ಮೊದಲ ಚಿತ್ರಕ್ಕೆ 20 ಸಾವಿರ ಸಂಭಾವನೆ ಪಡೆದಿದ್ದ ಪವಿತ್ರಾ ಗೌಡ

Public TV
2 Min Read
pavithra gowda

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಜೊತೆ ಹೆಚ್ಚು ಹೈಲೆಟ್ ಆಗಿರುವ ಪವಿತ್ರಾ ಗೌಡ ‘ಅಗಮ್ಯ’ (Agamya Film) ಎಂಬ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅವರ ಚೊಚ್ಚಲ ಸಿನಿಮಾಗೆ ಅದೆಷ್ಟು ಸಂಭಾವನೆ ಪಡೆದಿದ್ದರು. ಚೊಚ್ಚಲ ಚಿತ್ರಕ್ಕೆ ಸೆಲೆಕ್ಟ್ ಆಗಿದ್ಹೇಗೆ? ಎಂಬುದನ್ನು ನಿರ್ದೇಶಕ ಉಮೇಶ್ ತಿಳಿಸಿದ್ದಾರೆ.

pavithra gowda 1 2

ಮೊದಲು ರಂಗಶಂಕರದಲ್ಲಿ ಪವಿತ್ರಾ ಗೌಡ (Pavithra Gowda) ಸಿಕ್ಕಿದ್ದರು. ಮುಂಚೆ ಆಡಿಷನ್ ಮಾಡಿದಾಗ ನಟನೆ ಹೇಳಿಕೊಳ್ಳುವ ಮಟ್ಟಿಗೆ ಇರಲಿಲ್ಲ. 2011ರಲ್ಲಿ ‘ಅಗಮ್ಯ’ ಚಿತ್ರ ಶುರುವಾಗಿ 2013ರಲ್ಲಿ ತೆರೆ ಕಂಡಿತ್ತು. ಒಂದೇ ಸಿನಿಮಾದಲ್ಲಿ ಪವಿತ್ರಾ ಲೆವೆಲ್ ಚೇಂಜ್ ಆಯ್ತು. ಮಿನಿ ಕೂಪರ್ ಕಾರ್‌ನಲ್ಲಿ ಶೂಟಿಂಗ್‌ಗೆ ಪವಿತ್ರಾ ಬರುತ್ತಿದ್ದರು. ಕೋಣನಕುಂಟೆ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದರು ಪವಿತ್ರಾ. ಸಿನಿಮಾ ರಂಗಕ್ಕೆ ಬರುವ ಮೊದಲೇ ಮದುವೆ ಆಗಿ ಮಗುವಿನ ತಾಯಿಯಾಗಿದ್ದರು ಕೂಡ ಎಂದು ಡೈರೆಕ್ಟರ್ ಉಮೇಶ್ ಮಾತನಾಡಿದ್ದಾರೆ. ಇದನ್ನೂ ಓದಿ:ಹೊಸ ಮನೆಗೆ ಕಾಲಿಟ್ಟ ಹಿರಿಯ ನಟಿ ತಾರಾ

