ಭೋಪಾಲ್: ಕಾರು ಖರೀದಿಸುವಷ್ಟು ಸಾಮರ್ಥ್ಯವಿಲ್ಲ ಎಂದು ನೂತನ ಶಾಸಕರೊಬ್ಬರು ಬೈಕ್‌ನಲ್ಲಿ ಸದನಕ್ಕೆ ತೆರಳುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೊಸದಾಗಿ ಆಯ್ಕೆಯಾದ ಭಾರತ್ ಆದಿವಾಸಿ ಪಾರ್ಟಿ (ಬಿಎಪಿ) ಶಾಸಕ ಕಮಲೇಶ್ವರ ದೊಡಿಯಾರ್ ಅವರು ಕಾರು ಖರೀದಿಸುವಷ್ಟು ಅನುಕೂಲಸ್ಥರಲ್ಲ. ಹೀಗಾಗಿ ಬೈಕ್‌ನಲ್ಲಿ ಸದನಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್
Advertisement
Advertisement
ಬಿಎಪಿ ಪಕ್ಷದ ಏಕೈಕ ಶಾಸಕ ದೊಡಿಯಾರ್. ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ 17 ರಂದು ನಡೆದ ಚುನಾವಣೆಯಲ್ಲಿ ರತ್ನಂ ಜಿಲ್ಲೆಯ ಸೈಲಾನಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದರು.
Advertisement
ಶಾಸಕರಾದ ನಂತರ ರಾಜ್ಯ ರಾಜಧಾನಿಗೆ ತಮ್ಮ ಮೊದಲ ಭೇಟಿಗೆ ಕಾರಿನ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು. ಆದರೆ ಅದು ಸಿಗಲಿಲ್ಲ. ಅಂತಿಮವಾಗಿ ಅವರು ತಮ್ಮ ಸೋದರ ಮಾವನ ಬೈಕನ್ನು ಎರವಲು ಪಡೆದರು. ಅದರ ಮೇಲೆ “ಎಂಎಲ್ಎ” ಎಂಬ ಪದವಿರುವ ಸ್ಟಿಕರ್ ಅನ್ನು ಅಂಟಿಸಿ ಸಹವರ್ತಿಯೊಂದಿಗೆ 330 ಕಿಮೀ ಪ್ರಯಾಣ ಬೆಳೆಸಿ ಭೋಪಾಲ್ ತಲುಪಿದ್ದಾರೆ. ಇದನ್ನೂ ಓದಿ: ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ
Advertisement
ಭೋಪಾಲ್ ತಲುಪಿದ ನಂತರ ಎಂಎಲ್‌ಎ ರೆಸ್ಟ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರಜಾಪ್ರಭುತ್ವದ ದೇಗುಲಕ್ಕೆ ಪೂಜೆ ಸಲ್ಲಿಸಲು ಗುರುವಾರ ವಿಧಾನಸಭೆಯ ಪ್ರವೇಶ ದ್ವಾರದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ ನಂತರ ಅಧಿಕಾರಿಗಳ ಮುಂದೆ ಶಾಸಕರಾಗಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.
ಬಡ ಕೂಲಿ ಕಾರ್ಮಿಕ ಕುಟುಂಬಕ್ಕೆ ಸೇರಿದ ದೊಡಿಯಾರ್ ಜನರಿಂದ ಸಾಲ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾಲಿ ಕಾಂಗ್ರೆಸ್ ಶಾಸಕ ಹರ್ಷ್ ವಿಜಯ್ ಗೆಹ್ಲೋಟ್ ಅವರನ್ನು 4,618 ಮತಗಳಿಂದ ಸೋಲಿಸಿದ ದೊಡಿಯಾರ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಮತ್ತು ಕಾಂಗ್ರೆಸ್ 66 ಸ್ಥಾನಗಳನ್ನು ಪಡೆದಿದೆ.