ವಿಜಯಪುರ: ಸಮ್ಮಿಶ್ರ ಸರ್ಕಾರ ಪತನದ ಕುರಿತು ಶಾಸಕ ಉಮೇಶ್ ಕತ್ತಿ ಹೇಳಿಕೆ ನೀಡಬಾರದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಟ್ಟು 104 ಜನ ಶಾಸಕರಿದ್ದೇವೆ. ಸರ್ಕಾರ ತಾನಾಗಿಯೇ ಪತನವಾದರೇ ಮಾತ್ರ, ಸರ್ಕಾರ ರಚನೆ ಮಾಡುವ ವಿಚಾರ ಮಾಡಬಹುದು. ಸಚಿವರು ಖಾತೆಗಾಗಿ ಕಿತ್ತಾಟ ನಡೆಸುತ್ತಿರುವುದು ಸರಿಯಲ್ಲ. ಹೀಗಾಗಿ ಸರ್ಕಾರ ಪತನ ಕುರಿತು ಉಮೇಶ್ ಕತ್ತಿ ಹೇಳಿಕೆ ನೀಡಬಾರದಿತ್ತು ಅಂತ ಹೇಳಿದ್ರು.ಇದನ್ನೂ ಓದಿ : 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನ – ಉಮೇಶ್ ಕತ್ತಿ
ಬೆಳಗಾವಿ ಅಧಿವೇಶನದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಷ್ಕ್ರೀಯವಾಗಿವೆ. ಇನ್ನಾದರೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಬೀಳದೇ ಇದ್ರೆ, ಕತ್ತಿ ರಾಜೀನಾಮೆ ಕೊಡಲಿ: ದಿನೇಶ್ ಗುಂಡೂರಾವ್
ಇದೇ ವೇಳೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ವಿರುದ್ಧ ದೇವೇಗೌಡ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಎಲ್ಲಿಂದ ಸ್ಪರ್ಧಿಸುತ್ತಾರೆ ನಮಗೆ ಸಂಬಂಧವಿಲ್ಲ. ನಾವು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುತ್ತೇವೆ ಎಂದರು. ಇದೇ ವೇಳೆ ನಾನೇನು ಸಿಎಂ ಆಗುತ್ತೇನೆಂದು ಎಲ್ಲಿಯೂ ಹೇಳಿಲ್ಲವೆಂದು, ಅವರಪ್ಪನಾಣೆ ಯಡಿಯೂರಪ್ಪ ಸಿಎಂ ಆಗಲ್ಲವೆಂದು ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv