ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದಲೇ ನೈತಿಕ ಪೊಲೀಸ್ ಗಿರಿ (Moral Policing) ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಕೂರಲು ಅನುಮತಿ ಬೇಕಾ ಎಂಬ ಪ್ರಶ್ನೆಯೊಂದು ಎದ್ದಿದೆ.
https://twitter.com/ArshaLatif/status/1619927669898100736
Advertisement
ಹೌದು. ಶನಿವಾರ ಮಧ್ಯಾಹ್ನದ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ವೈಟ್‍ಫೀಲ್ಡ್ (Whitefield) ಕುಂದಲಹಳ್ಳಿ ಪಾರ್ಕ್ (Kundalahalli Park) ನಲ್ಲಿ ಕುಳಿತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಪೇದೆ, ಇಲ್ಲಿ ಹಾಗೇ ಕುಳಿತುಕೊಳ್ಳುವ ಹಾಗಿಲ್ಲ ಅಂತಾ ಫೊಟೋ ತೆಗೆದುಕೊಂಡಿದ್ದಾರೆ. ಅಲ್ಲದೆ 1 ಸಾವಿರ ದಂಡ ಹಾಕಿದ್ದಾರಂತೆ. ಇದೀಗ ಹಣ ಪಡೆದ ಪೇದೆ ವಿರುದ್ಧ ಹಾಗೂ ಪೇದೆ ಬಂದಿದ್ದ ಬೈಕ್ ಫೋಟೋ ಸಮೇತ ಟ್ಯಾಗ್ ಮಾಡಿ ಯುವತಿ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದಾರೆ.
Advertisement
When we asked what we had done wrong, he said you are not allowed to sit here without permission & you may be smoking here. We told him we don't have any cigarettes & we're just sitting here peacefully but he kept on interrogating us as to what the two of us were up to (3/6)
— Arsha Latif (@ArshaLatif) January 30, 2023
Advertisement
ಯುವತಿ ಟ್ವಿಟ್ಟರ್ (Twitter) ನಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದೇನು..?: ನಾನು ಬೆಂಗಳೂರಿಗೆ ಭೇಟಿ ನೀಡಿದಾಗ ಆಘಾತಕಾರಿ ಅನುಭವ ಆಯ್ತು. ಜನವರಿ 29 ರಂದು ಮಧ್ಯಾಹ್ನ, ನಾನು, ನನ್ನ ಸ್ನೇಹಿತ ವೈಟ್ ಫೀಲ್ಡ್ ಬಳಿಯ ಕುಂದಲಗಳ್ಳಿ ಕೆರೆಗೆ ಭೇಟಿ ನೀಡಿದ್ದವು. ಅಲ್ಲಿ ನೆರಳಿನಲ್ಲಿ ಕುಳಿತು, ಪ್ರಕೃತಿ ವಿಕ್ಷಣೆ ಮಾಡುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಒಬ್ಬರು ನಮ್ಮ ಫೋಟೋಗಳನ್ನು ತೆಗೆಯೋದಕ್ಕೆ ಶುರುಮಾಡಿದರು. ಇಲ್ಲಿ ಕುಳಿತುಕೊಳ್ಳಲು ಅನುಮತಿ ಇಲ್ಲ, ಹೇಗೆ ಒಳಗೆ ಬಂದಿದ್ದೀರಿ, ನಡೀರಿ ಪೊಲೀಸ್ ಠಾಣೆಗೆ ಅಂತಾ ಕಿರುಕುಳ ನೀಡಲು ಪ್ರಾರಂಭಿಸಿದರು. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಬಂದು ಮಹಿಳೆಗೆ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
Advertisement
Why did this cop think he holds a right to harass two people like this for 'sitting without permission' at a public lake & extract money simply because they aren't of the same gender? Attaching a picture of his number plate, requesting @BlrCityPolice to pls take action (6/6)
— Arsha Latif (@ArshaLatif) January 30, 2023
ಕೊನೆಗೆ ನಮ್ಮ ಬಳಿ ಒಂದು ಸಾವಿರ ಹಣ ತೆಗೆದುಕೊಂಡು ಅಲ್ಲಿಂದ ಕಳುಹಿಸಿದರು. ಈ ಘಟನೆಯಿಂದ ನಮಗೆ ದಿಗ್ಭ್ರಮೆಯಾಗಿದೆ. ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‍ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕು..? ಸಾರ್ವಜನಿಕ ಕೆರೆಯೊಂದರಲ್ಲಿ `ಅನುಮತಿ ಇಲ್ಲದೆ ಕುಳಿತಿದ್ದಕ್ಕಾಗಿ’ ಇಬ್ಬರಿಗೆ ಕಿರುಕುಳ ನೀಡುವ ಹಕ್ಕು ಮತ್ತು ಅವರು ಒಂದೇ ಲಿಂಗದವರಲ್ಲ ಎಂಬ ಕಾರಣಕ್ಕಾಗಿ ಹಣವನ್ನು ಪಡೆದುಕೊಳ್ಳುವ ಹಕ್ಕು ತನಗೆ ಇದೆ ಎಂದು ಈ ಪೊಲೀಸರು ಏಕೆ ಭಾವಿಸಿದರು..? ಅವರ ನಂಬರ್ ಪ್ಲೇಟ್‍ನ ಚಿತ್ರವನ್ನು ಲಗತ್ತಿಸಲಾಗಿದೆ. @BIrCityPolice ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k