ಮಂಗಳೂರು: ಕಳೆದೆರಡು ದಿನಗಳ ಹಿಂದೆ ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಇಂದು ಬಿಜೈನಲ್ಲಿರುವ ಕೆಎಸ್‍ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ (Bus Stand) ಅನುಮಾನಾಸ್ಪದ ಬ್ಯಾಗ್‍ವೊಂದು (Bag) ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಬಿಜೈನಲ್ಲಿರುವ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಾರಸುದಾರರಿಲ್ಲದ ಬ್ಯಾಗ್ ಒಂದು ಇರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿತು. ಈ ವೇಳೆ ಬ್ಯಾಗ್‍ನಲ್ಲಿ ಯಾವುದೇ ಸ್ಫೋಟಕ ವಸ್ತುಗಳ ಪತ್ತೆಯಾಗಲಿಲ್ಲ. ಬಳಿಕ ಬ್ಯಾಗ್‍ನ ವಾರಸುದಾರರು ಪತ್ತೆಯಾಗಿದ್ದು, ಬಸ್ ಪ್ರಯಾಣಿಕರೊಬ್ಬರು ನಿಲ್ದಾಣದಲ್ಲಿ ಇಟ್ಟು ಹೋಗಿದ್ದರು ಎಂದು ತಿಳಿದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಬಸ್ ನಿಲ್ದಾಣದಲ್ಲಿದ್ದವರು ನಿರಾಳರಾದರು. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ಅಲೋಕ್‌ಕುಮಾರ್
ನ.19 ರಂದು ಸಂಜೆ ಮಂಗಳೂರಿನ ಪಂಪ್‍ವೆಲ್‍ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋ ಒಂದರ ಒಳಗಿಂದ ಇದ್ದಕ್ಕಿದ್ದ ಹಾಗೇ ನಿಗೂಢ ಸ್ಫೋಟವಾಗಿತ್ತು. ಆ ಬಳಿಕ ಪರಿಶೀಲನೆ ನಡೆಸಿದ ವೇಳೆ ಅದು ಕುಕ್ಕರ್ ಬಾಂಬ್ ಸ್ಫೋಟವಾಗಿರುವುದು ಪತ್ತೆಯಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೀರ್ಥಹಳ್ಳಿಯ ಶಾರೀಕ್ ಎಂಬಾತ ಪೊಲೀಸ್ ವಶದಲ್ಲಿದ್ದಾನೆ. ಇದನ್ನೂ ಓದಿ: ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು
ಇದೀಗ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬಳಿಕ ಉಗ್ರರ ಕರಿಛಾಯೆ ಆವರಿಸಿದೆ. ಈಗಾಗಲೇ ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]