pavithra gowda 2

ಈ ಬಗ್ಗೆ ನಿರ್ದೇಶಕ ಉಮೇಶ್ ಮಾತನಾಡಿ ಪವಿತ್ರಾ ಗೌಡಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ. ನಟಿಯಾಗುವ ಲಕ್ಷಣಗಳು ಇರಲಿಲ್ಲ. ಎಷ್ಟೋ ಸಲ ನಟನೆ ಚೆನ್ನಾಗಿ ಮಾಡ್ತಿಲ್ಲ ಅಂತ ಗದರಿದ್ದೆ, ಹೊಡಿಯೋಕೂ ಹೋಗಿದ್ದೆ. ಸೆಟ್‌ನಲ್ಲಿ ತರ್ಲೆ ಮಾಡ್ಕೊಂಡು ಖುಷಿಯಾಗಿ ಇರುತ್ತಿದ್ದರು. ಪವಿತ್ರಾ ಗೌಡಗೆ ಮೊದಲು ಸಿಕ್ಕ ಸಂಭಾವನೆ 20 ಸಾವಿರ ರೂ. ‘ಅಗಮ್ಯ’ ಸಿನಿಮಾಗೆ ನಟಿಯಾಗಿ ಪವಿತ್ರಾ ಅವರನ್ನು ಆಯ್ಕೆ ಮಾಡೋ ಉದ್ದೇಶ ಇರಲಿಲ್ಲ. ಆಕೆಗೆ ನಟನೆಯ ಗಂಧ ಗಾಳಿ ತಿಳಿದಿಲ್ಲ. ನಮ್ಮದು ಚಿಕ್ಕ ಬಜೆಟ್ ಸಿನಿಮಾ, ಬೇರೆ ಯಾವ ನಟಿಯರ ಡೇಟ್ಸ್, ಸಂಭಾವನೆ ಮ್ಯಾಚ್ ಆಗಿಲ್ಲ ಅಂತ ಪವಿತ್ರಾನ ಓಕೆ ಮಾಡಿದ್ವಿ ಎಂದು ನಿರ್ದೇಶಕ ಉಮೇಶ್ ಹೇಳಿಕೊಂಡಿದ್ದಾರೆ.

FotoJet 20

ಸಿನಿಮಾ ಆಗಿ ಆರೇಳು ತಿಂಗಳು ಆದ್ಮೇಲೆ ಪವಿತ್ರಾ ಮಿನಿ ಕೂಪರ್ ಕಾರ್‌ನಲ್ಲಿ ಬಂದಾಗ ನಮಗೆ ಶಾಕ್ ಆಯಿತು. ಈ ಕಡೆ ಸಿನಿಮಾನೂ ಸಕ್ಸಸ್ ಆಗಿರಲಿಲ್ಲ. ಕಾರ್ ಹೇಗೆ ಬಂತು ಅಂತ ಶಾಕ್ ಆಗಿತ್ತು. ದರ್ಶನ್ ಪರಿಚಯ ಪವಿತ್ರಾಗೆ ಇರುವ ಬಗ್ಗೆ ಮೊದಲು ಗೊತ್ತಿರಲಿಲ್ಲ ಎಂದಿದ್ದಾರೆ ನಿರ್ದೇಶಕ ಉಮೇಶ್.

FotoJet 1 12

ಎರಡೇ ವರ್ಷದಲ್ಲಿ ಪವಿತ್ರಾ ಕೋಟಿ ಕೋಟಿ ಒಡತಿಯಾಗಿದ್ದರು. ಅಂದು ನಾವು ನೋಡಿದ ಪವಿತ್ರನೇ ಬೇರೆ. ಈ ಥರ ಮಾಡಬಾರದಿತ್ತು. ರೇಣುಕಾಸ್ವಾಮಿ ಕೊಲೆ ತನಿಖೆ ಮಾಡ್ತಿದ್ದಾರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ. ತುಂಬಾನೇ ದೊಡ್ಡ ತಪ್ಪು ಮಾಡಿದ್ದಾರೆ. ಈ ತರ ಭೀಕರವಾಗಿ ಕೊಲೆ ಮಾಡಿದ್ದು ನೋಡಿದರೆ ನೋವಾಗುತ್ತದೆ ಎಂದಿದ್ದಾರೆ.

ದರ್ಶನ್ ಮತ್ತು ಪವಿತ್ರಾ ದೊಡ್ಡಸ್ತಿಕೆಯನ್ನ ಯಾವ ರೀತಿ ಮೆಂಟೇನ್ ಮಾಡಬಹುದಿತ್ತು. ಅಂದಿನ ಪವಿತ್ರಾನೇ ಬೇರೆ. ಅವರು ಘನತೆ ಗೌರವ ಸಂಪಾದನೆ ಮಾಡಿಲ್ಲ. ಹಣ ಆಸ್ತಿ ಮಾಡಿದ್ದಾರೆ ಅಷ್ಟೇ ಎಂದು ಪವಿತ್ರಾ ಬಗ್ಗೆ ಡೈರೆಕ್ಟರ್ ಉಮೇಶ್ ಗರಂ ಆಗಿಯೇ ಮಾತನಾಡಿದ್ದಾರೆ.

Share This Article