ಮಣಿಪುರದಲ್ಲಿ ನಿಲ್ಲದ ಸಂಘರ್ಷ – ತಂದೆ, ಮಗ ಸೇರಿ ಮೂವರು ಬಲಿ

Public TV
1 Min Read
manipur violence

ಇಂಪಾಲ: ಮಣಿಪುರದ (Manipur) ಬಿಷ್ಣುಪುರ (Bishnupur) ಜಿಲ್ಲೆಯಲ್ಲಿ ಇಂದು (ಶನಿವಾರ) ಮುಂಜಾನೆ ನಡೆದ ಹಿಂಸಾಚಾರದಲ್ಲಿ (Violence) ತಂದೆ-ಮಗ ಸೇರಿದಂತೆ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಶಂಕಿತ ದಂಗೆಕೋರರು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಬಿಷ್ಣುಪುರದ ಕ್ವಾಕ್ಟ ಬಳಿಯ ಉಖಾ ತಂಪಕ್ ಗ್ರಾಮದ ಮೇಲೆ ದಾಳಿ ನಡೆಸಿದ್ದು, ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!

ಈ ಗುಂಡಿನ ದಾಳಿಯಲ್ಲಿ ತಮ್ಮ ಮನೆಗಳನ್ನು ಕಾಯುತ್ತಿದ್ದ ತಂದೆ – ಮಗ ಮತ್ತು ಇನ್ನೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೃತರು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ. ಬಫರ್ ಝೋನ್ ದಾಟಿ ಮೈತೇಯ್ ಪ್ರದೇಶಕ್ಕೆ ನುಗ್ಗಿದ ದಂಗೆಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹರಿಯಾಣ ಧಗಧಗ: ಅಕ್ರಮ ವಲಸಿಗರ 250 ಗುಡಿಸಲುಗಳು ನೆಲಸಮ, 41 ಕೇಸ್, 176 ಮಂದಿ ಅರೆಸ್ಟ್, 90 ಮಂದಿ ವಶಕ್ಕೆ

ಮೃತರು ಮೈತೇಯ್ (Meitei) ಸಮುದಾಯದವರಾಗಿದ್ದು, ದಂಗೆಕೋರರು ಕುಕಿ (Kuki) ಸಮುದಾಯದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಕ್ವಾಕ್ಟ ಪ್ರದೇಶದಲ್ಲಿ ಕುಕಿ ಸಮುದಾಯ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದನ್ನೂ ಓದಿ: ಹಿಜಬ್‌ ಹಾಕದೇ ಶಾಲೆಗೆ ಬಂದ ಬಾಲಕಿಯರನ್ನು ತಡೆದ 10 ನೇ ತರಗತಿ ಮುಸ್ಲಿಂ ವಿದ್ಯಾರ್ಥಿ – ಗುಂಪಿನಿಂದ ಹಲ್ಲೆ

ಗುಂಡಿನ ದಾಳಿಯಲ್ಲಿ ಮಣಿಪುರದ ಕಮಾಂಡೋ ತಲೆಗೆ ತೀವ್ರ ಗಾಯವಾಗಿದ್ದು, ಬಿಷ್ಣುಪುರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಗಾಯಾಳು ಕಮಾಂಡೋವನ್ನು ಬಿಷ್ಣುಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಘಟನೆ ನಡೆದ ಪ್ರದೇಶದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ – ಮೂವರು ಯೋಧರು ಹುತಾತ್ಮ

Web Stories

Share This Article