ಮಡಿಕೇರಿ: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ಅಲ್ ಖೈದಾ ಮುಖ್ಯಸ್ಥ ಮಸ್ಕಾನ್‍ನನ್ನು ಹೊಗಳಿದ ವೀಡಿಯೋ ಆರ್‍ಎಸ್‍ಎಸ್ ಬಿಡುಗಡೆ ಮಾಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಮುಖ್ಯಮಂತ್ರಿ ಆಗಿ ಒಳ್ಳೆಯ ಕೆಲಸ ಮಾಡಿದ್ದವರು. ಆದರೆ ಈಗ ರಾಜಕೀಯ ನಿವೃತ್ತಿ ಪಡೆದುಕೊಂಡರೆ ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ
Advertisement
Advertisement
ಮುಸಲ್ಮಾನ ಶಿಲ್ಪಿಗಳು ಕೆತ್ತಿದ ಮೂರ್ತಿಗಳ ತಿರಸ್ಕರಿಸುವಂತೆ ಒತ್ತಾಯಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೂರ್ತಿ ಕೆತ್ತನೆ ಬಗ್ಗೆ ಕುಮಾರಸ್ವಾಮಿ ಅವರ ಬಳಿಯೇ ಕೇಳಬೇಕು. ಅವರು ಕೂಡ ಸಿಎಂ ಆಗಿದ್ದವರು. ಈಗಾಗಲೇ ಕೆತ್ತನೆ ಆಗಿರುವ ವಿಗ್ರಹಗಳು ಪೂಜಿಸಲ್ಪಪಡುತ್ತಿವೆ. ಆದ್ದರಿಂದ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡಬೇಕು ಎಂದರು. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು
Advertisement
ಹಿಂದೂಪರ ಸಂಘಟನೆಗಳು ಮೂರ್ತಿ ತ್ಯಜಿಸುವಂತೆ ಒತ್ತಾಯಿಸುತ್ತಿರುವ ವಿಚಾರ ಹಿನ್ನೆಲೆ ಅದು ಹಿಂದಿನಿಂದಲೂ ವಿರೋಧ ಇದೆ. ಆ ವಿರೋಧ ಸದ್ಯಕ್ಕೆ ನಿಲ್ಲುವುದಿಲ್ಲ. ಇನ್ನು 10 ವರ್ಷಗಳಾದರೂ ಇರುತ್ತದೆ. ಇದರ ಬಗ್ಗೆ ರಾಜಕೀಯ ಮಾಡುವ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.
Advertisement
ಸಮಾಜದಲ್ಲಿ ಆಗುತ್ತಿರುವ ಗಲಭೆಗೆ ಸರ್ಕಾರ ಮಧ್ಯಸ್ಥಿಕೆ ವಹಿಸದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಎಲ್ಲದಕ್ಕೂ ಮಧ್ಯಸ್ಥಿಕೆ ವಹಿಸಲಾಗುವುದಿಲ್ಲ. ಅಂತಹ ಸಂದರ್ಭ ಬಂದರೆ ಮುಖ್ಯಮಂತ್ರಿಗಳೇ ಮಧ್ಯಸ್ಥಿಕೆ ವಹಿಸುತ್ತಾರೆ ಎಂದು ತಿಳಿಸಿದರು.