– ಈವರೆಗೆ 9 ಬಾರಿ ಮುಜುಗುರಕ್ಕೀಡಾದ ಬಾಂಗ್ಲಾ ಕ್ರಿಕೆಟ್ ತಂಡ
– ಬಾಂಗ್ಲಾ ಕ್ರಿಕೆಟ್ ತಂಡದ ಹಿರಿಯರ ಮಾರ್ಗದಲ್ಲಿ ಕಿರಿಯರು
ಪೋಷೆಫ್‍ಸ್ಟ್ರೋಮ್: ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಟಗಾರರು ಎರಡು ದಿನಗಳಲ್ಲಿ ತಮ್ಮ ಕೆಟ್ಟ ವರ್ತನೆಯಿಂದ ದೇಶವನ್ನು ಮುಜುಗರಕ್ಕೀಡು ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಪೋಷಫ್‍ಸ್ಟ್ರೋಮ್‍ನಲ್ಲಿ ಭಾನುವಾರ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ಬಾಂಗ್ಲಾ ಗೆದ್ದುಕೊಂಡಿದೆ. ಆದರೆ ಗೆಲುವಿನ ಸಂಭ್ರಮದ ವೇಳೆ ಭಾರತದ ಅಂಡರ್ 19 ಕ್ರಿಕೆಟ್ ತಂಡದ ಆಟಗಾರರೊಂದಿಗೆ ಕೆಟ್ಟದಾಗಿ ವರ್ತಿಸಿತು. ಇದಕ್ಕೂ ಮುನ್ನ ಶನಿವಾರ ಬಾಂಗ್ಲಾದೇಶದ ಹಿರಿಯರ ಕ್ರಿಕೆಟ್ ತಂಡದ ವೇಗದ ಬೌಲರ್ ಅಬು ಜಾಯೆದ್ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಅಜರ್ ಅಲಿಯನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿ ಸಂಭ್ರಮ ತೋರಿದರು. ಇದನ್ನೂ ಓದಿ: ಸಕ್ಸೇನಾ ತಲೆಗೆ ಬಾಲ್ ಎಸೆದ ಬಾಂಗ್ಲಾ ಬೌಲರ್- ಕ್ಷಮೆಯಾಚಿಸಲು ನಕಾರ
Advertisement
Advertisement
ಅಬು ಜಾಯೆದ್ ವರ್ತನೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಜಾಯೆದ್ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ 1 ಡಿಮೆರಿಟ್ ಪಾಯಿಂಟ್ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂದು ಪಾಕಿಸ್ತಾನ ಇನ್ನಿಂಗ್ಸ್ ಮತ್ತು 44 ರನ್‍ಗಳಿಂದ ಜಯಗಳಿಸಿದೆ.
Advertisement
ಡಿಮೆರಿಟ್ ಪಾಯಿಂಟ್ ಅಂದ್ರೇನು?:
ಯಾವುದೇ ಆಟಗಾರ ಐಸಿಸಿ ನಿಯಮವಾಳಿ ದಾಟಿ ಎದುರಾಳಿ ತಂಡ ಹಾಗೂ ಆಟಗಾರರ ವಿರುದ್ಧ ಅಸಭ್ಯವಾಗಿ ವರ್ತನೆ, ನಿಂದನೆ ಮಾಡಿದರೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಒಬ್ಬ ಆಟಗಾರ 24 ತಿಂಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್‍ಗಳನ್ನು ಹೊಂದಿದ್ದರೆ ಆ ಆಟಗಾರ ಕ್ರಿಕೆಟ್ ನಿಬರ್ಂಧನಕ್ಕೆ ತುತ್ತಾಗುತ್ತಾನೆ. ಅಷ್ಟೇ ಅಲ್ಲದೆ ಎರಡು ಡಿಮೆರಿಟ್ ಪಾಯಿಂಟ್ ಪಡೆದರೆ ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯ ಅಥವಾ ಎರಡು ಟಿ20 ಪಂದ್ಯಗಳಿಗೆ ನಿಷೇಧಕ್ಕೆ ಒಳಗಾಗುತ್ತಾನೆ.
Advertisement
ಅಂಡರ್-19 ವಿಶ್ವಕಪ್ ಗೆದ್ದ ನಂತರ ಬಾಂಗ್ಲಾದೇಶದ ಆಟಗಾರರು ಪಿಚ್ ಬಳಿ ತಲುಪಿ ಭಾರತೀಯ ಆಟಗಾರರ ಮಧ್ಯ ಪ್ರವೇಶಿಸುವ ಮೂಲಕ ಸಂಭ್ರಮಿಸಲು ಪ್ರಾರಂಭಿಸಿದರು. ಈ ಪೈಕಿ ಓರ್ವ ಆಟಗಾರ ಭಾರತೀಯ ಕ್ರಿಕೆಟಿಗರ ಮುಂದೆ ನಿಂತು ನಿಂದನೆ ಮಾಡಲು ಪ್ರಾರಂಭಿಸಿದನು. ಇದರಿಂದಾಗಿ ಕೋಪಗೊಂಡ ಭಾರತೀಯ ಆಟಗಾರರೊಬ್ಬರು ಆತನಿಗೆ ಥಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್ ಗಳು ಆಟಗಾರರನ್ನು ಪರಸ್ಪರ ದೂರವಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಆಟಗಾರರ ಅಸಭ್ಯ ವರ್ತನೆ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗಿದೆ.
