ಹಾವೇರಿ: ಜಮೀನಿಗೆ ರಸ್ತೆ ನಿರ್ಮಾಣ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಚಿಕ್ಕಪ್ಪನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಹಾವೇರಿ (Haveri) ನಗರದ ಎಂ.ಜಿ ರೋಡ್ ಗಣಪತಿ ದೇವಸ್ಥಾನದ ಬಳಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉಳಿವೆಪ್ಪ ಅಕ್ಕಿ(68) ಹಲ್ಲೆಗೊಳಗಾದ ವ್ಯಕ್ತಿ. ಉಳಿವೆಪ್ಪ ಅವರ ತಮ್ಮನ ಮಗ ಬಸವರಾಜ್ ಅಲಿಯಾಸ್ ಗಣೇಶ್ ಹಲ್ಲೆ ಮಾಡಿದ ಆರೋಪಿ. ಇದನ್ನೂ ಓದಿ: ಕಮಕಾರಟ್ಟಿ ಘಾಟ್‌ನಲ್ಲಿ 3 KSRTC ಬಸ್, 3 ಲಾರಿ, 1 ಕಂಟೇನರ್, 1 ಬೈಕ್ ಮಧ್ಯೆ ಸರಣಿ ಅಪಘಾತ- ಎಲ್ಲರೂ ಪಾರು
ಕೈಯಲ್ಲಿ ಕೋಲು ಹಿಡಿದು ಉಳಿವೆಪ್ಪ ಅವರು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಗಣೇಶ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಚಿಕ್ಕಪ್ಪ ಎಂದು ನೋಡದೇ ಗಣೇಶ್ ಹಲ್ಲೆ ಮಾಡಿದ್ದು, ಸ್ಥಳೀಯರು ಆತನಿಂದ ಉಳಿವೆಪ್ಪ ಅವರನ್ನು ರಕ್ಷಿಸಿದರು. ಇದನ್ನೂ ಓದಿ: ಯೆಮೆನ್ ಮೇಲೆ ಅಮೆರಿಕ ದಾಳಿಗೂ ಮುನ್ನವೇ ರಹಸ್ಯ ಲೀಕ್
ಗಂಭೀರ ಗಾಯಗೊಂಡಿದ್ದ ಉಳಿವೆಪ್ಪ ಅವರನ್ನು ಸ್ಥಳೀಯರು ಹುಬ್ಬಳ್ಳಿಯ (Hubballi) ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿಸ್ತು ಉಲ್ಲಂಘನೆ – ಬಿಜೆಪಿಯ ಐದು ನಾಯಕರಿಗೆ ನೋಟಿಸ್