– ಹೆಣ್ಣು ಸಿಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ
ಹೈದರಾಬಾದ್: ತನ್ನ ಸ್ನೇಹಿತರು ಹಾಗೂ ಜೊತೆಗೆ ಇದ್ದವರಿಗೆಲ್ಲ ಮದುವೆಯಾಗಿ ಮಕ್ಕಳಾಗಿದೆ. ನನಗೆ ಯಾಕೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
Advertisement
ಸೈಯದ್ ಅಮ್ಜದ್( 30) ಮೃತ ಯುವಕ. ಈತ ಹೈದರಾಬಾದ್ ಫಲಕ್ನುಮಾದ ಸಂಜಯ್ ಗಾಂಧಿ ನಗರದ ನಿವಾಸಿಯಾಗಿದ್ದಾನೆ. ಸ್ನೇಹಿತರಿಗೆಲ್ಲ ಮದುವೆಯಾಗಿದೆ, ಆದರೆ ನನಗೆ ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ- ನಾಲ್ವರ ಬಂಧನ
Advertisement
Advertisement
ಸೈಯದ್ ಅಮ್ಜದ್ ಸ್ವಂತ ಟೈಲರ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಕಳೆದ ಕೆಲವರ್ಷಗಳಿಂದ ಈತನಿಗೆ ಮದುವೆ ಮಾಡಲು ಕುಟುಂಬಸ್ಥರು ಹುಡುಗಿಯನ್ನು ಹುಡುಕುತ್ತಿದ್ದರು. ಆದರೆ ಯಾವುದೇ ಹುಡುಗಿ ಈತನಿಗೆ ಇಷ್ಟವಾಗುತ್ತಿರಲಿಲ್ಲವಂತೆ. ಕೆಲವರು ಇವನನ್ನು ಇಷ್ಟಪಟ್ಟರೆ ಇವನು ಬೇಡವೆಂದು ಹೇಳುತ್ತಿದ್ದನಂತೆ. ಮತ್ತೆ ಕೆಲವರು ಈತನಿಗೆ ಇಷ್ಟವಾದರೆ ಅವರು ಬೇಡ ಎನ್ನುತ್ತಿದ್ದರಂತೆ. ಹೀಗಾಗಿ ಮದುವೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದ ಸೈಯದ್ ಅಮ್ಜದ್, ಹೇಗಾದರೂ ಮಾಡಿ ಈ ವರ್ಷ ಮದುವೆಯಾಗಬೇಕೆಂದು ಹಠಕ್ಕೆ ಬಿದ್ದಿದ್ದ. ಇದನ್ನೂ ಓದಿ: ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್ಗೆ ಯೋಗಿ ಪ್ರತಿಕ್ರಿಯೆ
Advertisement
ಸ್ನೇಹಿತರು ಹಾಗೂ ಜೊತೆಗೆ ಇದ್ದವರಿಗೆಲ್ಲ ಮದುವೆಯಾಗಿ ಮಕ್ಕಳಾಗಿದೆ. ನನಗೆ ಯಾಕೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಸೈಯದ್ ಅಮ್ಜದ್ ತುಂಬಾ ಕಾಡುತ್ತಿತ್ತಂತೆ. ತನಗೆ ಪರಿಚಯ ಇರುವವರ ಬಳಿಯೆಲ್ಲಾ ಒಂದು ಹುಡುಗಿ ನೋಡಿ ಕೊಡುವಂತೆ ಮನವಿ ಮಾಡಿಕೊಂಡಿದ್ದ. ಮದುವೆ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದ ಸೈಯದ್ ಅಮ್ಜದ್ಗೆ ತನ್ನ ಕೆಲಸದ ಕಡೆ ಗಮನ ಕೊಡಲು ಆಗುತ್ತಿರಲಿಲ್ಲ. ಮದುವೆ ವಿಚಾರದಿಂದಾಗಿ ಸೈಯದ್ ಖಿನ್ನತೆಗೆ ಒಳಗಾಗಿದ್ದ. ಸದಾ ಒಬ್ಬಂಟಿಯಾಗಿಯೇ ಇರುತ್ತಿದ್ದ ಈತನ ನಡವಳಿಕೆಯಿಂದ ಮನೆಯವರು ಬೇಸತ್ತು ಹೋಗಿದ್ದರು. ಗುರುವಾರ ರಾತ್ರಿ ಸೈಯದ್ ತನ್ನ ಅಂಗಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ
ಬೆಳಗ್ಗೆ ಅಂಗಡಿಗೆ ಬಂದ ಅಕ್ಕಪಕ್ಕದ ಅಂಗಡಿಯವರು ಕಿಟಕಿಯಲ್ಲಿ ಇಣುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಬಳಿ ಆತನ ಮನೆಯವರೇ, ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಸೈಯದ್ ಅಮ್ಜದ್ ಕೆಲದಿನಗಳಿಂದ ಖಿನ್ನತೆಗೆ ಒಳಗಾಗಿದ್ದ. ಇದಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಿದ್ದಾರೆ. ಫಲಕ್ನುಮಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.