ಮಂಗಳೂರು: ತುಳುನಾಡಿನ ಆರಾದ್ಯ ದೈವ ಕೊರಗಜ್ಜ (Koragajja) ನ ಪವಾಡ ಮತ್ತೊಮ್ಮೆ ಸುದ್ದಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇದೀಗ ಆ ಕುಟುಂಬ ಅಜ್ಜನಿಗೆ ಹರಕೆಯನ್ನು ತೀರಿಸಿದೆ.
ಹೌದು. ಕೆಲ ದಿನಗಳ ಹಿಂದೆ ಉಕ್ರೇನ್ (Ukraine) ನ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಭಾರತ ಪ್ರವಾಸ ಕೈಗೊಂಡಿದ್ದು, ಅಂತೆಯೇ ಉಡುಪಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಗೋಶಾಲೆಯೊಂದಕ್ಕೆ ಭೇಟಿ ಕೊಟ್ಟಾಗ ಅಲ್ಲಿ ನಾಡಿ ನೋಡಿ ಔಷಧಿ ಕೊಡುವ ಭಕ್ತಿಭೂಷಣ್ ದಾಸ್ ಪ್ರಭುಜಿ ಅವರನ್ನು ಕುಟುಂಬ ಭೇಟಿಯಾಗಿದೆ. ಇದೇ ವೇಳೆ ಆ್ಯಂಡ್ರೂ ತಮ್ಮ ಮನಗ ಅನರೋಗ್ಯ (Health) ದ ಬಗ್ಗೆ ಅವರಿಗೆ ತಿಳಿಸಿದ್ದರು. ಇದನ್ನೂ ಓದಿ: ಕೊರಗಜ್ಜನಿಗೆ ಅವಮಾನ ಮಾಡಿದ್ದ ಉಮರುಲ್ಲಾ ಬಾಷಿತ್ ಅರೆಸ್ಟ್
Advertisement
Advertisement
ಆ್ಯಂಡ್ರೂ ಕಷ್ಟ ಅರಿತ ಪ್ರಭುಜಿ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ಅಂತೆಯೇ ಕುಟುಂಬ ಬಂಟ್ವಾಳದ ಕೊಡ್ಮಾಣ್ ಸಮೀಪದ ಗೋವಿನ ತೋಟದ ಶ್ರೀರಾಧಾ ಸುರಭೀ ಗೋ ಮಂದಿರಲ್ಲಿ ವಾಸ್ತವ್ಯ ಹೂಡಿತ್ತು. ಜೊತೆಗೆ ಮಗನಿಗೆ ದೇಸಿ ದನದ ವಿಹಾರದ ಜೊತೆಗೆ ನಾಟಿ ಚಿಕಿತ್ಸೆ ಆರಂಭಿಸಲಾಯಿತು.
Advertisement
ಇಷ್ಟು ಮಾತ್ರವಲ್ಲದೆ ಇತ್ತ ಕೊರಗಜ್ಜನ ಮುಂದೆ ಚಿಕಿತ್ಸೆಯಿಂದ ಮಗನನ್ನು ಸಂಪೂರ್ಣ ಗುಣಮುಖನಾಗುವಂತೆ ಮಾಡಲು ಕೋರಲಾಯಿತು. ಇದೀಗ ಮಗನ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಕುಟುಂಬ ಕೊರಗಜ್ಜನಿಗೆ ಅಗೆಲು ಸೇವೆ ನೀಡಿತು. ಇದನ್ನೂ ಓದಿ: ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ
Advertisement
ಕೊರಗಜ್ಜನಿಗೆ ಅಗೆಲು ಕೊಡುವ ಸಂದರ್ಭದಲ್ಲಿ ಭಕ್ತಿಭೂಷಣ್ ದಾಸ್ ಪ್ರಭುಜಿ, ಪದ್ಮನಾಭ ಗೋವಿನ ತೋಟ, ನವೀನ್ ಮಾರ್ಲ, ಯಾದವ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.