ಬೆಂಗಳೂರು: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ. 2017ರಲ್ಲಿ ಬೆಂಗಳೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುವಾಗ ಪರಿಚಯವಾಗಿತ್ತು ಅಷ್ಟೇ ಎಂದು ಶಾಸಕ ಹ್ಯಾರಿಸ್ ಪುತ್ರ ಉಮರ್ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ.
Advertisement
ಬಿಟ್ ಕಾಯಿನ್ ಸಂಬಂಧ ಶ್ರೀಕಿಗೂ ಉಮರ್ ಗೂ ನಂಟಿದೆ ಎಂಬ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅನಗತ್ಯವಾಗಿ ನನ್ನ ಹೆಸರು ತರಲಾಗುತ್ತಿದೆ. ಕಾಲೇಜು ಟೈಂ ನಲ್ಲಿ ಗೊತ್ತಿತ್ತು. 2017 ರಲ್ಲಿ ಮಾಸ್ಟರ್ಸ್ ಸ್ಟಡಿಸ್ ಗೆ ಅಂತ ನಾನು ಲಂಡನ್ ಗೆ ಹೋಗಿದ್ದೆ. ಆ ಗ್ಯಾಪ್ ನಲ್ಲಿ ಏನಾಯ್ತು ಗೊತ್ತಿಲ್ಲ, ಆ ಬಳಿಕದಿಂದ ಟಚ್ ನಲ್ಲಿ ಇರಲಿಲ್ಲ ಎಂದಿದ್ದಾರೆ.
Advertisement
Advertisement
ಕಾಲೇಜೊಂದರಲ್ಲಿ ಶ್ರೀಕಿ ಪರಿಚಯ ಆಗಿತ್ತು. ಯಾರು ಬಂದ್ರೂ ಸ್ಮೈಲ್ ಮಾಡಿಕೊಂಡು, ಚೆನ್ನಾಗಿರ್ತಿದ್ವಿ. ಯಾರು ಹೇಗಿದ್ದಾರೆ ಅನ್ನೋದು ನಮ್ಗೆ ಗೊತ್ತಿರಲ್ಲ. ನಾವು 10 -15 ಜನ ಸೇರ್ತಿದ್ವಿ. ನಮ್ಮಪ್ಪ ಕಾಂಗ್ರೇಸ್ ಲೀಡರ್ ಅಂತ ಇದೀಗ ಅದರಲ್ಲಿ ನನ್ನ ಹೆಸರು ಮಾತ್ರ ಪ್ರಸ್ತಾಪ ಆಗಿದೆ ಎಂದರು. ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ
Advertisement
ಬಿಟ್ ಕಾಯಿನ್ ವಿಚಾರವಾಗಿ ಪೊಲೀಸರು ಕೂಡ ವಿಚಾರಣೆ ಕರೆದಿಲ್ಲ, ಮಾಹಿತಿನೂ ಕೇಳಿಲ್ಲ. ನಾನೇನು ತಪ್ಪು ಮಾಡಿಲ್ಲ, ಹೋಗೋಣ ಏನಾಗುತ್ತೋ ಆಗುತ್ತೆ ಎಂದು ಉಮರ್ ನಲಪಾಡ್ ತಿಳಿಸಿದ್ದಾರೆ.