ಲಕ್ನೋ: ಬಹುಜನ ಸಮಾಜ ಪಕ್ಷದ (BSP) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ (Umesh Pal) ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್‍ನ (Atiq Ahmed) ಸಹಾಯಕ ಗುಡ್ಡು ಮುಸ್ಲಿಂನ ಚಕಿಯಾ ಪ್ರದೇಶದಲ್ಲಿರುವ ಮನೆಯನ್ನು ಪೊಲೀಸರು (Police) ಜಪ್ತಿ ಮಾಡಿದ್ದಾರೆ.
ಬಿಎಸ್‍ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಫೆ.25ರಂದು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದಾಳಿಯ ವೇಳೆ ಗುಡ್ಡು ಮುಸ್ಲಿಂ ಬಾಂಬ್ ಎಸೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆಯ ಬಳಿಕ ಗುಡ್ಡು ಮುಸ್ಲಿಂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 5 ಖಾಸಗಿ ಬಸ್‌ಗಳ ನಡುವೆ ಸರಣಿ ಅಪಘಾತ
Advertisement
ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ಅವರ ದೂರಿನ ಮೇರೆಗೆ ಧುಮನಗಂಜ್ ಪೊಲೀಸ್ ಠಾಣೆಯಲ್ಲಿ ಮಾಫಿಯಾ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಶೈಸ್ತಾ ಪರ್ವೀನ್, ಅತೀಕ್‍ನ ಇಬ್ಬರು ಪುತ್ರರು, ಗುಡ್ಡು ಮುಸ್ಲಿಂ, ಗುಲಾಮ್ ಮತ್ತು ಇತರ ಒಂಬತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು.
Advertisement
Advertisement
ಉಮೇಶ್ ಪಾಲ್ ಕೊಲೆ ಪ್ರಕರಣ ಸೇರಿದಂತೆ 100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಭಾಗಿಯಾಗಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ಇಬ್ಬರನ್ನು ಪೊಲೀಸರು ಕರೆದೊಯ್ಯುವ ವೇಳೆ ಏ.15 ರಂದು ಪ್ರಯಾಗರಾಜ್‍ನ ಕ್ಯಾಲ್ವಿನ್ ಆಸ್ಪತ್ರೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
Advertisement
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್‍ನ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅಶ್ರಫ್‍ನ ಪತ್ನಿ ಜೈನಾಬ್ ಸಹ ತಲೆಮರೆಸಿಕೊಂಡಿದ್ದು ಶೀಘ್ರವೇ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