆಸಿದರು. ಇದನ್ನೂ ಓದಿ: ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ
Advertisement
ಬಿಷ್ಣೋಯ್, ಕಾರ್ತಿಕ್ ಕಮಾಲ್:
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ಕಳಪೆ ಆರಂಭವನ್ನು ತೋರಿತು. 20 ರನ್‍ಗಳ ಒಳಗೆ ಅವರ ಐದು ವಿಕೆಟ್‍ಗಳು ಕಳೆದುಕೊಂಡಿತು. ಯುವ ಭಾರತ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ 8 ಓವರ್ ಬೌಲಿಂಗ್ ಮಾಡಿ, ಕೇವಲ 5 ರನ್ ನೀಡಿ 4 ವಿಕೆಟ್ ಪಡೆದರು. ಈ ಮೂಲಕ ಪಂದ್ಯಶ್ರೇಷ್ಠಕ್ಕೆ ಭಾಜನರಾದರು. ಇತ್ತ ವೇಗದ ಬೌಲರ್ ಗಳಾದ ಕಾರ್ತಿಕ್ ತ್ಯಾಗಿ ಮೂರು ವಿಕೆಟ್ ಮತ್ತು ಆಕಾಶ್ ಸಿಂಗ್ ಎರಡು ವಿಕೆಟ್ ಪಡೆದರು.
Advertisement
Bishnoi's Googly ????
Jaiswal's 6️⃣
Rakibul's hat-trick in #BANvSCO ????
What's your @Nissan Play of the Day?#U19CWC | #FutureStars pic.twitter.com/8PbRwyKAsJ
— ICC (@ICC) January 21, 2020
ಯುವ ಭಾರತದ ಬೌಲರ್ ಗಳ ದಾಳಿ ಎದುರು ಜಪಾನ್ ತಂಡದ ಐದು ಬ್ಯಾಟ್ಸ್‍ಮನ್‍ಗಳಿಗೆ ಖಾತೆ ತೆರೆಯಲು ವಿಫಲರಾದರು. ಅಷ್ಟೇ ಅಲ್ಲದೆ ಒಬ್ಬ ಬ್ಯಾಟ್ಸ್‍ಮನ್ ಹತ್ತು ರನ್ ದಾಟಲು ಸಾಧ್ಯವಾಗಲಿಲ್ಲ.
ಜಪಾನ್ ತಂಡ ನೀಡಿದ್ದ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ 4.5 ಓವರ್ ನಲ್ಲಿ 42 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 29 ರನ್ (18 ಎಸೆತ, 5 ಬೌಂಡರಿ, ಸಿಕ್ಸ್) ಮತ್ತು ಕುಮಾರ್ ಕುಶಾಗ್ರಾ 13 ರನ್ (11 ಎಸೆತ, ಎರಡು ಬೌಂಡರಿ) ಗಳಿಸಿದರು.
ಈ ಹಿಂದಿನ ಪಂದ್ಯದಲ್ಲಿ ಯುವ ಭಾರತವು ಶ್ರೀಲಂಕಾವನ್ನು 90 ರನ್‍ಗಳಿಂದ ಸೋಲಿಸಿತ್ತು. ಭಾರತದ ಮೂರನೇ ಲೀಗ್ ಪಂದ್ಯ ಜನವರಿ 24ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.
For his quickfire 29* off 18, today's @oppo Shotmaker is Yashasvi Jaiswal!#U19CWC | #INDvJPN | #FutureStars pic.twitter.com/GBSvaip6lP
— ICC (@ICC) January 21, 2020