7 ಬಾರಿ ಮುಜುಗರಕ್ಕೊಳಗಾದ ಬಾಂಗ್ಲಾ ತಂಡ:
ಅಂಡರ್ 19 ವಿಶ್ವಕಪ್ ಹಾಗೂ ಪಾಕಿಸ್ತಾನ ವಿರುದ್ಧದ ಈಗಿನ ಟೆಸ್ಟ್ ಪಂದ್ಯ ಹೊರತಾಗಿ ಬಾಂಗ್ಲಾದೇಶದ ಕ್ರಿಕೆಟ್ ತಂಡವು ಈ ಹಿಂದೆ ಒಟ್ಟು 9 ಬಾರಿ ಮುಜುಗುರಕ್ಕೆ ಈಡಾಗಿದೆ. ಹಿರಿಯರ ಮಾರ್ಗದಲ್ಲಿಯೇ ಕಿರಿಯರು ಕೂಡ ನಡೆಯುತ್ತಿದ್ದಾರೆ, ಅವರಂತೆಯೇ ಅನೂಚಿತ ವರ್ತನೆ ತೋರುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.
2019ರಲ್ಲಿ ಭಾರತ ಪ್ರವಾಸಕ್ಕೂ ಮುನ್ನ ಬಾಂಗ್ಲಾದೇಶದ ಆಲ್‍ರೌಂಡರ್ ಶಕೀಬ್ ಅಲ್-ಹಸನ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2 ವರ್ಷಗಳ ಕಾಲ ನಿಷೇಧಿಸಿತ್ತು. ಐಪಿಎಲ್ ಸೇರಿದಂತೆ ಬುಕ್ಕಿಯಿಂದ ಅವರಿಗೆ ಮೂರು ಬಾರಿ ಆಫರ್ ನೀಡಲಾಗಿತ್ತು. ಆದರೆ ಈ ಮಾಹಿತಿಯನ್ನು ಶಕೀಬ್ ಐಸಿಸಿ ಗಮನಕ್ಕೆ ತರದೆ ಇದ್ದಿದ್ದರಿಂದ ತಪ್ಪಿತಸ್ಥನೆಂದು ಹೇಳಲಾಗಿತ್ತು.
2018ರ ಜನವರಿಯಲ್ಲಿ ಶಬ್ಬೀರ್ ರಹಮಾನ್ ತವರು ಪಂದ್ಯವೊಂದರಲ್ಲಿ ಕ್ರಿಕೆಟ್ ಅಭಿಮಾನಿಯನ್ನು ತೀವ್ರವಾಗಿ ನಿಂದಿಸಿದ್ದರು. ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಶಬ್ಬೀರ್ ಅಂಪೈರ್ ಅನುಮತಿ ಪಡೆದು ಮೈದಾನದಿಂದ ಹೊರ ಬಂದಿದ್ದರು. ನಂತರ ಅಭಿಮಾನಿಯನ್ನು ಎಳೆದೊಯ್ದು ಹೊಡೆದಿದ್ದರು. ಇದರಿಂದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶಬ್ಬೀರ್ ಅವರನ್ನು ಅಮಾನತುಗೊಳಿಸಿತ್ತು.
2018ರಲ್ಲಿ ನಡೆದ ನಿಡಾಹಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಶ್ರೀಲಂಕಾ ಸೋತಿತ್ತು. ವಿಜಯದ ನಂತರ ಬಾಂಗ್ಲಾದೇಶದ ಆಟಗಾರರು ಮೈದಾನದಲ್ಲಿ ನಾಗಿಣಿ ನೃತ್ಯವನ್ನು ಪ್ರದರ್ಶಿಸಿದ್ದರು. ಇದರ ನಂತರ ತಮೀಮ್ ಇಕ್ಬಾಲ್ ಅವರು ಮೈದಾನದಿಂದ ಹೊರಬರುವಾಗ ಕುಸಾಲ್ ಮೆಂಡಿಸ್ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಬಾಂಗ್ಲಾದೇಶದ ಆಟಗಾರರು ಸಹ ಕಿತ್ತಾಡಿಕೊಂಡಿದ್ದರು.
2016ರಲ್ಲಿ ನಡೆದ ಏಷ್ಯಾಕಪ್ ಸಮಯದಲ್ಲಿ ಬಾಂಗ್ಲಾದೇಶದ ಅಭಿಮಾನಿಯೊಬ್ಬರು ನಾಚಿಕೆಗೇಡಿನ ಕೃತ್ಯ ಎಸಗಿದ್ದರು. ಅವರು ಮಹೇಂದ್ರ ಸಿಂಗ್ ಧೋನಿ ಅವರ ತಲೆಯನ್ನು ಬಾಂಗ್ಲಾದೇಶದ ವೇಗದ ಬೌಲರ್ ತಸ್ಕಿನ್ ಅಹ್ಮದ್ ಕೈಯಲ್ಲಿ ಹಿಡಿದಿದ್ದ ಹಾಗೆ ಫೋಟೋವನ್ನು ಬಿಂಬಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.
2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಪೆವಿಲಿಯನ್‍ನ ಮುಂದೆ ತೊಡೆ ತಟ್ಟಿದ್ದರು. ಬಳಿಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಶಿಸ್ತು ಕ್ರಮ ಕೈಗೊಂಡು ಶಕೀಬ್‍ಗೆ 3 ಏಕದಿನ ನಿಷೇಧ ಮತ್ತು 3 ಲಕ್ಷ ದಂಡ ವಿಧಿಸಿತ್ತು.