DistrictsKarnatakaLatestMain PostTumakuru

ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು- ಕತ್ತಿ ನಿಧನಕ್ಕೆ ಆರಗ ಸಂತಾಪ

ತುಮಕೂರು: ಸಚಿವ ಉಮೇಶ್ ಕತ್ತಿಯವರು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು ಎಂದು ಹೇಳುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಉಮೇಶ್ ಕತ್ತಿ(Umesh Katti) ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ನಿಧನ ಅತ್ಯಂತ ದುಖವಾಗಿದೆ. ನನ್ನ ಆತ್ಮೀಯರಲ್ಲಿ ಒಬ್ಬರಾಗಿದ್ದರು. ಅನಾರೋಗ್ಯದ ಕಾರಣ ಕಳೆದ ಕ್ಯಾಬಿನೆಟ್ ಗೆ ಅವರು ಹಾಜರಾಗಿರಲಿಲ್ಲ ಎಂದರು. ಇದನ್ನೂ ಓದಿ: ಉಮೇಶ್ ಕತ್ತಿ ಇನ್ನಿಲ್ಲ – ನಿನ್ನೆ ರಾತ್ರಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಏನಾಯ್ತು?

ಅತ್ಯಂತ ಒಳ್ಳೆಯವರು ಮತ್ತು ಹಾಸ್ಯ ಪ್ರಜ್ಞೆ ಉಳ್ಳವರಾಗಿದ್ದರು. ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕೊಡಲಿ. ಅವರ ನಿಧನದಿಂದ ನನ್ನ ಎಲ್ಲಾ ಕೆಲಸ ಕಾರ್ಯ ರದ್ದು ಮಾಡಿದ್ದೇನೆ. ಜನೋತ್ಸವದ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯರು ನಿರ್ಧರಿಸುತ್ತಾರೆ ಎಂದು ಆರಗ ತಿಳಿಸಿದರು.

ಈಗ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಶೇ. 300-400 ಪ್ರಮಾಣಕ್ಕಿಂತ ಹೆಚ್ಚಾಗಿದೆ. 3 ಸಾವಿರ ಎಕರೆಯಷ್ಟು ಬೆಳೆಹಾನಿಯಾಗಿದೆ. ಇಲ್ಲಿಯವರೆಗೆ ಸುಮಾರು 10 ಜನ ಸಾವನಪ್ಪಿದ್ದಾರೆ ಎಂದು ಅವರು ಹೇಳಿದರು.

Live Tv

Leave a Reply

Your email address will not be published.

Back to top button