ಚಿಕ್ಕೋಡಿ: ಆಹಾರ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ತಮ್ಮ 62ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡರು.
Advertisement
ಉಮೇಶ್ ಕತ್ತಿ ಅವರ ಹುಟ್ಟುಹಬ್ಬಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಜನ ಸಾಕ್ಷಿಯಾದದ್ದು ವಿಶೇಷವಾಗಿತ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಉಮೇಶ್ ಕತ್ತಿ ಅವರ ಧರ್ಮ ಪತ್ನಿ, ಸಹೋದರ ರಮೇಶ್ ಕತ್ತಿ ಸೇರಿದಂತೆ ಕತ್ತಿ ಕುಟುಂಬಸ್ಥರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ
Advertisement
Advertisement
ಕ್ಷೇತ್ರದ ಸಾವಿರಾರು ಜನ ಪುಷ್ಪಗುಚ್ಛ ನೀಡಿ ಕತ್ತಿ ಅವರಿಗೆ ಶುಭಾಶಯ ಕೋರಿದರು. ಕತ್ತಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚಿನ ಜನರು ಆಗಮಿಸಿ ಭೋಜನ ಸವಿದರು. ಅದರ ಜೊತೆಗೆ ಕಬ್ಬಿನ ಹಾಲಿನ ವ್ಯವಸ್ಥೆ ಕೂಡ ಮಾಡಲಾಗಿತ್ತು.
Advertisement
ಮೈಸೂರಿನಿಂದ ಆಗಮಿಸಿದ್ದ ಕಲಾತಂಡಗಳಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಹುಕ್ಕೇರಿ ಮತಕ್ಷೇತ್ರದ ಜನರ ಆರ್ಶೀವಾದದಿಂದ 8 ಬಾರಿ ಉಮೇಶ್ ಕತ್ತಿ ಅವರು ಶಾಸಕರಾಗಿದ್ದಾರೆ. ಹೀಗಾಗಿ ಕ್ಷೇತ್ರದ ಜನರಿಗೆ ಭೋಜನ ವ್ಯವಸ್ಥೆ ಮಾಡುವುದರ ಜೊತೆಗೆ ಆರ್ಶೀವಾದ ಪಡೆಯುವುದಕ್ಕಾಗಿ ಈ ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ದಿಢೀರ್ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ಕೊಟ್ಟು ಕುತೂಹಲ ಕೆರಳಿಸಿದ ವಿಜಯೇಂದ್ರ