ಕಲಬುರಗಿ: ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕ್ಕಾಗಿ ಕಲಬುರಗಿ ವಿಮಾನ ನಿಲ್ದಾಣದಿಂದ ಹಲವು ಲೋಹದ ಹಕ್ಕಿಗಳು ಬೇರೆ-ಬೇರೆ ರಾಜ್ಯಗಳಿಗೆ ಹಾರಾಡುವಂತೆ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ ಹೇಳಿದರು.
ಸೋಮವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗೋವಾ-ಕಲಬುರಗಿ ವಯಾ ಹೈದ್ರಾಬಾದ್ ವಿಮಾನ ಹಾರಾಟವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಕಲಬುರಗಿ ಜಿಲ್ಲೆಯ ವೃದ್ಧರು, ರೋಗಿಗಳು ತುರ್ತು ಚಿಕಿತ್ಸೆಗಾಗಿ ಹೈದ್ರಾಬಾದಿಗೆ ಹಾಗೂ ಹೈದ್ರಾಬಾದ್‍ನಿಂದ ಬೆಂಗಳೂರಿಗೆ ತೆರಳಲು ಈ ವಿಮಾನ ಅನುಕೂಲಕರವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಕಸದ ಲಾರಿಗೆ ಮತ್ತೊಂದು ಬಲಿ – 39 ವರ್ಷದ ಮಹಿಳೆ ಸಾವು
Advertisement
Advertisement
ಹೈದ್ರಾಬಾದ್‍ನಿಂದ ಪವಿತ್ರ ಸ್ಥಳಗಳಾದ ಹಜ್, ಕಾಶಿ, ಅಯೋಧ್ಯಾ, ಅಮರನಾಥ್, ವೈಷ್ಣೋದೇವಿ ಹಾಗೂ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳಲು ಅನುಕೂಲಕರವಾಗಿದೆ. ನಮ್ಮ ಕಲಬುರಗಿ ಹಾಗೂ ವಿಭಾಗದ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
Advertisement
Advertisement
ಸರ್ಕಾರದ ಕೊರೊನಾ ನಿಯಮಗಳನ್ನು ಪಾಲಿಸಿ ವಿಮಾನದಲ್ಲಿ ಬಿಡಲು ತಿಳಿಸಿದರು. ವೃದ್ಧರಿಗೆ ಹಾಗೂ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕಾಗಿ ಸಿಬ್ಬಂದಿಗಳಿಗೆ ಸೂಚಿಸಬೇಕೆಂದು ಅವರು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಉಮೇಶ್ ಜಾಧವ ಅವರು ತಮ್ಮ ಮಗಳಾದ ಶ್ರದ್ದಾ ಜಾಧವ ಹಾಗೂ ಪ್ರಯಾಣಿಕರ ಜೊತೆ ಹೈದ್ರಾಬಾದಿಗೆ ಸದರಿ ವಿಮಾನದಲ್ಲಿ ಪ್ರಯಾಣ ಮಾಡಿದರು.
ಈ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ಯಶವಂತ್, ವಿ.ಗುರುಕರ್, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್.ಜ್ಞಾನೇಂದ್ರರಾವ್ ಹಾಗೂ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