ನ್ಯೂಯಾರ್ಕ್: ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ವಿಶ್ವ ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಳಿಸಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತುಗೊಳಿಸುವ ನಿರ್ಣಯಕ್ಕೆ ಮತ ಹಾಕಲಾಯಿತು. ಈ ವೇಳೆ ರಷ್ಯಾ ವಿರುದ್ಧ 93 ದೇಶಗಳು ಮತ ಚಲಾಯಿಸಿವೆ. ರಷ್ಯಾ ಪರವಾಗಿ 24 ದೇಶಗಳು ಮತ ಹಾಕಿವೆ. ಆದರೆ ಭಾರತ ಸೇರಿದಂತೆ 54 ದೇಶಗಳು ಮತದಾನದಿಂದ ದೂರ ಉಳಿದವು. ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?
Advertisement
Advertisement
ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯವನ್ನು ಉಕ್ರೇನ್ ಸ್ವಾಗತಿಸಿದೆ. ಮಾನವ ಹಕ್ಕುಗಳ ಮಂಡಳಿಯನ್ನು ಯುದ್ಧ ಅಪರಾಧಿಗಳು ಪ್ರತಿನಿಧಿಸುವುದು ಸರಿಯಲ್ಲ ಎಂದು ಉಕ್ರೇನ್ ತಿಳಿಸಿದೆ.
Advertisement
ಉಕ್ರೇನ್‌ನ ಬುಚಾದಲ್ಲಿ ನಾಗರಿಕರನ್ನು ರಷ್ಯಾ ಸೈನಿಕರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಉಕ್ರೇನ್ ಆರೋಪವನ್ನು ರಷ್ಯಾ ನಿರಾಕರಿಸಿತ್ತು. ಇದನ್ನೂ ಓದಿ: ಬುಚಾ ನರಮೇಧವನ್ನು ತೀವ್ರವಾಗಿ ಖಂಡಿಸಿದ ಭಾರತ
Advertisement
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ದೇಶವೊಂದನ್ನು ಅಮಾನತು ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2011 ರಲ್ಲಿ ಲಿಬಿಯಾವನ್ನು ಮೊದಲ ಬಾರಿಗೆ ಅಮಾನತು ಮಾಡಲಾಗಿತ್ತು.