ಮಾಸ್ಕೋ: ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರ (Volodymyr Zelensky) ವಿರುದ್ಧ ರಷ್ಯಾ (Russia) ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಅವರನ್ನು ವಾಂಟೆಡ್ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಫೆಬ್ರವರಿ 2022 ರಲ್ಲಿ ಉಕ್ರೇನ್‍ನೊಂದಿಗೆ ಯುದ್ಧ ಪ್ರಾರಂಭವಾದಾಗಿನಿಂದ ರಷ್ಯಾ, ಉಕ್ರೇನ್ ಮತ್ತು ಇತರ ಯುರೋಪಿಯನ್ ರಾಜಕಾರಣಿಗಳ ಬಂಧನಕ್ಕೆ ವಾರಂಟ್‍ಗಳನ್ನು ಹೊರಡಿಸಿದೆ. ಈಗಾಗಲೇ ಎಸ್ಟೋನಿಯಾದ ಪ್ರಧಾನಿ ಕಾಜಾ ಕಲ್ಲಾಸ್, ಲಿಥುವೇನಿಯಾದ ಸಂಸ್ಕೃತಿ ಮಂತ್ರಿ ಮತ್ತು ಹಿಂದಿನ ಲಟ್ವಿಯನ್ ಸಂಸತ್ತಿನ ಸದಸ್ಯರನ್ನು ವಾಂಟೆಡ್ ಪಟ್ಟಿಗೆ ಸೇರಿಸಿದ್ದಾರೆ.
ಕಳೆದ ವರ್ಷ ಯುದ್ಧಾಪರಾಧದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ (Vladimir Putin) ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ಬಂಧನದ ವಾರಂಟ್ ಹೊರಡಿಸಿತ್ತು.
ಇಲ್ಲಿಯವರೆಗೂ ಎರಡು ದೇಶಗಳ ನಡುವಿನ ಯುದ್ಧದಲ್ಲಿ 1,12,000 ರಷ್ಯಾದ ಸೈನಿಕರು ಸಾವಿಗೀಡಾಗಿದ್ದಾರೆ. 1,70,000 ದಿಂದ 1,80,000 ವರೆಗೆ ಸೈನಿಕರು ಗಾಯಗೊಂಡಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‍ನಲ್ಲಿ 70,000 ದಿಂದ 1,00,000 ವರೆಗೆ ಸೈನಿಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮೆರಿಕದ ಅಂಕಿ ಅಂಶಗಳನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.