ತುಮಕೂರು: ಸಾಲಬಾಧೆ (Indebtedness) ತಾಳಲಾರದೇ ಒಂದೇ ಕುಟುಂಬದ ಮೂವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು (Tumakuru) ತಾಲೂಕಿನ ಪಂಡಿತನಹಳ್ಳಿಯ ರೈಲ್ವೆಗೇಟ್ ಬಳಿ ನಡೆದಿದೆ.
ಸಿದ್ದಗಂಗಯ್ಯ (62), ಸುನಂದಮ್ಮ ಹಾಗೂ ಗೀತಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ತುಮಕೂರಿನ ಮರಳೂರು ನಿವಾಸಿಯಾಗಿದ್ದ ಸಿದ್ದಗಂಗಯ್ಯ, ಕಳೆದ ಎರಡು ವರ್ಷಗಳ ಹಿಂದೆ ಕೆಇಬಿಯಲ್ಲಿ (KEB) ನಿವೃತ್ತಿ ಹೊಂದಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಬೆಂಗಳೂರಿನ ಮಲ್ಲೇಶ್ವರಂ (Malleshwaram) ಬಳಿಯಿರುವ ಕೆಸಿ ಜನರಲ್ ಆಸ್ಪತ್ರೆ (KC General Hospital) ಬಳಿ ಟೀ ಶಾಪ್ ಇಟ್ಟುಕೊಂಡು ಸಾಲ ತೀರಿಸಲು ದುಡಿಯುತ್ತಿದ್ದರು. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ
ಆದರೂ ಸಾಲ ಮಿತಿ ಮೀರಿದ್ದರಿಂದ ಮನನೊಂದು ಸೋಮವಾರ ಬೆಳಗ್ಗಿನ ಜಾವ ಆಟೋದಲ್ಲಿ ಬಂದು ಪಂಡಿತನಹಳ್ಳಿ ರೈಲ್ವೆ ಹಳಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಪರಿಣಾಮ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ. ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳು ರವಾನೆಯಾಗಿದ್ದು, ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಖ್ಯಾತ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]