DistrictsKarnatakaLatestMain PostMysuru

ಚಾಟಿ ಏಟು ನೀಡಲು ಕತ್ತಿ ಕೊಡುತ್ತಿದ್ದ ಹೇಳಿಕೆಗಳನ್ನು ನಾವು ಅರ್ಥ ಮಾಡಿಕೊಳ್ತಿರಲಿಲ್ಲ: ಪ್ರತಾಪ್ ಸಿಂಹ

ಮೈಸೂರು: ಬೆಂಗಳೂರಿನ ಆಳುವ ದೊರೆಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಅವರಿಗೆ ಚಾಟಿ ಏಟು ನೀಡಲು ಈ ರೀತಿ ಹೇಳುತ್ತಿದ್ದರು. ನಾವು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೇ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು.

ಸಚಿವ ಉಮೇಶ್ ಕತ್ತಿ (Umesh Katti) ನಿಧನ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ನೀಡುವಂತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಕತ್ತಿ ನೇರ ನುಡಿಯ ರಾಜಕಾರಣಿ. ಅವರ ಅಗಲಿಕೆಯಿಂದ ಉತ್ತರ ಕರ್ನಾಟಕ (Uttara Karnataka) ದ ದೊಡ್ಡ ಧ್ವನಿ ಹುದುಗಿ ಹೋಗಿದೆ. ಪ್ರತ್ಯೇಕ ರಾಜ್ಯ ಹೇಳಿಕೆ, ವಿಭಜನೆಯ ಪರ ಅಂತಾ ವಿವಾದವಾಗಿತ್ತು. ಅಭಿವೃದ್ದಿ ವಿಚಾರವಾಗಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದರು ಎಂದರು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ: ಸಚಿವ ಉಮೇಶ್ ಕತ್ತಿ

ಬೆಂಗಳೂರಿನ ಆಳುವ ದೊರೆಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಅವರಿಗೆ ಚಾಟಿ ಏಟು ನೀಡಲು ಈ ರೀತಿ ಹೇಳುತ್ತಿದ್ದರು. ನಾವು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೇ. ಕತ್ತಿ ಉತ್ತರ ಕರ್ನಾಟಕದ ಏಳಿಗೆ ಬಯಸುತ್ತಿದ್ದ ನಾಯಕ. ಅವರ ರೀತಿ ನೇರವಾಗಿ ಹೇಳುವ ನಾಯಕ ಮತ್ತೊಬ್ಬ ಸಿಗುವುದಿಲ್ಲ. ಅವರು ಅಭಿವೃದ್ದಿ ವಿಚಾರವಾಗಿ ಯಾರ ಮುಲಾಜಿಗೂ ಒಳಗಾಗದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನೋತ್ಸವ ಕಾರ್ಯಕ್ರಮ ನಿಗದಿಯಂತೆ ನಾಳೆ ನಡೆಯಲಿದೆ: ಸುಧಾಕರ್

ಉತ್ತರ ಕರ್ನಾಟಕ ಪ್ರಬಲ ಪ್ರತಿಪಾದಕನನ್ನು ಕಳೆದುಕೊಂಡಿದೆ. ಅವರ ಅಭಿವೃದ್ಧಿ ಕನಸಿನ ಕಡೆ ಎಲ್ಲಾ ರಾಜಕಾರಣಿಗಳು ಹೆಚ್ಚಿನ ಗಮನ ಕೊಡಬೇಕು. ಈ ಮೂಲಕ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ಸಂಸದರು ತಿಳಿಸಿದರು. ಇದನ್ನೂ ಓದಿ: ಸಕ್ಕರೆ ಉದ್ಯಮಕ್ಕೆ ಉಮೇಶ್ ಕತ್ತಿ ಕೊಡುಗೆ ಮರೆಯುವಂತಿಲ್ಲ: ಡಿ.ಕೆ ಶಿವಕುಮಾರ್

Live Tv

Leave a Reply

Your email address will not be published.

Back to top button