ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ, 3ನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅರ್ಧ ಶತಕ ಗಳಿಸಿದರು. 118 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ ಜಡೇಜಾ 51 ರನ್ ಗಳಿಸಿದರು. ಇತ್ತ ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಉಮೇಶ್ ಯಾದವ್ 5 ಭರ್ಜರಿ ಸಿಕ್ಸರ್ ನೊಂದಿಗೆ 31 ರನ್ ಗಳಿಸಿ ಔಟಾದರು.
ಟೀಂ ಇಂಡಿಯಾ ಪರ ರೋಹಿತ್ 212 ರನ್, ರಹಾನೆ 115 ರನ್ ಹಾಗೂ ಜಡೇಜಾರ ಅರ್ಧ ಶತಕ ನೆರವನಿಂದ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಜಡೇಜಾ ಔಟಾಗುತ್ತಿದಂತೆ ಆಗಮಿಸಿದ ಉಮೇಶ್ ಯಾದವ್ ಬಿರುಸಿನ ಭರ್ಜರಿ ಬ್ಯಾಟಿಂಗ್ ನಡೆಸಿದರು. 112 ಓವರಿನಲ್ಲಿ ತಾನು ಎದುರಿಸಿದ ಮೊದಲ ಎರಡು ಎಸೆತವನ್ನು ಸಿಕ್ಸರ್ ಗಟ್ಟಿದ ಯಾದವ್, ಆ ಬಳಿಕ 116ನೇ ಓವರಿನ 1, 3, 5ನೇ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದರು. ಇದೇ ಓವರಿನ 6ನೇ ಎಸೆತವನ್ನು ಸಿಕ್ಸರ್ ಗಟ್ಟುವ ಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು.
Advertisement
Innings Break!
That's it from the India innings as the Captain calls for a declaration.#TeamIndia 497/9d pic.twitter.com/Zva8hFaQaM
— BCCI (@BCCI) October 20, 2019
Advertisement
ಕೇವಲ 10 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ 310 ಸ್ಟ್ರೈಕ್ ನೊಂದಿಗೆ 31 ರನ್ ಗಳಿಸಿ ಔಟಾದರು. ಅಲ್ಲದೇ ಟೆಸ್ಟ್ ಪಂದ್ಯವೊಂದರಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿದ ಭಾರತದ 4ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ಸಚಿನ್, ಧೋನಿ, ಜಹೀರ್ ಖಾನ್ ಈ ಸಾಧನೆ ಮಾಡಿದ್ದರು. ವಿಶೇಷ ಎಂದರೆ ಉಮೇಶ್ ಮೊದಲ ಎಸೆತ ಮಾತ್ರವಲ್ಲದೇ 2ನೇ ಎಸೆತದಲ್ಲೂ ಸಿಕ್ಸರ್ ಸಿಡಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡರು. ಈ ಹಿಂದೆ 2013 ರಲ್ಲಿ ಸಚಿನ್ ಹಾಗೂ 1948 ರಲ್ಲಿ ಇಂಗ್ಲೆಂಡ್ ಆಟಗಾರ ಫೋಫಿ ವಿಲಿಯಮ್ಸ್ ಈ ಸಾಧನೆ ಮಾಡಿದ್ದರು.
Advertisement
That will be early Stumps on Day 2 after bad light stops play. SA 9/2 at close and trail by 488 runs #TeamIndia #INDvSA @Paytm pic.twitter.com/NqoXE9mWI1
— BCCI (@BCCI) October 20, 2019
Advertisement
ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 497 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ 9 ರನ್ ಗಳಿಗೆ ಆರಂಭಿಕ ಆಟಗಾರರಾದ ಡಿಕಾಕ್ ಹಾಗೂ ಎಲ್ಗರ್ ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ ಪರ ಉಮೇಶ್ ಯಾದವ್ ಮತ್ತು ಶಮಿ ತಲಾ 1 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾ ಪರ ಡುಪ್ಲೆಸಿಸ್ 1 ರನ್, ಜುಬೇರ್ ಹಮ್ಜಾ ಶೂನ್ಯ ರನ್ ಗಳಿಸಿ 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Players to hit two sixes off the first two balls they faced in a Test innings:
Foffie Williams vs ENG, 1948
Sachin Tendulkar vs AUS, 2013
UMESH YADAV vs SA, Today
6⃣6⃣0⃣1⃣6⃣0⃣6⃣0⃣6⃣ OUT#INDvSA pic.twitter.com/hYUN5jjRXn
— Doordarshan National दूरदर्शन नेशनल (@DDNational) October 20, 2019