ಬ್ಲೂಮ್‍ಫಾಂಟೈನ್: ಶ್ರೀಲಂಕಾ ದೇಶದ ಅಂಡರ್ 19 ತಂಡದ ಬೌಲರ್ ಮತೀಶಾ ಪತಿರಣ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 175 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಈ ಸಾಧನೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಬ್ಲೂಮ್‍ಫಾಂಟೈನ್‍ನಲ್ಲಿ ನಡೆದ ಭಾರತ ತಂಡದ ಎದುರಿನ ‘ಎ’ ಗುಂಪಿನ ಲೀಗ್ ಪಂದ್ಯದ ವೇಳೆ ಮತೀಶಾ ಪತಿರಣ ಈ ಸಾಧನೆ ಮಾಡಿದ್ದಾರೆ.
Advertisement
https://twitter.com/GOATKingKohli/status/1219214778050072576
Advertisement
ಭಾರತದ ಇನಿಂಗ್ಸ್ ನ 4ನೇ ಓವರ್ ಬೌಲಿಂಗ್ ಮಾಡಿದ ಪತಿರಣ ಕೊನೆಯ ಎಸೆತವನ್ನು ಭಾರೀ ವೇಗದಲ್ಲಿ ಎಸೆದರು. ಸ್ಟ್ರೈಕ್‍ನಲ್ಲಿ ಇದ್ದ ಯಶಸ್ವಿ ಜೈಸ್ವಾಲ್ ಎದುರು ಪತಿರಣ ಎಸೆದ ಬೌನ್ಸರ್ ಲೆಗ್‍ಸೈಟ್ ಕಡೆಗೆ ವೈಡ್ ಆಗಿತ್ತು. ಆದರೆ ಟೆಲಿವಿಷನ್ ಪರದೆ ಮೇಲೆ ಪತಿರಣ ಎಸೆದ ಆ ಎಸೆತದ ವೇಗವನ್ನು ಗಂಟೆಗೆ 175 ಕಿ.ಮೀ ವೇಗ ಹೊಂದಿದೆ ಎಂದು ಪ್ರದರ್ಶಿಸಲಾಯಿತು.
Advertisement
ಆದರೆ ಕೆಲವರು ಈ ದಾಖಲೆಯನ್ನು ಅಲ್ಲಗಳೆದಿದ್ದಾರೆ. ಏಕೆಂದರೆ ಪತಿರಣ ಅವರು ಅದೇ ಓವರ್ ನಲ್ಲಿ ಎಸೆದ ಉಳಿದ ಐದು ಎಸೆತಗಳು ಹೆಚ್ಚು-ಕಡಿಮೆ ಗಂಟೆಗೆ 140 ಕಿ.ಮೀ. ವೇಗದಲ್ಲಿತ್ತು. ಹೀಗಾಗಿ ರೆಕಾರ್ಡಿಂಗ್‍ನಲ್ಲಿ ದೋಷವಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅತಿ ವೇಗದ ಬೌಲಿಂಗ್ ದಾಖಲೆ ಶೋಯೆಬ್ ಅಖ್ತರ್ ಅವರ ಹೆಸರಿನಲ್ಲಿ ಉಳಿದಿದೆ.
Advertisement
Trinity College Kandy produces another Slinga !!
17 Year old Matheesha Pathirana took 6 wickets for 7 Runs on his debut game for Trinity !! #lka pic.twitter.com/q5hrI0Gl68
— Nibraz Ramzan (@nibraz88cricket) September 26, 2019
ಶ್ರೀಲಂಕಾ ತಂಡದ ನಾಯಕ, ವೇಗದ ಬೌಲರ್ ಲಸಿತ್ ಮಾಲಿಂಗ ಅವರ ಶೈಲಿಯಲ್ಲೇ ಪತಿರಣ ಬೌಲಿಂಗ್ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು ಭಾರೀ ಸುದ್ದಿಯಾಗಿದ್ದರು. ಪತಿರಣ ಅವರು 2019ರ ಸೆಪ್ಟೆಂಬರ್ ನಲ್ಲಿ ಕಾಲೇಜು ಮಟ್ಟದ ಟೂರ್ನಿಯೊಂದರಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್‍ಗಳನ್ನು ಕಬಳಿಸಿದ್ದರು. ಅವರ ಈ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಖ್ತರ್ ಹೆಸರಲ್ಲಿದೆ ವಿಶ್ವದಾಖಲೆ:
ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೌಲ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಅವರ ಹೆಸರಲ್ಲಿದೆ. ಅಖ್ತರ್ 2003ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದರು. ಅಕ್ತರ್ ಹೊರತಾಗಿ ಆಸ್ಟ್ರೇಲಿಯಾದ ವೇಗಿಗಳಾದ ಬ್ರೆಟ್ ಲೀ ಮತ್ತು ಶಾನ್ ಟೈಟ್ ಕೂಡ 160 ಕಿ.ಮೀ ವೇಗದ ಗಡಿ ಮುಟ್ಟಿದ್ದಾರೆ. ಭಾರತದ ಪರ ಜಸ್‍ಪ್ರೀತ್ ಬುಮ್ರಾ 153 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವುದು ದಾಖಲೆಯಾಗಿದೆ.