ಕೀವ್: ಉಕ್ರೇನ್‍ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ, ಸೋಶಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೋಗಳು ಹರಿದಾಡುತ್ತಿದೆ. ಅಲ್ಲದೆ ಯುದ್ಧದಿಂದ ತತ್ತರಿಸಿದ ಜನರು ದಿನಕ್ಕೊಂದು ವೀಡಿಯೋ ಎಂಬಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ವೀಡಿಯೋ ವೈರಲ್ ಆಗಿದೆ.
ಉಕ್ರೇನ್ ರೈತನೊಬ್ಬ ತನ್ನ ಟ್ರಾಕ್ಟರ್ ಓಡಿಸುತ್ತ ಬಂದು ದಾರಿಯಲ್ಲಿದ್ದ ರಷ್ಯಾದ ಮಿಲಿಟರಿ ಟ್ಯಾಂಕ್ ಕದಿಯಲು ಪ್ರಯತ್ನಿಸುತ್ತಾನೆ. ಆಗ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಟ್ಯಾಂಕ್‍ನನ್ನು ಹಿಂಬಲಿಸುತ್ತ ಹಿಂದೆ ಓಡಿ ಹೋಗುವುದನ್ನು ವೀಡಿಯೋದಲ್ಲಿ ನಾವು ಗಮನಿಸಬಹುದು. ಇದನ್ನೂ ಓದಿ: ಪುರುಷನ ವೇಷಧರಿಸಿ ಕಳ್ಳತನ ಮಾಡಲು ಬಂದ ಯುವತಿ ಅರೆಸ್ಟ್!
https://twitter.com/OSICnick/status/1498022940759240717
ಪ್ರಸ್ತುತ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ವೀಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಈ ವೀಡಿಯೋವನ್ನು ಕೆಲವರು ಕಾಮಿಡಿಯಾಗಿ ತೆಗೆದುಕೊಂಡರೆ ಮತ್ತೆ ಕೆಲವರು ವಿರೋಧಿಸಿದ್ದಾರೆ.
ಈ ವೀಡಿಯೊವನ್ನು ಬ್ರಿಟಿಷ್ ಕನ್ಸರ್ವೇಟಿವ್ ರಾಜಕಾರಣಿ ಮತ್ತು ಪ್ಲೈಮೌತ್ ಮೂರ್ ವ್ಯೂನ ಸಂಸತ್ ಸದಸ್ಯ ಜಾನಿ ಮರ್ಸರ್ ಟ್ವಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಟ್ವಟ್ಟರ್ ನಲ್ಲಿ ಅವರು, ಯಾವುದೇ ಪರಿಣಿತರು ಇಲ್ಲ. ಆದರೆ ಯುದ್ಧವು ಸರಿಯಾಗಿ ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ. ಉಕ್ರೇನಿಯನ್ ಟ್ರಾಕ್ಟರ್ ಇಂದು ರಷ್ಯಾದ ಟ್ಯಾಂಕ್ ಕದಿಯುತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋವನ್ನು 4.6 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
If true, it’s probably the first tank ever stolen by a farmer… ))
Ukrainians are tough cookies indeed. #StandWithUkraine #russiagohome pic.twitter.com/TY0sigffaM
— olexander scherba???????? (@olex_scherba) February 27, 2022
2014 ರಿಂದ 2021 ರವರೆಗೆ ಆಸ್ಟ್ರಿಯಾದಲ್ಲಿ ಉಕ್ರೇನ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಒಲೆಕ್ಸಾಂಡರ್ ಶೆರ್ಬಾ ಅವರು ವೀಡಿಯೊವನ್ನು ಹಂಚಿಕೊಂಡಿದ್ದು, ಉಕ್ರೇನಿಯನ್ನರು ನಿಜವಾಗಿಯೂ ಅಸಾಧ್ಯರು ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: CBI ಎಂದು ಸುಳ್ಳು ಹೇಳಿ ಲಕ್ಷಾಂತರ ರೂ. ಹಣ, ಕೆಜಿಗಟ್ಟಲೆ ಚಿನ್ನದೋಚಿದರು!
ವೀಡಿಯೋ ನೋಡಿದ ನೆಟ್ಟಿಗರು ನಗುವಿನ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ. ಇದನ್ನು ಮಸ್ತಿ ಎಂಬಂತೆ ಎಷ್ಟೋ ಜನರು ನೋಡುತ್ತಿದ್ದಾರೆ. ಉಕ್ರೇನ್ ಜನರು ಧೈರ್ಯಶಾಲಿಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕೆಲವರು ಇದು ತಮಾಷೆಯಲ್ಲ ಎಂದು ಬರೆದುಕೊಂಡಿದ್ದಾರೆ.