-ವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಉಳಿದಿಲ್ಲ
ಹಾವೇರಿ: ರಾಜ್ಯದಲ್ಲಿ ಅನ್ಯಾಯದ ವಿರುದ್ಧ ದ್ವನಿ ಎತ್ತಿದವರ ಮೇಲೆ ಕೇಸ್ ಹಾಕಿದ್ದಾರೆ. ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಉಳಿಯುತ್ತಿಲ್ಲ, ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ. ಇದು ದಬ್ಬಾಳಿಕೆಯ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ಶಿಗ್ಗಾಂವಿಯ ತಡಸ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸ್‍ಗಳೇ ಇಲ್ಲದ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಿದ್ದರು. ಇದೆಲ್ಲಾ ಯಾರ ಆದೇಶದ ಮೇಲೆ ನಡೆದಿದೆ? ರಾಜಕೀಯ ದ್ವೇಷಕ್ಕೆ ಪೊಲೀಸ್ (Police) ಇಲಾಖೆ ಬಳಕೆ ಮಾಡಿಕೊಂಡಿದ್ದಾರೆ. ಭಯ, ಅಶಾಂತಿ ಸೃಷ್ಟಿ ಮಾಡಿದ್ದಾರೆ. ಸಾಮರಸ್ಯ ಇರುವ ರಾಜ್ಯದಲ್ಲಿ ವೋಟಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಲೇಬೇಕು!
Advertisement
Advertisement
ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಯಲ್ಲಿ, ಪೊಲೀಸ್ ಸ್ಟೇಷನ್‍ಗೆ ಬೆಂಕಿ ಹಚ್ಚಿ ಗಲಭೆ ಮಾಡಿದವರನ್ನು ಅಮಾಯಕರು ಎಂದು ತೀರ್ಮಾನ ಮಾಡಿದವರು ಯಾರು? ಬೆಂಕಿ ಹಚ್ಚಿದವರು ಅಮಾಯಕರಾ? ಒಂದು ರೀತಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಎಂದು ಪೊಲೀಸರು ಕರೆಯುತ್ತಾರಾ? ಆಗ ಕ್ರಮ ಸರಿ ಇದೆ ಎಂದು ಇವರೇ ಒಪ್ಪಿದ್ದಾರೆ. ಕ್ಯಾಬಿನೇಟ್‍ನಲ್ಲಿ ವರದಿ ಒಪ್ಪಿ, ಈಗ ಅಮಾಯಕರು ಎಂದರೆ ಹೇಗೆ? ಕಾಂಗ್ರೆಸ್‍ನವರದ್ದು (Congress) ದ್ವಂದ್ವ ಧೋರಣೆಯಾಗಿದೆ. ಇದು ಓಲೈಕೆ ರಾಜಕಾರಣವಾಗಿದೆ. ಈ ಪ್ರಕರಣದಲ್ಲಿ ಯಾರು ಅಮಾಯಕರು ಎಂದು ಕೋರ್ಟ್ ತೀರ್ಮಾನ ಮಾಡಲಿ. ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ವೀಕ್ ಮಾಡುತ್ತಿದ್ದಾರೆ. ದುಷ್ಟ ಶಕ್ತಿಗೆ ಪಾರಾಗಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಗೋಧ್ರಾ ಮಾದರಿ ಗಲಾಟೆ ಆಗಲಿದೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಅವರು ಸಾಕ್ಷಿ ಸಮೇತ ಕೊಡಬೇಕಿತ್ತು. ಮೊದಲು ಹರಿ ಪ್ರಸಾದ್ ಮೇಲೆ ಸಮನ್ಸ್ ಜಾರಿ ಮಾಡಲಿ. ಇದೇ ಮಾತನ್ನು ಬಿಜೆಪಿಯವರು ಹೇಳಿದ್ದರೆ ಬಿಡುತ್ತಾರಾ? ನಮ್ಮ ಮೇಲೆ ಎಷ್ಟೊಂದು ಕೇಸ್ ಹಾಕಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ಮುಖಂಡ ವಿ.ಸೋಮಣ್ಣ ವಿಚಾರವಾಗಿ, ಅವರು ಅನೇಕ ವಿಷಯಗಳನ್ನು ಹೇಳಿದ್ದಾರೆ. ಅವರ ನೋವೇನಿದೆ ಎಲ್ಲರೂ ಒಟ್ಟಿಗೆ ಕುಳಿತು ಮಾತಾಡುತ್ತೇವೆ. ಇನ್ನೂ ಲೋಕಸಭಾ ಚುನಾವಣೆಯಲ್ಲಿ (Lok Sabha election) ಸ್ಪರ್ಧೆ ವಿಚಾರವಾಗಿ, ನಾನು ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ನನ್ನ ಮುಂದೆ ಯಾರು ಹೇಳಿಲ್ಲ, ಈ ಬಗ್ಗೆ ಮಾತಾಡಿಯೂ ಇಲ್ಲ. ಉಹಾಪೋಹದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾವು ತುಂಬಾ ಅದೃಷ್ಟವಂತರು, ಭಾರತ ನಮ್ಮ ವಿಶ್ವಾಸಾರ್ಹ ಸ್ನೇಹಿತ: ಶೇಖ್ ಹಸೀನಾ