ಬೆಂಗಳೂರು: ಅರಣ್ಯ ಸಚಿವ ಉಮೇಶ್ ಕತ್ತಿ (Umesh Katti) ನಿಧನಕ್ಕೆ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಇದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಕತ್ತಿಯವರು ನಿಧನರಾಗಿದ್ದಾರೆ. ಸಾಯುವ ವಯಸ್ಸಾಗಿರ್ಲಿಲ್ಲ. ನನಗೆ ಒಳ್ಳೆಯ ಸ್ನೇಹಿತ ಎಂದು ಹೇಳಿದರು. ಶೋಕಾಚರಣೆ ಮೂರು ದಿನ ಮಾಡಬಹುದಿತ್ತು. ಯಾಕೆ ಒಂದೇ ದಿನ ಘೋಷಣೆ ಮಾಡಿದ್ದಾರೋ ಗೊತ್ತಿಲ್ಲ. ಅವರು ಸಿಟ್ಟಿಂಗ್ ಮಿನಿಸ್ಟರ್ ಆಗಿರೋರು. ಮೂರು ದಿನ ಘೋಷಿಸಬಹುದಿತ್ತು. ಸರ್ಕಾರ (Government) ಯಾಕೆ ಘೋಷಿಸಿಲ್ಲವೋ ಗೊತ್ತಿಲ್ಲ. ನಾನು ಅದರ ಬಗ್ಗೆ ಮಾತಾಡಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಸಚಿವ ಉಮೇಶ್ ಕತ್ತಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/22eyoLAba1
— Siddaramaiah (@siddaramaiah) September 7, 2022
Advertisement
ಕತ್ತಿ ನಿಧನಕ್ಕೆ ಸರ್ಕಾರ ರಾಜ್ಯಾದ್ಯಂತ ಇಂದು ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ಕತ್ತಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತಿದೆ ಎಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಆಪ್ತನ ನೆನೆದು ಕಣ್ಣೀರಿಟ್ಟ ಬೊಮ್ಮಾಯಿ – ತಲೆ ಸವರಿ ಭಾವುಕರಾದ ಸಿಎಂ
Advertisement
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/BcluGlfsp9
— Siddaramaiah (@siddaramaiah) September 6, 2022
Advertisement
ಸಾಮಾನ್ಯವಾಗಿ ಗಣ್ಯರ ನಿಧನ ಸಂದರ್ಭದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸುವ ಪದ್ಧತಿ ಇದೆ. ಈ ಹಿಂದೆ ಎಚ್ ಎಸ್ ಮಹಾದೇವ ಪ್ರಸಾದ್, ಅಂಬರೀಷ್, ಗಿರೀಶ್ ಕಾರ್ನಾಡ್, ಸಿದ್ದಗಂಗಾಶ್ರೀ, ಪೇಜಾವರ ಶ್ರೀ ಮುಂತಾದವರ ನಿಧನರಾದಾಗ ಮೂರು ದಿನ ಶೋಕಾಚರಣೆಯನ್ನು ಸರ್ಕಾರ ಘೋಷಿಸಿತ್ತು. ಆದರೆ ಈಗ ನಾಳೆಯ ಜನೋತ್ಸವಕ್ಕಾಗಿ ಒಂದೇ ದಿನ ಶೋಕಾಚರಣೆ ಘೋಷಿಸಿತಾ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.