ನವದೆಹಲಿ: ದೀಪಾವಳಿ ಹಬ್ಬದ ವಿಶೇಷವಾಗಿ ವಿಶ್ವಸಂಸ್ಥೆ ಭಾರತಕ್ಕೆ ವಿಶೇಷ ಉಡುಗೊರೆ ನೀಡಿದ್ದು, ದೀಪಾವಳಿ ಸಡಗರವನ್ನು ನೆನಪಿಸುವ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದೆ.
ಕೆಟ್ಟದರ ಮೇಲೆ ಒಳಿತು ಜಯಭೇರಿ ಬಾರಿಸುವ ಸಂಕೇತವಾಗಿ ವಿಶ್ವಸಂಸ್ಥೆ ಅಂಚೆ ಚೀಟಿ ಬಿಡುಗಡೆ ಮಾಡಿದ್ದು, ಈ ಮೂಲಕ ವಿಶ್ವಸಂಸ್ಥೆ ದೀಪಾವಳಿ ಹಬ್ಬಕ್ಕೆ ವಿಶೇಷ ರೀತಿಯಲ್ಲಿ ಗೌರವ ಸೂಚಿಸಿದೆ.
Advertisement
Today, UN Stamps issued a special event sheet to commemorate the festival of #Diwali . The sheet in the denomination of US$ 1.15 contains ten stamps and tabs featuring festive lights and the symbolic lamps known as diyas.. More @ https://t.co/jMUKgBI3S6 pic.twitter.com/kMFzbfwms6
— UNPA (@unstamps) October 19, 2018
Advertisement
ವಿಶ್ವದಾದ್ಯಂತ ಇರುವ ಭಾರತೀಯರು ಸೇರಿದಂತೆ ಭಾರತದ ಸಂಸ್ಕೃತಿಯ ಪರಿಚಯ ಇರುವ ಕೆಲ ವಿದೇಶಿಯರು ಕೂಡ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದ್ಯೊಯುವ ನಂಬಿಕೆಯಿಂದ ಹಬ್ಬ ಆಚರಣೆ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಆಚರಣೆ ಮಾಡಲಾಗುವ ಈ ಹಬ್ಬ ಸುಖ ಸಮೃದ್ಧಿಯನ್ನು ನೀಡಲಿ ಎಂಬ ಆಶಯ ಹೊಂದಿದೆ. ವಿಶ್ವ ಸಂಸ್ಥೆಯ ಅಂಚೆ ಚೀಟಿ ವಿಭಾಗವು ಭಾರತೀಯರಿಗೆ ವಿಶೇಷ ಕೊಡುಗೆ ನೀಡಿದೆ.
Advertisement
ಬೆಲೆ ಎಷ್ಟು?
ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ಸ್ಟಾಂಪ್ ಹಾಳೆ ಬೆಲೆ 1.15 ಡಾಲರ್ ಬೆಲೆ (83 ರೂ.) ಹೊಂದಿದ್ದು, ಒಂದು ಹಾಳೆಯಲ್ಲಿ 10 ಸ್ಟಾಂಪ್ ಸ್ಟಿಕ್ಕರ್ ಹೊಂದಿರುತ್ತದೆ. ಈ ಕುರಿತು ಯುಎನ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಎಲ್ಲರಿಗೂ ದೀಪಾವಳಿಯ ಶುಭಾಶಯ ತಿಳಿಸಲಾಗಿದೆ. ಅಲ್ಲದೇ ಈ ಟ್ವೀಟ್‍ನಲ್ಲಿ ದೀಪಾವಳಿ ವಿಶೇಷವಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯನ್ನು ದೀಪಗಳಿಂದ ಅಲಂಕೃತ ಮಾಡಿರುವ ವಿಶೇಷ ಫೋಟೋ ಕೂಡ ಟ್ವೀಟ್ ಮಾಡಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv