ಸಿಯೋಲ್/ಬೆಂಗಳೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ಇವತ್ತು ದಕ್ಷಿಣ ಕೊರಿಯಾದಲ್ಲಿ ನಡೆದ ಯುಎನ್‍ನ ಶಾಂತಿಗಾಗಿ ಅಂತಾರಾಷ್ಟ್ರೀಯ ಶೃಂಗಸಭೆ ಹೆಸರಿನ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಯುಎನ್‍ನ ಅಂಗಸಂಸ್ಥೆ, ಅಂತಾರಾಷ್ಟ್ರೀಯ ಸಂಸ್ಥೆಯಾದ ಯುನಿವರ್ಸಲ್ ಪೀಸ್ ಫೆಡರೇಶನ್ ಆಯೋಜಿಸಿದ್ದ 2020ರ ಸಮ್ಮೇಳದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಎಚ್‍ಡಿಡಿ ಮಾತನಾಡಿದರು. ಕಳೆದ ವರ್ಷದಿಂದ ಹೆಚ್ಚಾಗಿರುವ ಪ್ರತಿಭಟನೆಗಳು ಹಾಗೂ ಅವುಗಳು ಹೆಚ್ಚಾಗಲು ಸರ್ಕಾರ ಮತ್ತು ಜನರ ನಡುವೆ ಬಂದಿರುವ ಭಿನ್ನಾಭಿಪ್ರಾಯವೇ ಕಾರಣ. ಅದು ಸರಿಯಾದರೇ ಪ್ರತಿಭಟನೆಗಳ ಸಂಖ್ಯೆ ಬಹುತೇಕ ಇಳಿಕೆಯಾಗುವಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.
Advertisement
ಎಲ್ಲಾ ಚರ್ಚೆಗಳ ನಂತರ ಎಚ್‍ಡಿಡಿಗೆ ಶಾಂತಿ ಪದಕ (ಐಎಸ್‍ಸಿಪಿ) ಕೊಟ್ಟು ಗೌರವಿಸಲಾಯಿತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಎಚ್‍ಡಿಡಿ ಅವರಿಗೆ ಸಂದ ಬಹು ದೊಡ್ಡ ಗೌರವವಾಗಿದೆ.
Advertisement
UN affiliated International organization Universal Peace Federation conferred the International Summit Council for Peace Medal of Honour today, at Seoul, South Korea – Office of HDD pic.twitter.com/tBPKGukfP2
— H D Devegowda (@H_D_Devegowda) February 4, 2020