– ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೋದವ್ರು ಜೇಬು ಖಾಲಿ ಮಾಡ್ಕೊಂಡಿದ್ದಾರೆ
ಮೈಸೂರು: ಒಬ್ರು ಹೇಳಿದ್ರೂ ನಿರ್ಮಾಪಕರು ಇದ್ರೆ ಸ್ಟಾರ್ ಆಗಲ್ಲ ಸಿನಿಮಾ ಆಗುತ್ತೆ ಅಂತ. ನಿರ್ಮಾಪಕರು, ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರನ್ನ ಹುಟ್ಟುಹಾಕಬಹುದು ಎಂದು ನಿರ್ಮಾಪಕ ಉಮಾಪತಿ (Umapathy Srinivas) ಮತ್ತೊಮ್ಮೆ ನಟ ದರ್ಶನ್ (Darshan) ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ನಿನ್ನೆ ಮೈಸೂರಲ್ಲಿ (Mysuru) ನಡೆದ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಡಿ. ಉಮಾಪತಿ ಪ್ರತಿ ಪದದಲೂ ದರ್ಶನ್‌ಗೆ ಟಾಂಗ್ ಕೊಟ್ಟರು. ಸ್ಟಾರ್‌ಗಳನ್ನ ಮಾಡುವುದು ನಿರ್ಮಾಪಕರು, ನಿರ್ದೇಶಕರು ಹಾಗೂ ಜನರು. ಒಂದು ಸಿನಿಮಾಗೆ ದೊಡ್ಡ ಸ್ಟಾರ್ ಅಂದ್ರೆ ಅದು ನಿರ್ಮಾಪಕರು ಹಾಗೂ ನಿರ್ದೇಶಕ (Director) ಮಾತ್ರ ಎಂದು ನಟ ದರ್ಶನ್ ಹೆಸರು ಹೇಳದೇ ಟಾಂಗ್ ಕೊಟ್ಟರು. ಇದನ್ನೂ ಓದಿ: ಮದುವೆ ಮಂಟಪದಲ್ಲಿ ಚಿಕನ್ ಫ್ರೈಗಾಗಿ ಗಂಡು, ಹೆಣ್ಣಿನವರ ಮಧ್ಯೆ ಗಲಾಟೆ – ಪರಸ್ಪರ ಹಲ್ಲೆ, ಓರ್ವ ಆಸ್ಪತ್ರೆಗೆ ದಾಖಲು
ಒಬ್ಬರು ಹೇಳಿದ್ರು ನಿರ್ಮಾಪಕರು ಇದ್ರೆ ಸ್ಟಾರ್ ಆಗಲ್ಲ ಸಿನಿಮಾ (Cinema) ಆಗುತ್ತೆ ಅಂತ, ನಿರ್ಮಾಪಕರು ನಿರ್ದೇಶಕರು ಸೇರಿದಾಗ ಮಾತ್ರ ಸ್ಟಾರನ್ನ ಹುಟ್ಟುಹಾಕಬಹುದು ಎಂದರು. ಇದನ್ನೂ ಓದಿ: ಬಿಜೆಪಿ ಮುಖಂಡನ ಹತ್ಯೆ ಕೇಸ್‌ಗೆ ಟ್ವಿಸ್ಟ್ – ಕೊಲೆಯ ಮಾಸ್ಟರ್ ಮೈಂಡ್‌ಗೆ ಮಾಹಿತಿ ನೀಡಿದ್ದ ಇಬ್ಬರು ಆಪ್ತರು ಅರೆಸ್ಟ್
ಸಿನಿಮಾ ಸ್ಟಾರ್ ಆದ ಮೇಲೆ ಅನ್ನದಾತರು ಬೇಕಾದಷ್ಟು ಜನರು ಆಗಿಬಿಡುತ್ತಾರೆ. ಆಮೇಲೆ ನಿರ್ಮಾಪಕರನ್ನ ಬಿಟ್ಟು ಫ್ಯಾನ್ ಕ್ಲಬ್ ಗಳನ್ನು ಕಟ್ಟಿಕೊಳ್ಳುತ್ತಾರೆ. ಒಂದಷ್ಟು ಕ್ಯಾಂಪೇನ್‌ಗಳಿಗೆ ಕರೆದುಕೊಂಡು ಹೋಗಿ ಅನ್ನ ಹಾಕಿದ್ರೆ ಅವರನ್ನು ಅನ್ನದಾತರು ಅಂತಾರೇ. ಪ್ರತಿ ನಿತ್ಯ ಅನ್ನ ಕೊಡುವವರು ಅನ್ನದಾತರು. ವರ್ಷಕ್ಕೆ ಒಂದು ಬಾರಿ ಅನ್ನ ಹಾಕುವವರು ಯಾವತ್ತು ಅನ್ನದಾತರು ಆಗಲು ಸಾಧ್ಯವಿಲ್ಲ ಎಂದು ಕುಟುಕಿದರು. ಇದನ್ನೂ ಓದಿ: ರಾಹುಲ್ ಮುಂದೆ ಸಂಪುಟ ಪುನಾರಚನೆ ಕ್ಲೈಮ್ – ಸಿದ್ದರಾಮಯ್ಯ ಕೊಟ್ಟ ಸುಳಿವು ಏನು?
ʻದಿನದ ಕೂಳನ್ನ ನಂಬಿಕೊಂಡು ವರ್ಷದ ಕೂಳನ್ನ ಕಳೆದುಕೊಂಡ್ರುʼ ಎಂಬ ನಿದರ್ಶನ ನಿಮ್ಮ ಮುಂದೆ ಇದೆ ಎಂದು ದರ್ಶನ್ ಚುನಾವಣಾ ಕ್ಯಾಂಪೇನ್‌ಗಳ ಬಗ್ಗೆ ವ್ಯಂಗ್ಯವಾಡಿದರು. ನಾನು ಯಾರ ಬಳಿಯಾದ್ರೂ ಸಹಾಯ ತೆಗೆದುಕೊಂಡ್ರೆ ಹತ್ತು ಜನದ ಮುಂದೆ ಹೇಳುತ್ತೇನೆ. ಸಹಾಯ ಮಾಡಿದವರನ್ನ ಸಾಯುವವರೆಗೆ ನೆನಪು ಮಾಡಿಕೊಳ್ಳುತ್ತೇನೆ. ಸಹಾಯ ತೆಗೆದುಕೊಂಡು ಮೇಲೆ ನಾವು ಮರೆಯಬಾರದು. ಕೃತಜ್ಞತೆಯನ್ನು ಮರೆತರೆ ಜೀವನಕ್ಕೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.
ತಮ್ಮ ಮುಂದಿನ ಚಿತ್ರ ನಿರ್ಮಾಣದ ಕುರಿತ ಪ್ರಶ್ನೆಗೆ, ಸದ್ಯದಲ್ಲೇ ಇಬ್ಬರು ಹೀರೋ ಜೊತೆ ಸಿನಿಮಾ ಮಾಡುತ್ತೇನೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ. ಪ್ಯಾನ್ ಇಂಡಿಯಾ ಮಾಡಲು ಹೋದವರು ಜೇಬು ಖಾಲಿಮಾಡಿಕೊಂಡು ಬಂದಿದ್ದಾರೆ. ಎಷ್ಟೇ ಆದರೂ ಹಳೇ ಹೆಂಡತಿಯ ಪಾದವೇ ಗತಿ ಎಂಬಂತೆ ನಮಗೆ ಕರ್ನಾಟಕ ಜನನೇ ಗಟ್ಟಿ ಎಂದರು.



