ನವದೆಹಲಿ: ಶಹಬಾದ್ ನಿಲ್ದಾಣದಲ್ಲಿ ಪ್ರಮುಖ ರೈಲುಗಳು ನಿಲುಗಡೆಗೆ ಅನುಮತಿ ನೀಡಬೇಕೆಂದು ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್‍ಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಮನವಿ ಮಾಡಿದ್ದಾರೆ.
ಇಂದು ದೆಹಲಿಯ ರೈಲು ಭವನದಲ್ಲಿ ಭೇಟಿಯಾದ ಅವರು, ಶಹಬಾದ್ ರೈಲ್ವೇ ನಿಲ್ದಾಣದಲ್ಲಿ ಹಲವು ರೈಲುಗಳು ನಿಲ್ಲಿಸದಿರುವುದರ ಬಗ್ಗೆ ಸಚಿವರ ಗಮನಕ್ಕೆ ತಂದರು.
Advertisement
Advertisement
ಕಲಬುರಗಿ ಮತ್ತು ವಾಡಿ ಜಂಕ್ಷನ್ ನಡುವೆ ಶಹಬಾದ್ ರೈಲು ನಿಲ್ದಾಣವಿದ್ದು ನಿತ್ಯ ನೂರಾರು ರೈಲುಗಳು ಸಂಚರಿಸುತ್ತಿದ್ದು ಬೆರೆಳೆಣಿಕೆಯ ರೈಲುಗಳು ಮಾತ್ರ ನಿಲುಗಡೆಗೊಳ್ಳುತ್ತಿವೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದ್ದು ಪ್ರಮುಖ ರೈಲುಗಳ ನಿಲ್ದಾಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಇಂಥಾ ನೋವು ಯಾರಿಗೂ ಬರಬಾರದು: ಶಿವ ರಾಜ್‌ಕುಮಾರ್
Advertisement
Met Shri @AshwiniVaishnaw ji Honble @RailMinIndia and discussed various issue pertaining to my constituency.
Minister has assured for the Restroration of Stoppage of many Trains at #Shahabad Railway Station. @BJP4India @BJP4Karnataka @GM_CRly @GMSWR @rlyhydka @Kalaburgivarthe pic.twitter.com/DMiqnNVA7p
— Dr. Umesh G Jadhav MPLS (@UmeshJadhav_BJP) November 1, 2021
Advertisement
ಇದಕ್ಕೆ ಸ್ಪಂದಿಸಿರುವ ಸಚಿವ ಅಶ್ವಿನಿ ವೈಷ್ಣವ್, ಕೂಡಲೇ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್